ಸದೃಢ ಆರೋಗ್ಯಕ್ಕೆ ಬಹುಭಾಷಾ ನಟಿ ಪ್ರಣಿತಾ ಸುಭಾಶ್ ಸೂತ್ರಗಳು

ನಟಿ ಪ್ರಣಿತಾ ಸುಭಾಷ್ 2010 ರ ಕನ್ನಡ ಚಿತ್ರ ಪೋರ್ಕಿ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪ್ರವೇಶಿಸಿದಾಗಿನಿಂದಲೂ ಬೆಳ್ಳಿತೆರೆ ಮೇಲಿನ ನಟನೆಯಿಂದಾಗಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಅತ್ಯುತ್ತಮ ನಟನೆಯ ಜೊತೆಗೆ ಮೇಳೈಸಿದ ಸೌಂದರ್ಯದಿಂದಾಗಿ ದಕ್ಷಿಣ ಭಾರತದ ಸಿನಿಮಾದಲ್ಲಿ ತಮ್ಮದೇ ಹೆಸರನ್ನು ಗಳಿಸಿಕೊಂಡಿದ್ದಾರೆ.ಅವರು ರಾಷ್ಟ್ರದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಮತ್ತು ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Last Updated : Oct 30, 2020, 11:52 AM IST
ಸದೃಢ ಆರೋಗ್ಯಕ್ಕೆ ಬಹುಭಾಷಾ ನಟಿ ಪ್ರಣಿತಾ ಸುಭಾಶ್ ಸೂತ್ರಗಳು  title=
Photo Courtesy: Facebook

ಬೆಂಗಳೂರು: ನಟಿ ಪ್ರಣಿತಾ ಸುಭಾಷ್ 2010 ರ ಕನ್ನಡ ಚಿತ್ರ ಪೋರ್ಕಿ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪ್ರವೇಶಿಸಿದಾಗಿನಿಂದಲೂ ಬೆಳ್ಳಿತೆರೆ ಮೇಲಿನ ನಟನೆಯಿಂದಾಗಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಅತ್ಯುತ್ತಮ ನಟನೆಯ ಜೊತೆಗೆ ಮೇಳೈಸಿದ ಸೌಂದರ್ಯದಿಂದಾಗಿ ದಕ್ಷಿಣ ಭಾರತದ ಸಿನಿಮಾದಲ್ಲಿ ತಮ್ಮದೇ ಹೆಸರನ್ನು ಗಳಿಸಿಕೊಂಡಿದ್ದಾರೆ.ಅವರು ರಾಷ್ಟ್ರದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಮತ್ತು ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಸಾಮಾನ್ಯವಾಗಿ ಚಿತ್ರ ನಟಿಯರ ಫಿಟ್ ನೆಸ್ ಬಗೆಗಿನ ವಿಚಾರಗಳ ಕುರಿತಾಗಿ ಎಲ್ಲರಿಗೂ ಕುತೂಹಲವಿರುತ್ತದೆ,ಹೀಗಾಗಿ ಅವರ ಆಹಾರ ಹಾಗೂ ದಿನಚರಿಗಳನ್ನು ಅಭಿಮಾನಿಗಳು ಕುತೂಹಲದಿಂದ ಫಾಲೋ ಮಾಡುತ್ತಿರುತ್ತಾರೆ.ಈಗ ಇದೇ ವಿಚಾರವಾಗಿ ನಟಿ ಪ್ರಣಿತಾ ಸುಭಾಷ್ ಪಿಂಕ್ ವಿಲ್ಲಾ ಜೊತೆ ತಾವು ಫಿಟ್ ನೆಸ್ ಕಾಪಾಡಿಕೊಳ್ಳಲು ಏನೆಲ್ಲಾ ಮಾಡುತ್ತಿರುವುದಾಗಿ ಎನ್ನುವ ವಿಚಾರವಾಗಿ ಮಾತನಾಡಿದ್ದಾರೆ.

