ಬೆಂಗಳೂರು : ಹಿಂದೂ ಧರ್ಮದ ಮಹಾಪರ್ವ ಮಹಾಶಿವರಾತ್ರಿ (Mahashivaratri). ದೇಶಾದ್ಯಂತ ಭಕ್ತರು ಮಹಾಶಿವರಾತ್ರಿ ಆಚರಿಸುತ್ತಾರೆ. ನಿಮಗೆ ಗೊತ್ತಿರಲಿ, ಭಾರತ ಅಷ್ಟೇ ಅಲ್ಲ ನೇಪಾಳ, ಬಂಗ್ಲಾದೇಶ, ಗಯಾನ, ಮಾರಿಷಸ್, ಮ್ಯಾನ್ಮಾರ್, ಟ್ರಿನಿಡಾಡ್, ಟ್ಯೊಬಾಗೋ, ದಕ್ಷಿಣ ಆಫ್ರೀಕಾಗಳಲ್ಲೂ ಮಹಾಶಿವರಾತ್ರಿ ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿಶ್ವರಾಷ್ಟ್ರಗಳಲ್ಲಿ ಭಾರತೀಯರು ಎಲ್ಲೆಲ್ಲಿ ನೆಲೆಸಿದ್ದಾರೋ ಅಲ್ಲೇಲ್ಲಾ ಶಿವರಾತ್ರಿ ಆಚರಿಸಲಾಗುತ್ತದೆ.
ಮಹಾಶಿವನ ಪೂಜೆಗೆ ಶುಭ ಮುಹೂರ್ತ ಯಾವುದು.? :
ಹಿಂದೂ ಪಂಚಾಂಗದ ಪ್ರಕಾರ ಪ್ರತಿವರ್ಷ ಪಲ್ಗುಣ ಮಾಸದ ಚರ್ತುದಶಿಯಂದು ಶಿವರಾತ್ರಿ (Shivaratri) ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 11ರಂದು ಮಹಾಶಿವರಾತ್ರಿ ಆಚರಿಸಲಾಗುತ್ತದೆ.
ಇದನ್ನೂ ಓದಿ : Vastu tips: ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಮನೆಯೊಳಗಿಡಬೇಡಿ.!
ಶಿವಪೂಜೆಗೆ ಇದೇ ಪ್ರಶಸ್ತ ಕಾಲ :
ಮಹಾಶಿವರಾತ್ರಿ ದಿನ ಶಿವಪೂಜೆಗೆ (Shiva pooja) ಪ್ರಶಸ್ತ ಕಾಲ ಯಾವುದು ಎನ್ನುವುದನ್ನು ನಾವು ನಿಮಗೆ ಹೇಳುತ್ತೇವೆ. ಆದರ ಎಲ್ಲಾ ಮಾಹಿತಿ ಇಲ್ಲಿದೆ.
1. ನಿಶೀಥಕಾಲ ಪೂಜಾ ಸಮಯ : ಮಾರ್ಚ್ 11ರ ರಾತ್ರಿ 12 ಗಂಟೆ 6 ನಿಮಿಷದಿಂದ 12 ಗಂಟೆ 55 ನಿಮಿಷದ ತನಕ
2. ಮೊದಲ ಪ್ರಹರ : 11 ಮಾರ್ಚ್, ಸಂಜೆ 6.27ರಿಂದ 9.29ರ ತನಕ
3. ದ್ವಿತೀಯ ಪ್ರಹರ : 11 ಮಾರ್ಚ್, ರಾತ್ರಿ 9.29ರಿಂದ 12.31 ರ ತನಕ
4. ತೃತೀಯ ಪ್ರಹರ : ರಾತ್ರಿ 12.31ರಿಂದ 3.32ರ ತನಕ
5. ನಾಲ್ಕನೇ ಪ್ರಹರ : ಮಾರ್ಚ್ 12, ಬೆಳಗ್ಗೆ 3 ಗಂಟೆ 32 ನಿಮಿಷದಿಂದ ಬೆಳಗ್ಗೆ 6ಗಂಟೆ 34 ನಿಮಿಷದ ತನಕ
ಮಹಾಶಿವರಾತ್ರಿ ಪಾರಣೆಯ ಮುಹೂರ್ತ : ಮಾರ್ಚ್ 12, ಬೆಳಗ್ಗೆ 6.36ರಿಂದ ಮಧ್ಯಾಹ್ನ 3.04ಗಂಟೆಯ ತನಕ
ಇದನ್ನೂ ಓದಿ : Devi Lakshmi Money Signal - ದೇವಿ ಲಕ್ಷ್ಮಿಯ ಈ ಸಂಕೇತಗಳನ್ನು ನೀವು ತಿಳಿದುಕೊಂಡು ಧನವಂತರಾಗಿ
ಮಹಾಶಿವನ (Lord Shiva) ಪ್ರಿಯ ವಸ್ತುಗಳು :
ಶಂಕರನ ಪ್ರಸನ್ನತೆಗೆ ಮಹಾಶಿವರಾತ್ರಿಯಂದು ಈ ವಸ್ತುಗಳನ್ನು ಅರ್ಪಿಸಬಹುದು.
1. 108 ಬಿಲ್ವಪತ್ರೆ ಅರ್ಪಿಸಿ
2. ಶಿವಲಿಂಗಕ್ಕೆ ಚಂದನದ ತಿಲಕ ಹಾಕಿ
3. ಕಬ್ಬಿನ ಹಾಲು ಅರ್ಪಿಸಿ
4. ಶಿವಲಿಂಗಕ್ಕೆ (Shivalinga) ಗಂಗಾಜಲಾಭಿಷೇಕ ಮಾಡಿ
5. ತುಳಸಿ, ಜಾಯಿಫಲ, ಕಮಲ, ಹೂವು, ಹಣ್ಣುಗಳನ್ನು (Fruits) ಅರ್ಪಿಸಿ
6. ಕೇಸರಿಯುಕ್ತ ಖೀರ್ ಮಾಡಿ ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಿ
ಇದನ್ನೂ ಓದಿ : ದೇಶದಲ್ಲಿ ಶಿವನ 12 ಜ್ಯೋತಿರ್ಲಿಂಗಗಳು ಎಲ್ಲಿವೆ? ಅವುಗಳ ಮಹತ್ವವೇನು? ಇಲ್ಲಿದೆ ಮಹತ್ವದ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.