Sushant Singh Rajputಗೆ ನೀಡಲಾಗಿರಲಿಲ್ಲ ವಿಷಪೂರಿತ ಪದಾರ್ಥ, ವಿಧಿವಿಜ್ಞಾನ ವರದಿಯಲ್ಲಿ ಬಹಿರಂಗ

ಮುಂಬೈ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ಈ ಎಲ್ಲ ವರದಿಗಳನ್ನು ವಿಧಿವಿಜ್ಞಾನ ವರದಿಗಳೊಂದಿಗೆ ಸಂಯೋಜಿಸಲಾಗಿದೆ.

Last Updated : Aug 11, 2020, 01:57 PM IST
Sushant Singh Rajputಗೆ ನೀಡಲಾಗಿರಲಿಲ್ಲ ವಿಷಪೂರಿತ ಪದಾರ್ಥ, ವಿಧಿವಿಜ್ಞಾನ ವರದಿಯಲ್ಲಿ ಬಹಿರಂಗ title=

ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput)ಆತ್ಮಹತ್ಯೆ ಪ್ರಕರಣದಲ್ಲಿ ಈಗಾಗಲೇ ಇಂಟರಿಮ್ ವರದಿ ಹೊರಬಂದಿದ್ದು, ಇದೀಗ  ವಿಷಶಾಸ್ತ್ರ, ಲೆಗೇಚರ್ ಮಾರ್ಕ್, ಉಗುರು ಮಾದರಿ, ಸ್ಟಾಂಪ್ ವಾಶ್ ವರದಿಗಳು ಕಲಿನಾ ಫೊರೆನ್ಸಿಕ್ ಲ್ಯಾಬ್‌ನಿಂದ ಹೊರಬಂದಿವೆ. ಈ ವರದಿಯಲ್ಲಿ ಯಾವುದೇ ರೀತಿಯ ಫೌಲ್ ಪ್ಲೇ ಕಂಡುಬಂದಿಲ್ಲ ಎಂದು ಹೇಳಲಾಗಿದೆ. ಮುಂಬೈ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ಈ ಎಲ್ಲ ವರದಿಗಳನ್ನು ವಿಧಿವಿಜ್ಞಾನ ವರದಿಗಳೊಂದಿಗೆ ಸಂಯೋಜಿಸಲಾಗಿದೆ.

stomach ವಾಶ್ ವರದಿಯಲ್ಲಿ, ಸುಶಾಂತ್ ಸಿಂಗ್‌ಗೆ ಯಾವುದೇ ರೀತಿಯ ವಿಷಕಾರಿ ಪದಾರ್ಥ ನೀಡಲಾಗಿರಲಿಲ್ಲ ಹಾಗೂ ಸುಶಾಂತ್ ಕೂಡ ಯಾವುದೇ ರೀತಿಯ ವಿಷಪದಾರ್ಥ ಸೇವಿಸಿರಲಿಲ್ಲ ಎಂಬುದು ಸ್ಪಷ್ಟವಾಗಿದೆ, ಇನ್ನೊಂದೆಡೆ ನೇಲ್ ಸ್ಯಾಂಪ್ಲಿಂಗ್ ವರದಿಯು ಸಾವಿನ ಸಮಯದಲ್ಲಿ ಯಾವುದೇ ರೀತಿಯ ಹೋರಾಟ ನಡೆದಿಲ್ಲ ಎಂದು ಹೇಳುತ್ತದೆ. ಆತ್ಮಹತ್ಯೆಯ ನಂತರ ಅವನ ಬಾಯಿಂದ ಹೊರಬಂದ ಫೋಮ್ ಅವನ ಬಟ್ಟೆಗಳ ಮೇಲೆ ಬಿದ್ದಿತ್ತು, ಅದು ಒಣಗಿದ ನಂತರ ಬಿಳಿ ಬಣ್ಣದಂತೆ ಕಾಣುತ್ತದೆ. ಯಾವುದೇ ಗಾಯ ಅಥವಾ ಗಲಾಟೆ ನಡೆದಿಲ್ಲ ಎಂದು ಲಿಜಿಚಾರ್ ವರದಿ ಬಹಿರಂಗಪಡಿಸಿದೆ.

ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದು, ನಂತರ ಮುಂಬೈ ಪೊಲೀಸರು ಈ ಬಗ್ಗೆ ನಿರಂತರವಾಗಿ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಸುಶಾಂತ್ ಅವರ ತಂದೆ ಪಾಟ್ನಾದಲ್ಲಿ ಎಫ್ಐಆರ್ ದಾಖಲಿಸಿದ ನಂತರ ಈ ಬಗ್ಗೆ ತನಿಖೆ ನಡೆಸಲು ಬಿಹಾರ ಪೊಲೀಸರ ತಂಡವೂ ಮುಂಬೈಗೆ ತಲುಪಿದೆ. ಸದ್ಯ ಈ ಪ್ರಕರಣ ಸಿಬಿಐ ಬಳಿ ತಲುಪಿದ್ದು, ಜಾರಿ ನಿರ್ದೇಶನಾಲಯ (ED) ಕೂಡ ಈ ವಿಷಯದಲ್ಲಿ ತನ್ನ ತನಿಖೆಯನ್ನು ನಡೆಸುತ್ತಿದೆ.

Trending News