"ಇದು ನನ್ನ ಫೋನ್ ನಂಬರ್ ಅಲ್ವೇ ಅಲ್ಲ ": ಫ್ಯಾನ್ಸ್‌ಗೆ ಎಚ್ಚರಿಸಿದ ರುಕ್ಮಿಣಿ!

Rukmini Vasanth: ಸ್ಯಾಂಡಲ್‌ವುಡ್‌ ನಟಿ ರುಕ್ಮಿಣಿ ವಸಂತ್  ಯಾವುದೇ ರೀತಿ ಗಾಸಿಪ್ ಅಥವಾ ಬೇರೆ ಯಾವ ವಿಚಾರದಿಂದಲೂ ಸುದ್ದಿ ಆಗದೆಯಿರುವರು, ಇದೀಗ ಒಂದು ಪೋಸ್ಟ್‌ ಮೂಲಕ ಇದು ನ್ನ ನಮಬರ್‌ ಅಲ್ಲವೆಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ನಟಿ ಹೀಗೆ ಹೇಳಿದ್ದು ಯಾಕೆ? ಇಲ್ಲಿದೆ ಸಂಪೂರ್ಣ ಸ್ಟೋರಿ.

Written by - Zee Kannada News Desk | Last Updated : Jan 18, 2024, 12:15 PM IST
  • ನಟಿ ರುಕ್ಮಿಣಿ ವಸಂತ್ ಈಗಾಗಲೇ ಪ್ರೀಕ್ಷಕರ ಮನಸ್ಸು ಗೆದ್ದು, ಇಡೀ ರಾಜ್ಯದಲ್ಲಿ ಎಲ್ಲರ ಫೇವರಿಟ್ ಕೂಡ ಆಗುತ್ತಿದ್ದಾರೆ.
  • ನಟಿ ರುಕ್ಮಿಣಿ ವಸಂತ್, ತಮ್ಮ ಫೋಟೋ ಮತ್ತು ಹೆಸರು ಹೀಗೆ ಎರಡೂ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತಲೇ ತಿಳಿದಾಗ, ಈ ನಟಿ ಬೇಸರದಲ್ಲಿಯೇ ಒಂದು ಪೋಸ್ಟ್ ಹಾಕಿದ್ದಾರೆ.
  • ಎಕ್ಸ್‌ನ ಪೋಸ್ಟ್‌ನಲ್ಲಿರುವ ನಂಬರ್‌ ಇದು ತಮ್ಮ ನಂಬರ್‌ ಅಲ್ಲವೆಂದು ಸ್ವತಃ ರುಕ್ಮಿಣಿ ಹೇಳಿಕೊಂಡಿದ್ದು, ಇದರೊಟ್ಟಿಗೆ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನೂ ಸಹ ಕೊಟ್ಟಿದ್ದಾರೆ.
"ಇದು ನನ್ನ ಫೋನ್ ನಂಬರ್ ಅಲ್ವೇ ಅಲ್ಲ ": ಫ್ಯಾನ್ಸ್‌ಗೆ ಎಚ್ಚರಿಸಿದ ರುಕ್ಮಿಣಿ!  title=

Rukmini Vasanth Alerts Fans:ಕಳೆದ ವರ್ಷ ತೆರೆಕಂಡ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ನಟಿ ರುಕ್ಮಿಣಿ ವಸಂತ್  ಈಗಾಗಲೇ ಪ್ರೀಕ್ಷಕರ ಮನಸ್ಸು ಗೆದ್ದು, ಇಡೀ ರಾಜ್ಯದಲ್ಲಿ ಎಲ್ಲರ ಫೇವರಿಟ್  ಕೂಡ ಆಗುತ್ತಿದ್ದಾರೆ. ಇದರ ಮಧ್ಯೆ ಈ ನಟಿಯ ಯಾವುದೇ ರೀತಿ ಗಾಸಿಪ್ ಗಳಾಗಲಿ, ಇತರ ಬೇಡವಾದ ವಿಚಾರಗಳೇ ಇರಲಿ, ಹೀಗೆ ಯಾವುದರಿಂದಲೂ ಸುದ್ದಿ ಆಗಿದ್ದು ಇಲ್ವೇ ಇಲ್ಲ. ಆದರೆ , ಈ ನಟಿಯ ಹೆಸರು ಮತ್ತು ಫೋಟೋ ಹಾಗೂ ಫೋನ್ ನಂಬರ್  ಹೀಗೆ ಎಲ್ಲವೂ ದುರುಪಯೋಗ ಆಗುತ್ತಿವೆ. 

