ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೈಬರ್ ಅಪರಾಧಗಳ ತಾಣ ಎಂದು ಹೇಳಿದರೂ ತಪ್ಪಾಗಲಾರದು. ರಾಜ್ಯದಲ್ಲಿ ದಿನೇ ದಿನೇ ಸೈಬರ್ ವಂಚನೆ ಹೆಚ್ಚುತ್ತಿದ್ದು, ಇದರ ಬಲೆಗೆ ಬಿದ್ದ ಅನೇಕ ಜನರು ತಮ್ಮ ಕೋಟ್ಯಾಂತರ ಹಣವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಈ ಸೈಬರ್ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವುದರ ಜೊತೆಗೆ ಇದರ ವಿರುದ್ಧ ದೂರು ದಾಖಲಿಸಲು ಸಹಾಯವಾಣಿಯನ್ನು(1930) ಆರಂಭಿಸಿದೆ. ಆದರೂ ಸಹ ಸೈಬರ್ ವಂಚನೆಯ ಹಾವಳಿ ತಡೆಯಲಾಗುತ್ತಿಲ್ಲ ಎಂಬುದು ದುರ್ದೈವದ ಸಂಗತಿಯಾಗಿದೆ.
ಇದನ್ನೂ ಓದಿ: ʼಮಾಂಸಾಹಾರ ತಿನ್ನಬೇಡʼ ಅಂದಿದ್ದಕ್ಕೆ.. ದುರಂತ ನಿರ್ಧಾರ ತೆಗೆದುಕೊಂಡ "ಮೊದಲ ಮಹಿಳಾ ಪೈಲಟ್"..!
ಸೈಬರ್ ಅಪರಾಧವು ಒಂದು ಕಾನೂನು ಬಾಹಿರ ಕೃತ್ಯ, ಇದರಿಂದ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ ಸಹ ವಂಚಕರು ತಮ್ಮ ಕೃತ್ಯ ನಿಲ್ಲಿಸದೆ ಇರುವುದು ಬೇಸರದ ವಿಷಯವಾಗಿದೆ. ಪತ್ರಿ ವರ್ಷ ಬರೋಬ್ಬರಿ ಹತ್ತು ಸಾವಿರಕ್ಕೂ ಅಧಿಕ ಕೇಸ್ ಗಳು ದಾಖಲಾಗುತ್ತಿವೆ.
ರಾಜ್ಯ ಪೊಲೀಸ್ ಇಲಾಖೆ ಇದರ ಸಂಬಂಧ ಅನೇಕ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕ್ರಮಗಳೂ ಜರುಗಿವೆ. ಆದರೂ ಸಹ ಎಚ್ಚೆತ್ತುಕೊಳ್ಳದ ಜನ ತಮ್ಮ ಬೇಜವಬ್ದಾರಿ, ದುರಾಸೆಯ ಬಲೆಗೆ ಬಿದ್ದು ಕೋಟ್ಯಾಂತರ ಹಣವನ್ನು ಕಳೆದುಕೊಳ್ಳುತ್ತಿರುವುದು ಕಾಣಬಹುದು.
ಸೈಬರ್ ಕ್ರೈಂ ಎನ್ನುವುದು ಅಷ್ಟೊಂದು ಸುಲಭದ ಕೆಲಸವಲ್ಲ, ಅದಕ್ಕಾಗಿಯೇ ವಂಚರು ವಿಶೇಷ ತರಬೇತಿ ಜೊತೆಗೆ ಪ್ರೋಗ್ರಾಮಿಂಗ್ ಕೌಶಲ್ಯ ಹೊಂದಿರುತ್ತಾರೆ. ಇದರ ಸಹಾಯದಿಂದ ಬ್ಯಾಂಕ್ ವಂಚನೆ, ಗುರುತಿನ ಕಳ್ಳತನ, ಸುಲಿಗೆ ಮತ್ತು ವರ್ಗೀಕೃತ ಮಾಹಿತಿಯ ಕಳ್ಳತನ ಸೇರಿದಂತೆ ಕಂಪ್ಯೂಟರ್ ವ್ಯವಸ್ಥೆಗಳನ್ನು ಬಳಸಿಕೊಂಡು ಇತರ ರೀತಿಯ ವಂಚನೆಗಳನ್ನು ಸುಗಮಗೊಳಿಸಬಹುದಾಗಿದೆ.ಹಾಗೆಯೇ ವಿವಿಧ ರೀತಿಯ ಇಂಟರ್ನೆಟ್ ವಂಚನೆಯ ಪ್ರಕರಣಗಳು ಗ್ರಾಹಕರನ್ನು ನೇರವಾಗಿ ಗುರಿಯಾಗಿಸುತ್ತವೆ.
ಇದನ್ನೂ ಓದಿ : ಆಹಾರದ ರುಚಿ ಹೆಚ್ಚಿಸಬಲ್ಲ ಈ ಸೊಪ್ಪಿನಿಂದ ಬಿಳಿ ಕೂದಲು ನೈಸರ್ಗಿಕವಾಗಿ ಗಾಢ ಕಪ್ಪಾಗುತ್ತೆ!
ಇದರಲ್ಲಿ ಕೇವಲ ಒಂದೇ ರೀತಿಯ ವಂಚನೆ ಇರದೆ ನೆಟ್ ಬ್ಯಾಂಕಿಂಗ್ / ಎಟಿಎಂ ವಂಚನೆಗಳು, ಸಿಮ್ ಸ್ವಾಪ್, ವಿಶಿಂಗ್, ಫಿಶಿಂಗ್, ಅಶ್ಲೀಲ ಅಥವಾ ಆಕ್ರಮಣಕಾರಿ ವಿಷಯ, ಕಿರುಕುಳ, ಮಾದಕವಸ್ತು ಕಳ್ಳಸಾಗಣೆದಂತಹ ಅನೇಕ ವಿಧಗಳಿಂದ ವಂಚಕರು ಸುಲಿಗೆ ಮಾಡುವುದನ್ನು ಕಾಣಬಹುದು.
ಇಂತಹ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ SMS, ಕರೆ ಅಥವಾ ಇಮೇಲ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ.
ವಿಶ್ವಾಸಾರ್ಹವಲ್ಲದ ಮೂಲದಿಂದ ಕಳುಹಿಸಲಾದ SMS ನಲ್ಲಿ ಸೂಚಿಸಿದಂತೆ ಸೂಚನೆಗಳನ್ನು ಅನುಸರಿಸಬೇಡಿ, ಅಂತಹ SMS ಅನ್ನು ತಕ್ಷಣವೇ ಡಿಲೀಟ್ ಮಾಡಿ. ವಂಚಕರು ಬಹಳ ಜಾಣ್ಮೆಯಿಂದ ಕೆಲಸ ಮಾಡುತ್ತಿರುವಾಗ ನಾವು ಅವರಿಗಿಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.