ನವದೆಹಲಿ: ನೂತನ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೊಶಗೊಂಡಿರುವ ರೈತ ಹೋರಾಟಗಾರರು, ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕರೆ ನೀಡುವುದಾಗಿ ಗುಡುಗಿದ್ದಾರೆ. ಏತನ್ಮಧ್ಯೆ, ವಿವಿಧ ಬೆಳೆಗಳಿಗೆ 1000 ರು.ಗಿಂತ ಕಡಿಮೆ ಬೆಂಬಲ ಬೆಲೆ ನೀಡುತ್ತಿರುವ ಕರ್ನಾಟಕಕ್ಕೂ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಭೇಟಿ ನೀಡಿ, ಈ ಬಗ್ಗೆ ರೈತರಿಗೆ ಅರಿವು ಮೂಡಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಈ ಸಂಬಂಧ ಮಂಗಳವಾರ ಮಾತನಾಡಿದ ಎಸ್ಕೆಎಂ ಮುಖಂಡ ರಾಜೇವಾಲ್, ‘ಚುನಾವಣೆ(Election) ನಿಗದಿಯಾಗಿರುವ 5 ರಾಜ್ಯಗಳಿಗೆ ನಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ಆದರೆ ನಾವು ಇಂಥದ್ದೇ ಪಕ್ಷಕ್ಕೆ ಮತ ಹಾಕುವಂತೆ ರೈತರಿಗೆ ಕೋರಿಕೊಳ್ಳಲ್ಲ. ಬದಲಾಗಿ ಬಿಜೆಪಿಯನ್ನು ಸೋಲಿಸಲು ಸಮರ್ಥವಿರುವ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳಿಕೊಳ್ಳುತ್ತೇವೆ. ತನ್ಮೂಲಕ ರೈತರಿಗೆ ಮರಣ ಶಾಸನವಾಗಲಿರುವ ನೂತನ 3 ಕೃಷಿ ಕಾಯ್ದೆ ಹಿಂಪಡೆಯದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸುವುದಾಗಿ’ ಹೇಳಿದ್ದಾರೆ.
LPG ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣನಾ? ಅಲ್ಲದಿದ್ದರೆ ಮತ್ತೇನು?
ದಿಲ್ಲಿ ಗಡಿಗಳಲ್ಲಿ ರೈತರ ಪ್ರತಿಭಟನೆ(Farmers Protest)ಗೆ 100 ದಿನ ತುಂಬಲಿರುವ ಕಾರಣ ಮಾ.6ರಂದು ಕೆಎಂಪಿ ಹೆದ್ದಾರಿಯನ್ನು 5 ಗಂಟೆಗಳ ಕಾಲ ತಡೆಯಲಾಗುತ್ತದೆ. ಮಹಿಳಾ ದಿನಾಚರಣೆಯಾದ ಮಾ.8ರಂದು ಮಹಿಳಾ ಪ್ರತಿಭಟನಾಕಾರರೇ ದಿಲ್ಲಿ ಗಡಿಗಳಲ್ಲಿ ಪ್ರತಿಭಟನೆ ನೇತೃತ್ವ ವಹಿಸಲಿದ್ದಾರೆ. ಮಾ.12ರಂದು ರೈತ ಮುಖಂಡರು ಕೋಲ್ಕತಾಗೆ ತೆರಳಿ ಬಿಜೆಪಿ ಮತ ಹಾಕದಂತೆ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.
Viral Photo: ಶರ್ಟ್-ಪ್ಯಾಂಟ್ ಧರಿಸಿ, ತಲೆಗೆ ರುಮಾಲು ಸುತ್ತಿ, ಟಕ್ ನಲ್ಲಿ ಬೀದಿಗಿಳಿದ ಗಜರಾಜನ ಗಾಂಭೀರ್ಯ ನಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.