2023-24 ಸಾಲಿನಲ್ಲಿ ರಾಜ್ಯದ ಜಿಎಸ್ ಟಿ ಸಂಗ್ರಹದಲ್ಲಿ ತೀವ್ರ ಕುಸಿತ!

GST Karnataka : ರಾಜ್ಯದ ಜಿಎಸ್ ಟಿ ತೆರಿಗೆ ಬಹುಪಾಲು ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡುತ್ತೆ. ಜಿಎಸ್ ಟಿ ಪ್ರಮುಖವಾಗಿ ಜನರ ಖರೀದಿ ವಹಿವಾಟಿನಿಂದ ಉತ್ಪತ್ತಿಯಾಗುವ ತೆರಿಗೆಯಾಗಿದೆ. 

Written by - Prashobh Devanahalli | Last Updated : May 19, 2024, 01:48 PM IST
  • ರಾಜ್ಯದ ಆದಾಯದ ಪ್ರಮುಖ ಮೂಲ GST
  • 2023-24ರ ಆರ್ಥಿಕ ವರ್ಷದಲ್ಲಿ ಎಸ್ ಟಿ ಸಂಗ್ರಹ ಕುಸಿತ
  • 2023-24ರಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಇಳಿಕೆ
2023-24 ಸಾಲಿನಲ್ಲಿ ರಾಜ್ಯದ ಜಿಎಸ್ ಟಿ ಸಂಗ್ರಹದಲ್ಲಿ ತೀವ್ರ ಕುಸಿತ! title=

ಬೆಂಗಳೂರು: GST ತೆರಿಗೆ ರಾಜ್ಯದ ಆದಾಯದ ಪ್ರಮುಖ ಮೂಲವಾಗಿದೆ. ಬೊಕ್ಕಸ ತುಂಬಿಸಲು ಜಿಎಸ್‌ಟಿ ಮುಖ್ಯ ಪಾತ್ರವಹಿಸುತ್ತದೆ. 2023-24ರ ಆರ್ಥಿಕ ವರ್ಷದಲ್ಲಿ ರಾಜ್ಯದ ಜಿಎಸ್ ಟಿ ತೆರಿಗೆ ಸಂಗ್ರಹದ ಪ್ರಗತಿ ತೀವ್ರ ಕುಸಿದಿದೆ. ಇದು ಆತಂಕದ ವಿಷಯವಾಗಿದೆ. 

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದು ಒಂದು ವರ್ಷ ಕಳೆದಿದೆ.‌ ಒಂದು ಬಜೆಟ್ ವರ್ಷ ಮುಕ್ತಾಯವಾಗಿದೆ. ಕಾಂಗ್ರೆಸ್ ತನ್ನ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ. ಗ್ಯಾರಂಟಿ ಹೊರೆ, ಬರಗಾಲದ ಬರೆಯ ಮಧ್ಯೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ.‌ ರಾಜ್ಯದ ಆದಾಯ ಮೂಲಗಳಲ್ಲಿ ಜಿಎಸ್ ಟಿ ತೆರಿಗೆ ಅತಿ ಮುಖ್ಯವಾಗಿದೆ. ರಾಜ್ಯದ ಜಿಎಸ್ ಟಿ ತೆರಿಗೆ ಬಹುಪಾಲು ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡುತ್ತೆ. ಜಿಎಸ್ ಟಿ ಪ್ರಮುಖವಾಗಿ ಜನರ ಖರೀದಿ ವಹಿವಾಟಿನಿಂದ ಉತ್ಪತ್ತಿಯಾಗುವ ತೆರಿಗೆಯಾಗಿದೆ. 

ಇದನ್ನೂ ಓದಿ: 

ರಾಜ್ಯದ ಜಿಎಸ್ ಟಿ ತೆರಿಗೆ ಸಂಬಂಧ ಮೊನ್ನೆಯಷ್ಟೇ ಎಕ್ಸ್ ಪೋಸ್ಟ್ ಮೂಲಕ ಉದ್ಯಮಿ ಮೋಹನ್ ದಾಸ್ ಪೈ ಸರ್ಕಾರವನ್ನು ಟೀಕಿಸಿದ್ದರು. ಇದಕ್ಕೆ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸ್ಪಷ್ಟನೆ ನೀಡಿದ್ದರು. ಜಿಎಸ್ ಟಿ ಸಂಗ್ರಹದ ಪ್ರಗತಿಯಲ್ಲಿ ಕರ್ನಾಟಕ ಕುಸಿತ ಕಾಣುತ್ತಿದ್ದು, ಬೆಳವಣಿಗೆ ದರ 9% ರಷ್ಟು ಇದೆ ಎಂದು ಟೀಕಿಸಿದ್ದರು. ಇದಕ್ಕೆ ಎಕ್ಸ್ ಪೋಸ್ಟ್ ಮೂಲಕ ಉತ್ತರಿಸಿದ ಎಲ್.ಕೆ.ಅತೀಕ್, ಬೆಳವಣಿಗೆ ದರ ಕುಸಿತವಾಗಿಲ್ಲ. ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ತಿರುಗೇಟು ನೀಡಿದ್ದರು. ಅಷ್ಟಕ್ಕೂ 2023-24 ಸಾಲಿನಲ್ಲಿ ರಾಜ್ಯದ ಪಾಲಿನ ಜಿಎಸ್ ಟಿ ಸಂಗ್ರಹ ಏನಿದೆ ಎಂಬ ವರದಿ ಇಲ್ಲಿದೆ.

