Lok Sabha Election 2024: "ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಹೊಣೆಗಾರಿಕೆ ಇದ್ದರೇ ಮೋದಿ ವಿರುದ್ದ ಕ್ರಮ ಜರುಗಿಸಬೇಕು"-ಬಿ.ಕೆ ಹರಿ ಪ್ರಸಾದ್

Lok Sabha Election 2024: ನರೇಂದ್ರ ಮೋದಿಯವರು ದ್ವೇಷ ಬಿತ್ತುತ್ತಿರುವುದು ಧರ್ಮ-ಧರ್ಮಗಳ ನಡುವೆಯಲ್ಲ,ಪರಸ್ಪರ ಪ್ರೀತಿ,ವಿಸ್ವಾಸ,ಸಹೋದರತೆಯಿಂದ ಬಾಳಿ-ಬದುಕುತ್ತಿರುವ ಭಾರತೀಯರ ನಡುವೆ. ಬಹಿರಂಗವಾಗಿ ಇಷ್ಟು ನಿರ್ಲಜ್ಜ,ದುಷ್ಟತನದಿಂದ ಒಬ್ಬ ಪ್ರಧಾನಿಯಾದವರು ಮಾತಾಡಿದ್ದು ಭಾರತದ ಇತಿಹಾಸದಲ್ಲೇ ಮೊದಲು ಎಂದು ಅವರು ಕಿಡಿ ಕಾರಿದರು.

Written by - Manjunath N | Last Updated : Apr 23, 2024, 06:02 PM IST
  • ಚುನಾವಣೆಯ ಸೋಲಿನ ಮುನ್ಸೂಚನೆಯಿಂದ, ಅಧಿಕಾರದ ದಾಹಕ್ಕಾಗಿ ಭಾರತದ ಬಹುತ್ವಕ್ಕೆ ಕೊಳ್ಳಿ ಇಡುತ್ತಿದ್ದಾರೆ.
  • ಇಂತಹ ಅಪಾಯವನ್ನು ಮತದಾರರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
  • ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಿಂದ ವಿಚಲಿತರಾಗಿರುವ ಪ್ರಧಾನಿಗಳ ಬಳಿ ಆರೋಪ ಮಾಡಲು ಯಾವ ಅಸ್ತ್ರವೂ ಉಳಿದಿಲ್ಲ
Lok Sabha Election 2024: "ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಹೊಣೆಗಾರಿಕೆ ಇದ್ದರೇ ಮೋದಿ ವಿರುದ್ದ ಕ್ರಮ ಜರುಗಿಸಬೇಕು"-ಬಿ.ಕೆ ಹರಿ ಪ್ರಸಾದ್  title=
file photo

Lok Sabha Election 2024: ಬೆಂಗಳೂರು: ರಾಗಾ, ದ್ವೇಷ, ಅಸೂಯೆ,ಇಲ್ಲದೆ ಅಧಿಕಾರ ನಡೆಸುತ್ತೇವೆ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಪ್ರಧಾನಿ ದ್ವೇಷ, ಹಗೆತನದ ಭಾಷಣ ಮಾಡುತ್ತಿರುವುದು ಭಾರತಕ್ಕೆ ಅತ್ಯಂತ ಗಂಭೀರ ಹಾಗೂ ಅಪಾಯದ ಮುನ್ಸೂಚನೆ ಎಂದು ಕಾಂಗ್ರೆಸ್ ಕೇಂದ್ರ ಕಾರ್ಯಕಾರಿ ಸಮಿತಿ ಖಾಯಂ ಸದಸ್ಯರು ಹಾಗೂ ವಿಧಾನ ಪರಿಷತ್ ಹಿರಿಯ ಸದಸ್ಯರಾದ ಬಿಕೆ ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ರಾಜ್ಯದ ಖಜಾನೆ ಲೂಟಿ ಮಾಡಿದೆ : ಪ್ರಲ್ಹಾದ ಜೋಶಿ ಆರೋಪ

