ಬೆಲ್ಲದೊಂದಿಗೆ ಈ ಪುಟ್ಟ ಕಾಳು ಸೇವಿಸಿದರೆ ತಿಂಗಳುಗಟ್ಟಲೇ ಕಾಡುವ ಕೆಮ್ಮಿಗೆ ಒಂದೇ ದಿನದಲ್ಲಿ ಪರಿಹಾರ ಸಿಗುತ್ತದೆ !

ಬೆಲ್ಲದ ಜೊತೆ ಈ ಪುಟ್ಟ ಕಾಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು.   

Written by - Ranjitha R K | Last Updated : Sep 27, 2024, 03:19 PM IST
  • ಬದಲಾಗುತ್ತಿರುವ ಋತುವಿನಲ್ಲಿ ಬೆಲ್ಲ ಸೇವಿಸುವುದು ತುಂಬಾ ಆರೋಗ್ಯಕರ.
  • ಇದು ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
  • ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
ಬೆಲ್ಲದೊಂದಿಗೆ ಈ ಪುಟ್ಟ ಕಾಳು ಸೇವಿಸಿದರೆ ತಿಂಗಳುಗಟ್ಟಲೇ ಕಾಡುವ ಕೆಮ್ಮಿಗೆ ಒಂದೇ ದಿನದಲ್ಲಿ ಪರಿಹಾರ ಸಿಗುತ್ತದೆ !  title=

ಬೆಂಗಳೂರು :ಬದಲಾಗುತ್ತಿರುವ ಋತುವಿನಲ್ಲಿ ಬೆಲ್ಲ ಸೇವಿಸುವುದು ತುಂಬಾ ಆರೋಗ್ಯಕರ.ಇದು ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗಳನ್ನು ನಿವಾರಿಸುತ್ತದೆ.ಜೊತೆಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.ಇದರ ಸೇವನೆಯಿಂದ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಗುಣಪಡಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು.ಇದು ಬೊಜ್ಜು ಕಡಿಮೆ ಮಾಡುವುದಲ್ಲದೆ ಜೀರ್ಣಕ್ರಿಯೆಯನ್ನು ಕೂಡಾ ಸುಧಾರಿಸುತ್ತದೆ.ಇನ್ನು ಬೆಲ್ಲದ ಜೊತೆ ಈ ಪುಟ್ಟ ಕಾಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು. 

ಬೆಲ್ಲ ಮತ್ತು ಓಮ ಕಾಳನ್ನು ಒಟ್ಟಿಗೆ ಸೇವಿಸುವುದರಿಂದ ಆಗುವ ಪ್ರಯೋಜನಗಳು : 
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : 

ಬೆಲ್ಲ ಮತ್ತು ಓಮ ಕಾಳನ್ನು ಒಟ್ಟಿಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಆದ್ದರಿಂದ,  ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಬೇಕಾದರೆ ಬೆಲ್ಲ ಮತ್ತು ಓಮ ಕಾಳನ್ನು ಸೇವಿಸಬಹುದು.

ಇದನ್ನೂ ಓದಿ : ಚಳಿಗಾಲದ ಒಣ ಕೆಮ್ಮಿಗೆ ಇಲ್ಲಿದೆ 5 ಬೆಸ್ಟ್‌ ಮನೆಮದ್ದು: ರಾತ್ರಿ ಕುಡಿದರೆ ಬೆಳಗಾಗುವುದರಲ್ಲೇ ಗೋಚರಿಸುತ್ತೆ ಪರಿಣಾಮ!

ಪಿರಿಯಡ್ಸ್  ನೋವು : 
ಪಿರಿಯಡ್ಸ್ ಸಮಯದಲ್ಲಿನ ಕಾಡುವ ನೋವಿಗೆ ಬೆಲ್ಲ ಮತ್ತು ಓಮಕಾಳು ಪರಿಹಾರ ನೀಡುತ್ತದೆ.ಇದನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದ ಹರಿವನ್ನು ಸುಧಾರಿಸಬಹುದು.ಇದು ಪಿರಿಯಡ್ಸ್‌ನಲ್ಲಿ ಕಾಣಿಸುವ ನೋವು ಮತ್ತು ಸೆಳೆತದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.  

ಬೆನ್ನು ನೋವಿನಿಂದ ಪರಿಹಾರ : 
ಬೆಲ್ಲ ಮತ್ತು ಓಮಕಾಳು ಬೆನ್ನುನೋವಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ.   ಪ್ರತಿದಿನ ಮಲಗುವ ಮುನ್ನ ಅರ್ಧ ಟೀಚಮಚ ಓಮಕಾಳು ಮತ್ತು ಬೆಲ್ಲವನ್ನು ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಸೇವಿಸಬೇಕು. ಹೀಗೆ ಮಾಡುತ್ತಾ ಬಂದರೆ ಬೆನ್ನು ನೋವಿನಿಂದ ಪರಿಹಾರ ಸಿಗುತ್ತದೆ.   

ಶೀತ ಮತ್ತು ಕೆಮ್ಮಿಗೆ ಉಪಶಮನ : 
ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೋಗಲಾಡಿಸಲು ಬೆಲ್ಲ ಮತ್ತು ಓಮಕಾಳನ್ನು ಸೇವಿಸಬೇಕು.ಇದು ನಿಮಗೆ ಗಂಟಲು ನೋವು, ಕೆಮ್ಮು, ನೆಗಡಿಯಿಂದ ತ್ವರಿತ ಪರಿಣಾಮ ಬೀರುತ್ತದೆ. 

ಇದನ್ನೂ ಓದಿ :Coffee With Ghee: ತುಪ್ಪದ ಕಾಫಿಯಲ್ಲಿದೆ ಆರೋಗ್ಯದ ಗುಟ್ಟು, ತೂಕ ಇಳಿಕೆಯಿಂದ ಕೀಲು ನೋವಿನವರೆಗೂ ನೀಡುತ್ತೇ ಪರಿಹಾರ!

ಅಸ್ತಮಾದಿಂದ ಪರಿಹಾರ : 
ಬೆಲ್ಲ ಮತ್ತು ಓಮಕಾಳು ಅಸ್ತಮಾದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಪ್ರಯೋಜನಕಾರಿ ಎನ್ನಲಾಗಿದೆ.ಬೆಲ್ಲ ಮತ್ತು ಓಮಕಾಳು ಶ್ವಾಸಕೋಶದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.ದಿನಕ್ಕೆ 4 ರಿಂದ 5 ಗ್ರಾಂ ಓಮಕಾಳನ್ನು ತಿನ್ನಬಹುದು.ಇದರಿಂದ ಸಾಕಷ್ಟು ಅನುಕೂಲವಾಗಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Trending News