2023-24ರಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಕುಸಿತ:

2023-24 ಸಾಲಿನಲ್ಲಿ ರಾಜ್ಯ ಜಿಎಸ್ ಟಿ ಸಂಗ್ರಹದಲ್ಲಿ ಕುಸಿತ ಕಂಡಿದೆ. ವಾಣಿಜ್ಯ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ 2022-23ಕ್ಕೆ ಹೋಲಿಸಿದರೆ 2023-24 ಸಾಲಿನಲ್ಲಿ 9,396 ಕೋಟಿ ರೂ.ವಷ್ಟು ರಾಜ್ಯದ ಪಾಲಿನ ಜಿಎಸ್ ಟಿ ಸಂಗ್ರಹ ಕುಸಿತ ಕಂಡಿದೆ. ಅಂದರೆ 2023-24 ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈಗಷ್ಟೇ ಮುಗಿದ 2024-23 ಆರ್ಥಿಕ ವರ್ಷದ ಒಟ್ಟು ಜಿಎಸ್ ಟಿ ಸಂಗ್ರಹದಲ್ಲಿ 11.47% ಕುಸಿತವಾಗಿದೆ. 

2022-23 ಸಾಲಿನಲ್ಲಿ ರಾಜ್ಯ ಸಂಗ್ರಹಿಸಿದ ಜಿಎಸ್ ಟಿ ತೆರಿಗೆ 81,848 ಕೋಟಿ ರೂ. ಅದೇ ಈಗಷ್ಟೇ ಮುಕ್ತಾಯವಾಗಿರುವ 2023-24 ಸಾಲಿನಲ್ಲಿ ರಾಜ್ಯ 72,452 ಕೋಟಿ ರೂ. ಜಿಎಸ್ ಟಿ ತೆರಿಗೆ ಸಂಗ್ರಹ ಮಾಡಲು ಸಾಧ್ಯವಾಗಿದೆ. ಬೆಳವಣಿಗೆ ದರದಲ್ಲಿರುವ ಜಿಎಸ್ ಟಿ ಸಂಗ್ರಹ ಈ ಬಾರಿ ಕುಸಿತ ಕಂಡಿರುವುದು ಅಂಕಿಅಂಶದಿಂದ ಗೊತ್ತಾಗುತ್ತೆ. ಇದೇ ಏಪ್ರಿಲ್ ತಿಂಗಳಲ್ಲಿ ಐಜಿಎಸ್ ಟಿಯಲ್ಲಿನ ರಾಜ್ಯದ ಪಾಲಿನ ಜಿಎಸ್ ಟಿ ವರ್ಗಾವಣೆ ಸೇರಿ   ಒಟ್ಟು 8,077 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ. ಅದೇ ಕಳೆದ ವರ್ಷ ಏಪ್ರಿಲ್ ನಲ್ಲಿ ಐಜಿಎಸ್ ಟಿಯಲ್ಲಿನ ರಾಜ್ಯದ ಪಾಲು ಸೇರಿ ಒಟ್ಟು 7,391 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿತ್ತು. ಅಂದರೆ 9% ದಷ್ಟು ಬೆಳವಣಿಗೆ ದರ ಹೊಂದಿದೆ.‌

ಇದನ್ನೂ ಓದಿ: Gold And Silver Price: ಭಾರತದಲ್ಲಿ ಚಿನ್ನದ ದರ ಇಳಿದ: ಬೆಳ್ಳಿಯ ಬೆಲೆ ಕೊಂಚ ಹೆಚ್ಚಳ!! 

