Indian Railways recruitment 2023: ರೈಲ್ವೆ ಇಲಾಖೆಯಲ್ಲಿ 1,664 ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Railways recruitment 2023: ಅಭ್ಯರ್ಥಿಗಳು SSC /ಮೆಟ್ರಿಕ್ಯುಲೇಷನ್ /10ನೇ ತರಗತಿ ಪರೀಕ್ಷೆ ಅಥವಾ ತತ್ಸಮಾನ (10 + 2 ಪರೀಕ್ಷಾ ವ್ಯವಸ್ಥೆಯಡಿ) ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ NCVT / SCVT ಹೊರಡಿಸಿದ ಸಂಬಂಧಿತ ಟ್ರೇಡ್‍ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.

Written by - Puttaraj K Alur | Last Updated : Nov 17, 2023, 04:25 PM IST
  • ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,664 ಹುದ್ದೆಗಳಿಗೆ ಅರ್ಜಿ ಆಹ್ವಾನ
  • ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿರುತ್ತದೆ
  • ಆಸಕ್ತ & ಅರ್ಹ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ಅಧಿಸೂಚನೆ ಓದಿ ಅರ್ಜಿ ಸಲ್ಲಿಸಬಹುದು
Indian Railways recruitment 2023: ರೈಲ್ವೆ ಇಲಾಖೆಯಲ್ಲಿ 1,664 ಹುದ್ದೆಗಳಿಗೆ ಅರ್ಜಿ ಆಹ್ವಾನ title=
1,664 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,664 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಫಿಟ್ಟರ್, ವೆಲ್ಡರ್ (G&E), ಆರ್ಮೇಚರ್ ವಿಂಡರ್, ಮೆಕ್ಯಾನಿಕ್, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಪೇಂಟರ್(ಸಾಮಾನ್ಯ), ಮೆಕ್ಯಾನಿಕ್ (DSL), ICTSM, ವೈರ್ ಮ್ಯಾನ್, ಬ್ಲ್ಯಾಕ್ ಸ್ಮಿತ್, ಪ್ಲಂಬರ್, ಮೆಕ್ಯಾನಿಕ್ ಕಮ್ ಆಪರೇಟರ್ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಸಿಸ್ಟಂ, ಹೆಲ್ತ್ ಸ್ಯಾನಿಟರಿ ಇನ್ಸ್ಪೆಕ್ಟರ್, ಮಲ್ಟಿಮೀಡಿಯಾ ಮತ್ತು ವೆಬ್ ಪೇಜ್ ಡಿಸೈನರ್, MMTM, ಕ್ರೇನ್, ಡ್ರಾಫ್ಟ್ಸ್ಮನ್ (ಸಿವಿಲ್), ಸ್ಟೆನೋಗ್ರಾಫರ್ (ಇಂಗ್ಲಿಷ್ ಮತ್ತು ಹಿಂದಿ) ಮತ್ತು ಟರ್ನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಎಲ್‌ಪಿಜಿ ಗ್ಯಾಸ್ ʼಸಬ್ಸಿಡಿʼ ಬೇಕು ಅಂದ್ರೆ ಮೊದಲು ಈ ಕೆಲಸ ಮಾಡಿ..! ಇಲ್ಲಂದ್ರೆ ಹಣ ಬರಲ್ಲ 

ಅರ್ಹತೆ: ಅಭ್ಯರ್ಥಿಗಳು SSC /ಮೆಟ್ರಿಕ್ಯುಲೇಷನ್ /10ನೇ ತರಗತಿ ಪರೀಕ್ಷೆ ಅಥವಾ ತತ್ಸಮಾನ (10 + 2 ಪರೀಕ್ಷಾ ವ್ಯವಸ್ಥೆಯಡಿ) ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು ಮತ್ತು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ NCVT / SCVT ಹೊರಡಿಸಿದ ಸಂಬಂಧಿತ ಟ್ರೇಡ್‍ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.

ವಿದ್ಯಾರ್ಹತೆ: ಐಟಿಐ ಸರ್ಟಿಫಿಕೇಟ್/ NCVT/SCVTಗೆ ಸಂಯೋಜಿತವಾಗಿರುವ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಕಡ್ಡಾಯ

ವಯೋಮಿತಿ(14/12/23ರಂತೆ): 15 – 24 ವರ್ಷಗಳು

ಅರ್ಜಿ ಶುಲ್ಕ: SC/ST/ಅಂಗವಿಕಲ/ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇನ್ನುಳಿದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: Daily GK Quiz: ಯಾವ ತರಕಾರಿ ತಿನ್ನುವುದರಿಂದ ರಕ್ತ ಹೆಚ್ಚಾಗುತ್ತದೆ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News