ಬೆಂಗಳೂರು : ನಿಮಗೆ ಗೊತ್ತಿರಬಹುದು. ಮನೆಯಲ್ಲಿ ಹಿರಿಯರಿದ್ದರೆ ರಾತ್ರಿ ಕ್ಷೌರ (hair cut) ಮಾಡಿಸಿಕೊಳ್ಳಲು ಬಿಡಲ್ಲ. ಮಂಗಳವಾರ ಸಾಮಾನ್ಯವಾಗಿ ಹೇರ್ ಕಟ್ ಮಾಡಿಸಿಕೊಳ್ಳಲ್ಲ. ಹಿಂದೂ ಸಂಸ್ಕೃತಿಯ ನಂಬಿಕೆಗಳ ಪ್ರಕಾರ ಕ್ಷೌರಕ್ಕೆ ಕೆಲವೊಂದು ದಿನ ಶುಭ ಅಲ್ಲ. ಇಂದಿನ ದಿನಮಾನಗಳಲ್ಲಿ ಭಾನುವಾರ (Sunday) ರಜೆ ಇರುತ್ತದೆ ಹಾಗಾಗಿ ಭಾನುವಾರವೇ ಹೆರ್ ಕಟ್, ದಾಡಿ ಮಾಡಿಸಿಕೊಂಡು ಬಿಡುತ್ತೇವೆ. ಆದರೆ, ನಾವು ಹೇಳುವ ಈ ಮಾತು ಕೇಳಿದರೆ ನೀವು ದಂಗಾಗಿ ಬಿಡುತ್ತೀರಿ.
ಹೇರ್ ಕಟ್, (hair cut) ಶೇವ್ ಮತ್ತು ಉಗುರು ಕತ್ತರಿಸಲು ವಾರದ ಏಳು ದಿನಗಳಲ್ಲಿ ಕೆಲವು ದಿನ ಮಾತ್ರ ಶುಭ. ಉಳಿದವು ಅಶುಭ. ಹಿಂದೂ ನಂಬಿಕೆಗಳ ಪ್ರಕಾರ ವಾರದ ಯಾವ ದಿನ ಕ್ಷೌರ ಮಾಡಿಸಿಕೊಂಡರೆ ಶುಭ, ಇಲ್ಲಿದೆ ಮಾಹಿತಿ.
1. ಭಾನುವಾರ : ಗೊತ್ತಿರಲಿ ನಂಬಿಕೆಗಳ ಪ್ರಕಾರ ಭಾನುವಾರ (Sunday) ಹೇರ್ ಕಟ್ ಮಾಡಿದರೆ ಧನ ಹಾನಿ, ಧರ್ಮ ನಷ್ಟ ಆಗುತ್ತದೆಯಂತೆ. ನಾವೆಲ್ಲಾ ಸಾಮಾನ್ಯವಾಗಿ ಹೇರ್ ಕಟ್ ಮಾಡೋದು ಭಾನುವಾರವೇ..!
ಇದನ್ನೂ ಓದಿ : Monday Fasting: ಸೋಮವಾರ 'ಉಪವಾಸ ವ್ರತ' ಮಾಡುವುದರಿಂದ ಸಂಪತ್ತು ಪ್ರಾಪ್ತಿ!
2. ಸೋಮವಾರ: ಸೋಮವಾರ ಕ್ಷೌರ ಮಾಡಿದರೆ ಮಕ್ಕಳಿಗೆ (Kids) ಸಂಕಷ್ಟವಾಗುತ್ತದೆಯಂತೆ. ಮಾನಸಿಕ ಕ್ಷೋಭೆಗೂ ಕಾರಣವಾಗಬಹುದು.
3. ಮಂಗಳವಾರ : ಮಂಗಳವಾರದ ದಿನ ಎಲ್ಲಾ ಸೆಲೂನುಗಳು (Saloon) ಬಂದ್ ಇರುತ್ತವೆ. ಕ್ಷೌರ ಸಾಮಾನ್ಯವಾಗಿ ಯಾರೂ ಮಾಡಲ್ಲ. ಮಂಗಳವಾರ (Tuesday) ಕ್ಷೌರ ಮಾಡಿಸಿಕೊಂಡರೆ ಅಕಾಲ ಮೃತ್ಯು, ಆಯುಷ್ಯ ಕಡಿಮೆಯಾಗುತ್ತದೆಯಂತೆ.
4. ಬುಧವಾರ : ಹೇರ್ ಕಟ್ ಮಾಡಲು, ಉಗುರು ಕತ್ತರಿಸಲು ಬುಧವಾರ ಶುಭ ದಿನವಂತೆ. ಆರೋಗ್ಯ (Health) , ಧನ, ಧಾನ್ಯ ವೃದ್ದಿಯಾಗುತ್ತದೆಯಂತೆ
ಇದನ್ನೂ ಓದಿ : Jatoli Shiva Temple: ಈ ಸ್ಫಟಿಕ ಮಣಿ ಶಿವಲಿಂಗದ ದೇವಸ್ಥಾನಕ್ಕಿದೆ 11 ಅಡಿ ಎತ್ತರದ ವಿಶಾಲ ಚಿನ್ನದ ಕಳಸ
5. ಗುರುವಾರ : thursday ಕ್ಷೌರ ಮಾಡಿಸಿಕೊಂಡರೆ ಧನ ಹಾನಿ, ಸಂಪತ್ತಿನ ಹಾನಿ ಉಂಟಾಗುತ್ತದೆಯಂತೆ. ಮಾನ ಸಮ್ಮಾನಕ್ಕೂ ಚ್ಯುತಿ ಉಂಟಾಗಬಹುದು.
6. ಶುಕ್ರವಾರ : Friday ಹೇರ್ ಕಟ್, ಶೇವ್ ಮತ್ತು ಉಗುರು ಕತ್ತರಿಸಲು (Nail) ಪ್ರಶಸ್ತ ದಿನವಂತೆ. ಇದರಿಂದ ಧನ ಲಾಭ, ಕೀರ್ತಿ ಲಾಭ, ಯಶಸ್ಸು ಉಂಟಾಗುತ್ತದೆಯಂತೆ
7. ಶನಿವಾರ : ಶನಿವಾರ (Saturday) ಕ್ಷೌರಕ್ಕೆ ತುಂಬಾ ಕೆಟ್ಟದಿನವಂತೆ. ಅಕಾಲ ಮೃತ್ಯು ಬಾಧಿಸುತ್ತದೆಯಂತೆ.
ಕ್ಷೌರಕ್ಕೆ ಯಾವ ದಿನ ಶುಭ, ಅಶುಭ ಅನ್ನೋದು ಸಂಪೂರ್ಣವಾಗಿ ನಂಬಿಕೆಗೆ ಸೇರಿದ ವಿಚಾರ. ಈ ಕುರಿತ ವೈಜ್ಞಾನಿಕ ಚರ್ಚೆ, ತರ್ಕ ಇದ್ದೇ ಇದೆ. ಇದು ನಂಬಿಕೆಯ ವಿಚಾರವಾಗಿರುವುದರಿಂದ ನಂಬುವುದು, ಬಿಡುವುದು ನಿಮ್ಮ ತರ್ಕಕ್ಕೆ ಬಿಟ್ಟಿದ್ದು.
ಇದನ್ನೂ ಓದಿ : Salt Vaastu Tips: ಮನೆಯಲ್ಲಿ 'ನೆಗಟಿವ್ ಎನರ್ಜಿ' ತೆಗೆದು ಹಾಕಲು ಉಪ್ಪಿನ ವಾಸ್ತು ಪರಿಹಾರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.