ನರೇಂದ್ರ ಮೋದಿಯವರು ದ್ವೇಷ ಬಿತ್ತುತ್ತಿರುವುದು ಧರ್ಮ-ಧರ್ಮಗಳ ನಡುವೆಯಲ್ಲ,ಪರಸ್ಪರ ಪ್ರೀತಿ,ವಿಸ್ವಾಸ,ಸಹೋದರತೆಯಿಂದ ಬಾಳಿ-ಬದುಕುತ್ತಿರುವ ಭಾರತೀಯರ ನಡುವೆ. ಬಹಿರಂಗವಾಗಿ ಇಷ್ಟು ನಿರ್ಲಜ್ಜ,ದುಷ್ಟತನದಿಂದ ಒಬ್ಬ ಪ್ರಧಾನಿಯಾದವರು ಮಾತಾಡಿದ್ದು ಭಾರತದ ಇತಿಹಾಸದಲ್ಲೇ ಮೊದಲು ಎಂದು ಅವರು ಕಿಡಿ ಕಾರಿದರು.

ಇದನ್ನೂ ಓದಿ : ಬಿಳಿಗಿರಿ ಬನದಲ್ಲಿ ಅದ್ದೂರಿಯಾಗಿ ನೆರವೇರಿದ ರಂಗನಾಥನ ರಥೋತ್ಸವ

ಚುನಾವಣೆಯ ಸೋಲಿನ ಮುನ್ಸೂಚನೆಯಿಂದ, ಅಧಿಕಾರದ ದಾಹಕ್ಕಾಗಿ ಭಾರತದ ಬಹುತ್ವಕ್ಕೆ ಕೊಳ್ಳಿ ಇಡುತ್ತಿದ್ದಾರೆ.ಇಂತಹ ಅಪಾಯವನ್ನು ಮತದಾರರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಿಂದ ವಿಚಲಿತರಾಗಿರುವ ಪ್ರಧಾನಿಗಳ ಬಳಿ ಆರೋಪ ಮಾಡಲು ಯಾವ ಅಸ್ತ್ರವೂ ಉಳಿದಿಲ್ಲ ಎಂಬ ಕಾರಣಕ್ಕೆ ದ್ವೇಷ ಬಿತ್ತುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಯಾವುದೇ ಅಕ್ರಮ ನಡೆದ್ರೆ 112ಗೆ ಕರೆ ಮಾಡಲು ಜನರಲ್ಲಿ ಮನವಿ

ಸ್ವತಃ ಮಾಂಗಲ್ಯ ಕಟ್ಟಿದ ಪತ್ನಿಯನ್ನು ದೂರವಿಟ್ಟಿರುವ ಪ್ರಧಾನಿಗಳು,ಬೇರೆ ಮಹಿಳೆಯರ ಮಾಂಗಲ್ಯದ ಹುಸಿ ಕಾಳಜಿ ವಹಿಸುತ್ತಿರುವುದು ಮೋಸಳೆ ಕಣ್ಣೀರು ಸುರಿಸುವಂತಿದೆ. ಇಡೀ ಮಹಿಳಾ ಸಮುದಾಯವನ್ನು ಅವಮಾನಿಸಿರುವ ಮೋದಿ,ಕೂಡಲೆ ದೇಶದ ಮಹಿಳೆಯರಿಗೆ ಕ್ಷಮೆಯಾಚಿಸಬೇಕು. ಚುನಾವಣಾ ಆಯೋಗಕ್ಕೆ ನಿಜವಾಗಿಯೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಹೊಣೆಗಾರಿಕೆ ಇದ್ದರೇ ನರೇಂದ್ರ ಮೋದಿ ವಿರುದ್ದ ಕ್ರಮ ಜರುಗಿಸಬೇಕು. ಚುನಾವಣೆಗೆ ಸ್ಪರ್ದಿಸದಂತೆ ಅನರ್ಹಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News