WARNING: ನೀವು TIKTOK ಬಳಸುತ್ತೀರಾ? ಹಾಗಿದ್ದರೆ ಎಚ್ಚರಿಕೆ!

ಸದ್ಯ ಭಾರತದಲ್ಲಿ ಸುಮಾರು ಟಿಕ್-ಟಾಕ್ 30 ಕೋಟಿ ಬಳಕೆದಾರರನ್ನು ಹೊಂದಿದೆ.

Last Updated : Jan 12, 2020, 05:11 PM IST
WARNING: ನೀವು TIKTOK ಬಳಸುತ್ತೀರಾ? ಹಾಗಿದ್ದರೆ ಎಚ್ಚರಿಕೆ! title=

ನವದೆಹಲಿ:TIKTOK ಹೆಸರಿನ ಮೊಬೈಲ್ ಆಪ್ ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಅಲೆಯನ್ನು ಸೃಷ್ಟಿಮಾಡಿದೆ. ಇದುವರೆಗೆ ಭಾರತದಲ್ಲಿ ಸರಿ ಸುಮಾರು 30 ಕೋಟಿ ಬಳಕೆದಾರರು ಈ ಆಪ್ ಅನ್ನು ಡೌನ್ಲೋಡ್ ಮಾಡಿದ್ದಾರೆ. ವಿಶ್ವಾದ್ಯಂತ ಸುಮಾರು 130 ಕೋಟಿ ಬಳಕೆದಾರರು ಈ ಆಪ್ ಅನ್ನು ಬಳಸುತ್ತಿದ್ದಾರೆ. ಕೇವಲ 2019  ಒಂದೇ ವರ್ಷದಲ್ಲಿ ಸುಮಾರು 20 ಕೋಟಿ ಭಾರತೀಯರು ಈ ಆಪ್ ಅನ್ನು ಡೌನ್ಲೋಡ್ ಮಾಡಿದ್ದಾರೆ. ಆದರೆ, ಇದೀಗ ಈ ಆಪ್ ಕುರಿತು ಬೆಚ್ಚಿಬೀಳಿಸುವ ಕುರಿತು ಒಂದು ವರದಿ ಪ್ರಕಟಗೊಂಡಿದ್ದು, ಸ್ವಂತ ವಿಡಿಯೋ ತಯಾರಿಸಿ ಹಂಚಿಕೊಳ್ಳುವ ಈ ಚೀನಾದ ಪ್ಲಾಟ್ ಫಾರಂ ಬಳಕೆದಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಹೇಳಿದೆ.

ಸೈಬರ್ ಸೆಕ್ಯೂರಿಟಿ ಸಂಸ್ಥೆ ಚೆಕ್ ಪಾಯಿಂಟ್ ನೀಡಿರುವ ವರದಿ ಪ್ರಕಾರ, ಟಿಕ್-ಟಾಕ್ ನಲ್ಲಿ ಕೆಲ ನ್ಯೂನ್ಯತೆಗಳಿದ್ದು, ಹ್ಯಾಕರ್ ಗಳು ಸುಲಭವಾಗಿ ನಿಮ್ಮ ಖಾತೆಯನ್ನು ಗುರಿಯಾಗಿಸಬಹುದು ಎಂದು ಹೇಳಿದೆ. ಜೊತೆಗೆ ವಿಡಿಯೋಗಳಲ್ಲಿ ಹಾಗೂ ಸದ್ಯ ನಿಮ್ಮ ಫೋನ್ ಡೇಟಾದಲ್ಲಿ ವ್ಯಾಪಕ ಏರುಪೇರಾಗುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.

ಪಾರ್ನ್ ಹಾಗೂ ಲೈಂಗಿಕ ಪ್ರವೃತ್ತಿ ಹೆಚ್ಚಳಕ್ಕೆ ಕಾರಣ
2015ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟ ಟಿಕ್-ಟಾಕ್, ಬಳಿಕ ನಿರಂತರ ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದೆಯಷ್ಟೇ ಮದ್ರಾಸ್ ಹೈಕೋರ್ಟ್ ಈ ಆಪ್ ಮೇಲೆ ಬ್ಯಾನ್ ವಿಧಿಸಿ ಆದೇಶ ನೀಡಿತ್ತು. ಈ ಕುರಿತು ಆದೇಶ ನೀಡಿದ್ದ ನ್ಯಾಯಪೀಠ ಈ ಆಪ್ ಪಾರ್ನ್ ಹಾಗೂ ಮಕ್ಕಳಲ್ಲಿ ಲೈಂಗಿಕ ಪ್ರವೃತ್ತಿ ಹೆಚ್ಚಾಗಲು ಕುಮ್ಮಕ್ಕು ನೀಡುತ್ತದೆ ಎಂದು ಹೇಳಿತ್ತು.

ಈ ಪ್ಲಾಟ್ ಫಾರಂ ಮೇಲೆ 15 ಸೆಕೆಂಡ್ ಗಳ ಅವಧಿಯ ವಿಡಿಯೋ ಹಂಚಿಕೊಳ್ಳಬಹುದು
ಸದ್ಯ ಟಿಕ್-ಟಾಕ್ ಮೇಲೆ ಬಳಕೆದಾರರು 15 ಸೆಕೆಂಡ್ ಗಳ ವಿಡಿಯೋಗಳನ್ನು ಹಂಚಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲ ವಿವಿಧ ಮನರಂಜನೆಯ ಹಾಡುಗಳು, ಧ್ವನಿಗಳು ಹಾಗೂ ಡೈಲಾಗ್ ಗಳನ್ನು ವಿಡಿಯೋ ಬ್ಯಾಕ್ ಗ್ರೌಂಡ್ ಆಗಿ ಅಳವಡಿಸಬಹುದಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಸೈಬರ್ ಸೆಕ್ಯೂರಿಟಿ ತಜ್ಞ ಅಮಿತ್ ದೂಬೆ, ವರದಿಯಲ್ಲಿ ಪ್ರಕಟಿಸಲಾದ ನ್ಯೂನ್ಯತೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ.  ಆದರೆ, ಇದಕ್ಕಾಗಿ ಬಳಕೆದಾರರು ತಮ್ಮ ಮೊಬೈಲ್ ಆಪ್ ಅನ್ನು ಅಪ್ಗ್ರೇಡ್ ಮಾಡಬೇಕು. ಇಲ್ಲದೆ ಹೋದಲ್ಲಿ ಸೈಬರ್ ಕಳ್ಳರು ನಿಮ್ಮ ವೈಯಕ್ತಿಕ ಮಾಹಿತಿ ಮೇಲೆ ದಾಳಿ ಇಡುವ ಸಾಧ್ಯತೆ ಇದೆ.

Trending News