ದೇಶದಲ್ಲಿ 7 ಲಕ್ಷ ದಾಟಿದ ಕರೋನಾ ಸೋಂಕಿತರ ಸಂಖ್ಯೆ

ದೇಶದಲ್ಲಿ ಕರೋನಾವೈರಸ್ ಸೋಂಕಿಗೆ ಒಳಗಾದ ಒಟ್ಟು ರೋಗಿಗಳ ಸಂಖ್ಯೆ ಏಳು ಲಕ್ಷ ದಾಟಿದೆ.

Last Updated : Jul 7, 2020, 11:17 AM IST
ದೇಶದಲ್ಲಿ 7 ಲಕ್ಷ ದಾಟಿದ ಕರೋನಾ ಸೋಂಕಿತರ ಸಂಖ್ಯೆ title=

ನವದೆಹಲಿ: ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಲೇ ಇವೆ. ದೇಶದಲ್ಲಿ  ಕರೋನವೈರಸ್ (Coronavirus) ಸೋಂಕಿಗೆ ಒಳಗಾದ ಒಟ್ಟು ರೋಗಿಗಳ ಸಂಖ್ಯೆ ಏಳು ಲಕ್ಷ ದಾಟಿದೆ. ದೇಶದಲ್ಲಿ ಕರೋನಾ ರೋಗಿಗಳ ಸಂಖ್ಯೆ 7,19,665ಕ್ಕೆ ಏರಿದೆ. ಈ ಸಾಂಕ್ರಾಮಿಕ ರೋಗದಿಂದ ಇದುವರೆಗೆ 20,160 ಜನರು ಪ್ರಾಣ ಕಳೆದುಕೊಂಡಿದ್ದಾರೆ. 

ತಮಗೆ ಕೊರೊನಾ ಪಾಸಿಟಿವ್ ಬಂದ ಬಗ್ಗೆ ಸುಮಲತಾ ಅಂಬರೀಶ್ ಏನು ಹೇಳಿದಾರೆ ಗೊತ್ತಾ?

ಕಳೆದ 24 ಗಂಟೆಗಳಲ್ಲಿ 22,252 ಹೊಸ ಪ್ರಕರಣಗಳು ಬಹಿರಂಗಗೊಂಡಿವೆ. ಕಳೆದ 24 ಗಂಟೆಗಳಲ್ಲಿ 467 ಜನರು ಸಾವನ್ನಪ್ಪಿದ್ದಾರೆ. ಕೇವಲ ನಾಲ್ಕು ದಿನಗಳ ಹಿಂದೆ ದೇಶದಲ್ಲಿ ಸೋಂಕಿತರ ಸಂಖ್ಯೆ ಆರು ಲಕ್ಷ ತಲುಪಿದೆ. ಕೋವಿಡ್ -19 ರ ತನಿಖೆಯ ಸಂಖ್ಯೆಯೂ ಒಂದು ಕೋಟಿ ಮೀರಿದೆ. ಈವರೆಗೆ 1 ಕೋಟಿ 2, 11, 092 ಕರೋನಾ ಪರೀಕ್ಷೆಗಳನ್ನು ಮಾಡಲಾಗಿದೆ. ನಿನ್ನೆ ಭಾರತದಲ್ಲಿ 2 ಲಕ್ಷ 41 ಸಾವಿರ 430 ಪರೀಕ್ಷೆಗಳು ನಡೆದವು.

ಸತತ ಐದನೇ ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಪ್ರಕರಣ:
ದೇಶದಲ್ಲಿ ಸತತ ಐದನೇ ದಿನ 20 ಸಾವಿರಕ್ಕೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗಿವೆ. ಭಾನುವಾರ ರಷ್ಯಾವನ್ನು ಹಿಂದಿಕ್ಕಿ   ಕೋವಿಡ್ -19 (COVID-19)  ನಿಂದ ಹೆಚ್ಚು ಪ್ರಭಾವಕ್ಕೊಳಗಾದ ಮೂರನೇ ರಾಷ್ಟ್ರ ಭಾರತ. ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಮಾತ್ರ ಭಾರತಕ್ಕಿಂತ ಮುಂದಿವೆ. ದೇಶದಲ್ಲಿ ಕೋವಿಡ್ -19 ರ 4,39,947 ರೋಗಿಗಳು ಚಿಕಿತ್ಸೆಯ ನಂತರ ಗುಣಮುಖರಾಗಿದ್ದಾರೆ ಮತ್ತು 2,59,557 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರೋನಾ: ಮುಂದಿನ 1 ವರ್ಷದವರೆಗೆ ಅನ್ವಯವಾಗುವಂತೆ ಕೇರಳ ಸರ್ಕಾರದಿಂದ ಹೊಸ ಮಾರ್ಗಸೂಚಿ

ಕಳೆದ 24 ಗಂಟೆಗಳಲ್ಲಿ ಕರೋನಾವೈರಸ್‌ನಿಂದ ಉಂಟಾದ 467 ಸಾವುಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು 204 ಜನರನ್ನು ಕಳೆದುಕೊಂಡಿದೆ. ತಮಿಳುನಾಡಿನಲ್ಲಿ 61, ದೆಹಲಿ 48, ಕರ್ನಾಟಕ 29, ಉತ್ತರ ಪ್ರದೇಶ 24, ಪಶ್ಚಿಮ ಬಂಗಾಳ 22 ಮತ್ತು ಗುಜರಾತ್‌ನಲ್ಲಿ 17 ಸಾವು ಸಂಭವಿಸಿದೆ. ತೆಲಂಗಾಣ ಮತ್ತು ಹರಿಯಾಣದಲ್ಲಿ ಈ ಸಾಂಕ್ರಾಮಿಕ ರೋಗದಿಂದ ಕಳೆದ 24 ಗಂಟೆಗಳಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ 7, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು, ರಾಜಸ್ಥಾನ ಮತ್ತು ಪಂಜಾಬ್‌ನಲ್ಲಿ 5, ಬಿಹಾರ, ಕೇರಳ ಮತ್ತು ಒಡಿಶಾದಲ್ಲಿ ಎರಡು, ಅರುಣಾಚಲ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಒಬ್ಬ ಕರೋನಾ ರೋಗಿ ಸಾವನ್ನಪ್ಪಿದ್ದಾರೆ.

Trending News