ನಟಿ ರುಕ್ಮಿಣಿ ವಸಂತ್, ತಮ್ಮ ಫೋಟೋ ಮತ್ತು ಹೆಸರು ಹೀಗೆ ಎರಡೂ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತಲೇ ತಿಳಿದಾಗ, ಈ ನಟಿ ಬೇಸರದಲ್ಲಿಯೇ ಒಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಒಂದು ಒಂದು ನಂಬರ್ ಇದೆ. ಆ ನಂಬರ್ ಇರೋ ಡಿಪಿಯಲ್ಲಿ ರುಕ್ಮಿಣಿ ವಸಂತ್ ಫೋಟೋ ಕೂಡ ಇದೆ. ಒಂದು ಅರೆಕ್ಷಣ ಇದನ್ನ ನೋಡಿದ್ರೆ, ಇದು ನಟಿ ರುಕ್ಮಿಣಿ ವಸಂತ್ ಅವರ ನಂಬರ್ ಅಂತ ಅನಿಸುತ್ತದೆ.ಆದರೆ ನಿಜ ಹೇಳ್ಬೇಕು ಅಂದ್ರೆ ಇದು ರುಕ್ಮಿಣಿ ವಸಂತ್ ನಂಬರ್‌ ಅಲ್ವೇ ಅಲ್ಲ. 

ಇದನ್ನೂ ಓದಿ:ಒಂದೇ ದಿನದಲ್ಲಿ ನಟ ಮನೋಜ್‌ 8 ಪ್ಯಾಕ್ಸ್‌ ಪಡೆದದ್ದು ಹೇಗೆ ಗೊತ್ತೆ..! ನಿಮ್ಗೂ ಇದು ಸಾಧ್ಯ

ಹೌದು.. ಎಕ್ಸ್‌ನ ಪೋಸ್ಟ್‌ನಲ್ಲಿರುವ ನಂಬರ್‌ ಇದು ತಮ್ಮ ನಂಬರ್‌ ಅಲ್ಲವೆಂದು ಸ್ವತಃ ರುಕ್ಮಿಣಿ ಹೇಳಿಕೊಂಡಿದ್ದು, ಇದರೊಟ್ಟಿಗೆ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನೂ ಸಹ ಕೊಟ್ಟಿದ್ದಾರೆ. ಇದು ನನ್ನ ಫೋನ್ ನಂಬರ್ ಅಲ್ವೇ ಅಲ್ಲ. ಇದರಿಂದ ಕಾಲ್ ಬಂದ್ರೆ ರಿಸೀವ್ ಮಾಡ್ಬೇಡಿ. ಸಂದೇಶ ಬಂದ್ರೆ ರಿಯಾಕ್ಟ್ ಮಾಡ್ಬೇಡಿ. ಹಾಗೇನಾದರೂ ಬಂದರೆ, ಈ ನಂಬರ್‌ ಬ್ಲಾಕ್ ಮಾಡಿ ಅಂತಲೇ ರುಕ್ಮಿಣಿ ವಸಂತ್ ಕೇಳಿಕೊಂಡಿದ್ದಾರೆ.

ನಿಜವಾಗಿಯು ಈ ನಂಬರ್ ರುಕ್ಮಿಣಿ ವಸಂತ್‌ದು ಅಲ್ವೇ ಅಲ್ಲ. ರುಕ್ಮಿಣಿ ವಸಂತ್ ನಂಬರ್ ಬೇರೆ ಇದೆ. ಜನ ಇದೇ ನಂಬರ್ ಅಂತ ತಿಳಿದು ಏನಾದ್ರೂ ಯಡವಟ್ಟು ಮಾಡಿಕೊಂಡ್ರೆ ಅಂತಲೇ ಎಲ್ಲರಿಗೂ ಈ ನಟಿ ಟ್ವಿಟರ್ ಪೋಸ್ಟ್ ಮೂಲಕವೆ ಅಲರ್ಟ್ ಮಾಡಿದ್ದಾರೆ. ಸಿನಿಮಾಗಳು ಹಿಟ್ ಆದ್ಮೇಲೂ ಯಾವುದೇ ರೀತಿಯ ಬೇಡವಾದ ಸುದ್ದಿಗಳೇ ಇಲ್ಲ. ಆದರೂ ಅದ್ಯಾರೋ ರುಕ್ಮಿಣಿ ವಸಂತ್  ಫೋಟೋ ಮತ್ತು ಹೆಸರು ಹೀಗೆ ಎರಡೂ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಅಂತಲೇ ಹೇಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News