ಸಿಎಂ ಸಿದ್ದರಾಮಯ್ಯ ಪಂಚ ಗ್ಯಾರಂಟಿಗಳಿಂದ ಜನರ ಕೈಯಲ್ಲಿ ಹೆಚ್ಚು ದುಡ್ಡು ಹರಿದಾಡಲಿದ್ದು, ಅವರ ಖರೀದಿ ಸಾಮರ್ಥ್ಯ ವೃದ್ಧಿಯಾಗಿ ರಾಜ್ಯದ ಜಿಎಸ್ ಟಿ ಸಂಗ್ರಹ ಮತ್ತಷ್ಟು ಹೆಚ್ಚಲಿದೆ ಎಂದು ಬಲವಾಗಿ ವಾದಿಸುತ್ತಿದ್ದರು. ಆದರೆ ಅಂಕಿಅಂಶ ನೋಡಿದರೆ ಆ ವಾದಕ್ಕೆ ತದ್ವಿರುದ್ಧ ಫಲಿತಾಂಶ ಗೋಚರಿಸುತ್ತಿದೆ. ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಹೇಳುವ ಪ್ರಕಾರ 2022-23ಕ್ಕೆ ಹೋಲಿಸಿದರೆ 2023-24ರಲ್ಲಿ ಜಿಎಸ್‌ಟಿ ಬೆಳವಣಿಗೆ ದರ ಕುಸಿದಿದೆ. 2021-22ರಲ್ಲಿ ಕೋವಿಡ್ ಇತ್ತು. ಆಗಿನ ಬೆಳವಣಿಗೆ ದರಕ್ಕೆ ಹೋಲಿಸಿದಾಗ 2022-23ರಲ್ಲಿ ತುಂಬಾ ಏರಿಕೆ ಕಾಣಿಸಿತ್ತು. ಏಪ್ರಿಲ್ ತಿಂಗಳ ಬೆಳವಣಿಗೆ ದರ ಒಂದು ಪ್ರಕರಣವಷ್ಟೆ, ಅದು ಜಿಎಸ್‌ಟಿ ಬೆಳವಣಿಗೆ ದರದ ಕುಸಿತವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 

ಮಾರಾಟ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ:

ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗುವ ಮಾರಾಟ ತೆರಿಗೆ ಸಂಗ್ರಹದಲ್ಲಿ ರಾಜ್ಯ 2023-24 ಸಾಲಿನಲ್ಲಿ ಏರಿಕೆ ಕಂಡಿದೆ. 2022-23 ಸಾಲಿಗೆ ಹೋಲಿಸಿದರೆ 2023-24ರಲ್ಲಿ ಮಾರಾಟ ತೆರಿಗೆ ಸಂಗ್ರಹದಲ್ಲಿ 1,486 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹವಾಗಿದೆ ಎಂದು ವಾಣಿಜ್ಯ ಇಲಾಖೆ ಅಂಕಿಅಂಶ ನೀಡಿದೆ. 

2022-23ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 19,092 ಕೋಟಿ ಮಾರಾಟ ತೆರಿಗೆ ಸಂಗ್ರಹವಾಗಿತ್ತು. ಅದೇ 2023-24 ಸಾಲಿನಲ್ಲಿ 20,578 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹ ಮಾಡಲಾಗಿದೆ. ಅಂದರೆ 1,486 ಕೋಟಿಯಷ್ಟು ಮಾರಾಟ ತೆರಿಗೆಯಲ್ಲಿ ಏರಿಕೆ ಕಂಡಿದೆ. ಅಂದರೆ ರಾಜ್ಯದ ಒಟ್ಟು ಮಾರಾಟ ತೆರಿಗೆ ಸಂಗ್ರಹದಲ್ಲಿ 8% ಬೆಳವಣಿಗೆ ದರ ಕಂಡಿದೆ. 

ಜಿಎಸ್ ಟಿ ಸಂಗ್ರಹದ ಮಾಸಿಕವಾರು ಹೋಲಿಕೆ?:

ಏಪ್ರಿಲ್:
2022-23- 5,205 ಕೋಟಿ
2023-24- 6,968 ಕೋಟಿ

ಮೇ:
2022-23- 12,814 ಕೋಟಿ
2023-24- 5,266 ಕೋಟಿ

ಜೂನ್:
2022-23- 5,229 ಕೋಟಿ
2023-24- 5,485 ಕೋಟಿ

ಜುಲೈ:
2022-23- 4,721 ಕೋಟಿ
2023-24- 5,643 ಕೋಟಿ

ಆಗಸ್ಟ್:
2022-23- 4,627 ಕೋಟಿ
2023-24- 5,275 ಕೋಟಿ

ಸೆಪ್ಟೆಂಬರ್:
2022-23- 4,612 ಕೋಟಿ
2023-24- 5,309 ಕೋಟಿ

ಅಕ್ಟೋಬರ್:
2022-23- 6,535 ಕೋಟಿ
2023-24- 7,412 ಕೋಟಿ

ನವೆಂಬರ್:
2022-23- 6,853 ಕೋಟಿ
2023-24- 5,701 ಕೋಟಿ

ಡಿಸೆಂಬರ್:
2022-23- 5,217 ಕೋಟಿ
2023-24- 5,762 ಕೋಟಿ

ಜನವರಿ:
2022-23- 5,736 ಕೋಟಿ
2023-24- 6,744 ಕೋಟಿ

ಫೆಬ್ರವರಿ:
2022-23- 5,171 ಕೋಟಿ
2023-24- 6,403 ಕೋಟಿ

ಮಾರ್ಚ್:
2022-23- 15,121 ಕೋಟಿ
2023-24- 6,480 ಕೋಟಿ

ಇದನ್ನೂ ಓದಿ: Bank Holiday on May 20th : ಸೋಮವಾರ ಬ್ಯಾಂಕ್‌ ರಜೆ.. ಏಕೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News