ನವದೆಹಲಿ: ಭಾರತ ಸೇರಿದಂತೆ ವಿಶ್ವದಲ್ಲಿ ಹಲವು ವಿಚಿತ್ರ ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಪ್ರತಿಯೊಂದು ದೇಶವೂ ತಮ್ಮದೇಯಾದ ವಿಶೇಷ ಸಂಪ್ರದಾಯ ಮತ್ತು ನಂಬಿಕೆಗಳನ್ನು ಅನುಸರಿಸಿಕೊಂಡು ಬರುತ್ತಿವೆ. ಈ ಪೈಕಿ ಬುಡಕಟ್ಟು ಸಮುದಾಯಗಳಲ್ಲಿ ಜಾರಿಯಲ್ಲಿರುವ ಪದ್ಧತಿಗಳು ನಿಮಗೆ ಅಚ್ಚರಿ ಮೂಡಿಸುತ್ತವೆ.
ನಾವು ಚಿತ್ರವಿಚಿತ್ರವಾಗಿ ಮದುವೆಯಾಗಿರುವ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಅಣ್ಣ-ತಮ್ಮಂದಿರನ್ನೇ ಮಹಿಳೆಯೊಬ್ಬಳು ಮದುವೆಯಾಗಿರುವ ಬಗ್ಗೆ ಕೇಳಿದ್ದೇವೆ. ಬಹುಪತಿತ್ವ ಪದ್ದತಿ ನಮ್ಮ ದೇಶದ ಕೆಲವು ಕಡೆ ಜಾರಿಯಲ್ಲಿದೆ. ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಮದುವೆಗೂ ಮುನ್ನವೇ ಮೈಥುನಕ್ಕೆ ಅವಕಾಶ ನೀಡುವ ವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಆದರೆ ಇದಕ್ಕಿಂತಲೂ ಅನಿಷ್ಠ ಪದ್ಧತಿಯೊಂದು ಬಾಂಗ್ಲಾದೇಶದ ಮಂಡಿ ಬುಡಕಟ್ಟು ಸಮುದಾಯದಲ್ಲಿ ಇಂದಿಗೂ ಜಾರಿಯಲ್ಲಿದೆ.
ಇದನ್ನೂ ಓದಿ: Viral News: ಕೋರ್ಟ್ ವಿಚಾರಣೆ ವೇಳೆಯೇ ನ್ಯಾಯಾಧೀಶೆಗೆ ಪ್ರೇಮ ನಿವೇದನೆ ಮಾಡಿದ ಕಳ್ಳ..!
ಹೌದು, ಬಾಂಗ್ಲಾದೇಶದ ಮಂಡಿ ಬುಡಕಟ್ಟು ಸಮುದಾಯದಲ್ಲಿ ತಂದೆಯೇ ತನ್ನ ಮಗಳನ್ನು ಮದುವೆಯಾಗಿ ಆಕೆಯೊಂದಿಗೆ ಸಂಸಾರ ನಡೆಸುವ ಕೆಟ್ಟ ಸಂಪ್ರದಾಯವಿದೆ. ಮಂಡಿ ಜನಾಂಗದಲ್ಲಿ ಹುಟ್ಟುವ ಪ್ರತಿ ಯುವತಿಯೂ ತನ್ನ ಮಲ ತಂದೆಯನ್ನೇ ಮದುವೆಯಾಗುತ್ತಾರಂತೆ. ಮಲ ತಂದೆಯನ್ನು ಗಂಡನನ್ನಾಗಿ ಸ್ವೀಕರಿಸಿ ಮಕ್ಕಳನ್ನು ಪಡೆಯುತ್ತಾರಂತೆ. ಆದರೆ ಇಲ್ಲಿ ಎಲ್ಲಾ ತಂದೆ ತನ್ನ ಮಕ್ಕಳನ್ನು ಮದುವೆಯಾಗುವುದಿಲ್ಲ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಗಂಡನನ್ನು ಕಳೆದುಕೊಳ್ಳುವ ಮಹಿಳೆಗೆ ಮತ್ತೊಂದು ವಿವಾಹವಾಗುವ ಅವಕಾಶವಿದೆ. ಆದರೆ ಆಕೆಯನ್ನು ವಿವಾಹವಾಗುವ ವ್ಯಕ್ತಿ ತನ್ನ ಪತ್ನಿಗೆ ಮೊದಲ ಪತಿಯಿಂದ ಹುಟ್ಟಿರುವ ಹೆಣ್ಣು ಮಗಳನ್ನು ಮದುವೆಯಾಗಬಹುದು. ಅಂದರೆ ಆಕೆ ಮಲಮಗಳಾದರೂ ವಿಧವೆಯನ್ನು ವಿವಾಹವಾಗುವ ಜೊತೆಗೆ ಆಕೆಯ ಮಗಳನ್ನು ಮದುವೆಯಾಗುತ್ತಾರಂತೆ.
ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ಪತಿ ಸಾವನ್ನಪ್ಪಿದರೆ ಮಹಿಳೆ ಜೊತೆಗೆ ಆಕೆಯ ಮಗಳೂ ವಿಧವೆಯಾಗುತ್ತಾಳೆ. ಆಗ ತಾಯಿ 2ನೇ ಮದುವೆಯಾದರೆ, ಮಗಳು ಸಹ ಮಲತಂದೆಯನ್ನು ಗಂಡನೆಂದು ಸ್ವೀಕರಿಸಬೇಕಂತೆ. ಆಗ ತಾಯಿ-ಮಗಳಿಬ್ಬರಿಗೂ ಒಬ್ಬನೇ ಗಂಡನಾಗುತ್ತಾನೆ. ತಾಯಿ ತನ್ನ ಗಂಡನಿಂದ ಮಕ್ಕಳನ್ನು ಹೆತ್ತರೆ, ಇತ್ತ ಮಗಳು ಸಹ ತನ್ನ ಮಲತಂದೆಯಿಂದಲೇ ಮಕ್ಕಳನ್ನು ಪಡೆಯುತ್ತಾಳಂತೆ. ಆತ ತನ್ನ ಮಕ್ಕಳಿಗೆ ಅಜ್ಜ ಮತ್ತು ಅಪ್ಪನೂ ಅನ್ನುವುದೇ ವಿಪರ್ಯಾಸ. ದುರಂತವೆಂದರೆ ಈ ವಿಚಿತ್ರ ಪದ್ಧತಿಯನ್ನು ಮಂಡಿ ಜನಾಂಗ ಇಂದಿಗೂ ತಪ್ಪದೇ ಪಾಲಿಸಿಕೊಂಡು ಬರುತ್ತಿದೆಯಂತೆ.
ಇದನ್ನೂ ಓದಿ: Viral News: 23 ಕೋಟಿ ಆಸ್ತಿಯನ್ನು ನಾಯಿ-ಬೆಕ್ಕಿನ ಹೆಸರಿಗೆ ಬರೆದ ವೃದ್ಧೆ!
ಅಂದಹಾಗೆ ಈ ಕೆಟ್ಟ ಅನಿಷ್ಠ ಪದ್ಧತಿಯನ್ನು ಪಾಲಿಸಿಕೊಂಡು ಬರುತ್ತಿರುವ ಹಿಂದಿನ ಕಾರಣವೇನೆಂದರೆ, ಒಬ್ಬ ವಿಧವೆಯನ್ನು ೨ನೇ ಮದುವೆಯಾದರೆ, ಆಕೆಯ ಮಗು ಅನಾತವಾಗುತ್ತದೆ. ಹೀಗಾಗಿ ತಾಯಿ ಮದುವೆಯಾಗುವ ವ್ಯಕ್ತಿಯನ್ನೇ ವರಿಸಿದರೆ, ಆ ವ್ಯಕ್ತಿ ಅವರಿಬ್ಬರನ್ನೂ ದೀರ್ಘಕಾಲದವರೆಗೆ ಚೆನ್ನಾಗಿ ನೋಡಿಕೊಳ್ಳಬಹುದು ಅನ್ನೋದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.