ಬಹು ಭಾಷಾ ತಾರೆ ನಟಿ ಪ್ರಣಿತಾ ಬೆಳಿಗ್ಗೆ 6 ಗಂಟೆಗೆ ಎದ್ದ ನಂತರ ಅರಿಶಿನ ಮತ್ತು ಮೆಣಸು ನೀರನ್ನು ಕುಡಿಯುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಮತ್ತು ಅರಿಶಿನ ಮತ್ತು ಕರಿಮೆಣಸು ಶಕ್ತಿಯುತವಾದ ಸಂಯೋಜನೆಯಾಗಿದೆ ಮತ್ತು ಜನರು ಇದನ್ನು ಒಟ್ಟಿಗೆ ಕುಡಿದಾಗಿ , ದೇಹದಲ್ಲಿ ಹಲವಾರು ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತದೆ ಎನ್ನುತ್ತಾರೆ.

ಅರಿಶಿನ ಮತ್ತು ಮೆಣಸು ನೀರಿನ ಆರೋಗ್ಯ ಪ್ರಯೋಜನಗಳು: 

  • ಆರೋಗ್ಯಕರ ಪಾನೀಯ ಸಂಧಿವಾತವನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
  • ಇದು ನಿಮ್ಮ ದೇಹದಲ್ಲಿನ ನಿರ್ದಿಷ್ಟ ನೋವು ಕಡಿಮೆ ಮಾಡಲುಸಹಾಯ ಮಾಡುತ್ತದೆ ಮತ್ತು ಅಸ್ವಸ್ಥತೆಯನ್ನು ಕಡಿತಗೊಳಿಸುತ್ತದೆ.
  • ಈ ಪಾನೀಯವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಸೆಳೆತ ಮತ್ತು ವಾಯುವನ್ನು ಕಡಿಮೆ ಮಾಡುತ್ತದೆ.
  • ಮಧುಮೇಹ ರೋಗಿಗಳಿಗೆ, ಇದು ಮೊದಲ ಹಂತದಲ್ಲಿ ರಕ್ತನಾಳಗಳನ್ನು ಹಾನಿಗೊಳಿಸುವ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಕರಿಮೆಣಸು ಮತ್ತು ಅರಿಶಿನವು ತೂಕ ಇಳಿಸುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೇ ಆ ಮೂಲಕ ನಿಮ್ಮಲ್ಲಿರುವ ಬೊಜ್ಜನ್ನು ಕರಗಿಸುತ್ತದೆ.
  • ಅರಿಶಿನ ಮತ್ತು ಕರಿಮೆಣಸಿನ ಸಂಯೋಜನೆಯು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಮತ್ತು ಕ್ಯಾನ್ಸರ್ ಅಪಾಯಗಳನ್ನು ತಡೆಯುತ್ತದೆ 

ಅರಿಶಿನ ಮತ್ತು ಮೆಣಸು ನೀರನ್ನು ಹೇಗೆ ತಯಾರಿಸುವುದು?

ಅಗತ್ಯವಿರುವ ವಿಷಯಗಳು:

  • -1/4 ಚಮಚ ಅರಿಶಿನ ಪುಡಿ
  • -1/8 ಚಮಚ ಕರಿಮೆಣಸು
  • -ನೀರು
  • -ಜೇನು (ಆಯ್ಕೆ)
  • ನಿಂಬೆ ರಸ (ಆಯ್ಕೆ)

ಅನುಸರಿಸಬೇಕಾದ ಕ್ರಮಗಳು:

  • ಪಾತ್ರೆಯಲ್ಲಿ ಒಂದು ಲೋಟ ನೀರು ಕುದಿಸಿ
  • ಕುದಿಸಿದ ನಂತರ ಅದನ್ನು ಗ್ಲಾಸ್ ನೊಳಗೆ ಹಾಕಿ 
  • ಇದಕ್ಕೆ ಅರಿಶಿನ ಪುಡಿ ಸೇರಿಸಿ
  • ನಂತರ ಕರಿಮೆಣಸು ಪುಡಿಯನ್ನು ಕೂಡ ಸೇರಿಸಿ
  • ನೀವು ಪಾನೀಯದ ರುಚಿಯನ್ನು ಹೆಚ್ಚಿಸಲು ಬಯಸಿದರೆ, ಅದಕ್ಕೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ
     

Trending News