ವಿಶ್ವಕಪ್‌ನಲ್ಲಿ ಅಮೋಘ ದಾಖಲೆ ಬರೆದ ಬೋಲ್ಟ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮಾಡಿದ್ದಾರೆ ಈ ಸಾಧನೆ

World Cup: ನಿನ್ನೆ ( ನವೆಂಬರ್ 09, 2023 ಗುರುವಾರ) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ  ನ್ಯೂಜಿಲೆಂಡ್‌ನ ಸ್ಟಾರ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್  ಇತಿಹಾಸ ನಿರ್ಮಿಸಿದರು.

Written by - Yashaswini V | Last Updated : Nov 10, 2023, 07:35 AM IST
  • ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ದಾಖಲೆ ಬರೆದ ಕಿವೀಸ್ ವೇಗದ ಬೌಲರ್
  • ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಕಿವೀಸ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅದ್ಭುತ ದಾಖಲೆ
  • ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ ನ್ಯೂಜಿಲೆಂಡ್‌ನ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಟ್ರೆಂಟ್ ಬೌಲ್ಟ್
ವಿಶ್ವಕಪ್‌ನಲ್ಲಿ ಅಮೋಘ ದಾಖಲೆ ಬರೆದ ಬೋಲ್ಟ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮಾಡಿದ್ದಾರೆ ಈ ಸಾಧನೆ  title=

World Cup 2023: ನ್ಯೂಜಿಲೆಂಡ್‌ನ ಸ್ಟಾರ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ವಿಶ್ವಕಪ್‌ನಲ್ಲಿ  ಅದ್ಭುತ ದಾಖಲೆ ನಿರ್ಮಿಸಿದ್ದಾರೆ. ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ ಟ್ರೆಂಟ್ ಬೌಲ್ಟ್  ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ 50 ವಿಕೆಟ್ ಪಡೆದ ನ್ಯೂಜಿಲೆಂಡ್‌ನ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲ ಮತ್ತೊಂದು ದಾಖಲೆ ಮೂಲಕ ಅಂತಾರಾಷ್ಟ್ರೀಯ ಶ್ರೇಷ್ಠ ಬೌಲರ್ ಗಳ ಪಟ್ಟಿಯಲ್ಲಿ ಟ್ರೆಂಟ್ ಬೌಲ್ಟ್ ಸ್ಥಾನ ಪಡೆದುಕೊಂಡಿದ್ದಾರೆ.  

ನಿನ್ನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ಅವರು ಏಕದಿನ ವಿಶ್ವಕಪ್ ಇತಿಹಾಸದಲ್ಲಿ 50 ವಿಕೆಟ್‌ಗಳನ್ನು ಪಡೆದ ಮೊದಲ ನ್ಯೂಜಿಲೆಂಡ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದರು. ಅವರು ಇದುವರೆಗೂ  28 ಏಕದಿನ ವಿಶ್ವಕಪ್ ಇನ್ನಿಂಗ್ಸ್‌ಗಳಲ್ಲಿ 52 ವಿಕೆಟ್‌ಗಳನ್ನು ಪಡೆದಿದ್ದಾರೆ.  

ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿ ಕೆಳಕಂಡಂತಿದೆ: 
1. ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) - 71 
2. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 68
3. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) - 59
4. ಲಸಿತ್ ಮಾಲಿಂಗ (ಶ್ರೀಲಂಕಾ) - 56 
5. ವಾಸಿಂ ಅಕ್ರಮ್ (ಪಾಕಿಸ್ತಾನ) - 55
6. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) - 52 

ಇದನ್ನೂ ಓದಿ- ಬಲು ವಿಶೇಷ 2023ರ ವಿಶ್ವಕಪ್ : 12 ಸೀಸನ್ ಗಳಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಈ ಪವಾಡ !

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಟ್ರೆಂಟ್ ಬೌಲ್ಟ್ ಸಾಧನೆ: 
ಟ್ರೆಂಟ್ ಬೌಲ್ಟ್ ಆರಂಭಿಕ ವಿಕೆಟ್‌ಗಳೊಂದಿಗೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಕಿವೀಸ್‌ಗೆ ಅಗತ್ಯವಿರುವ ಆರಂಭವನ್ನು ನೀಡಿದರು. ಸ್ಟಾರ್ ಎಡಗೈ ವೇಗಿ ಪಥುಮ್ ನಿಸ್ಸಾಂಕಾ ಅವರನ್ನು ಎರಡನೇ ಓವರ್‌ನಲ್ಲಿ ಔಟ್ ಮಾಡಿದರು ಮತ್ತು ನಂತರ ಅವರ ಮುಂದಿನ ಓವರ್‌ನಲ್ಲಿ ಕುಸಾಲ್ ಮೆಡಿಸ್ ಅವರ ಅಮೂಲ್ಯ ವಿಕೆಟ್‌ನೊಂದಿಗೆ ಶ್ರೀಲಂಕಾ ಪಾಳಯವನ್ನು ದಂಗುಬಡಿಸಿದರು.

ಮೆಂಡಿಸ್ ಅವರ ವಿಕೆಟ್‌ನೊಂದಿಗೆ, ಬೌಲ್ಟ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳನ್ನು ಪೂರೈಸಿ ದೊಡ್ಡ ಮೈಲಿಗಲ್ಲು ಸಾಧಿಸಿದರು. ಈ ಮೂಲಕ  ಪ್ರಸ್ತುತ ಸಹ ಆಟಗಾರ ಟಿಮ್ ಸೌಥಿ ಮತ್ತು ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ನಂತರ ಈ ಸಾಧನೆ ಮಾಡಿದ ಮೂರನೇ ಕಿವೀಸ್ ಬೌಲರ್ ಎನಿಸಿಕೊಂಡರು. 

ಇದನ್ನೂ ಓದಿ- Joe Root: ಮಿಡ್ ಲೆಗ್ ಬಾಲ್.. ವಿಚಿತ್ರ ರೀತಿಯಲ್ಲಿ ಜೋ ರೂಟ್ ಕ್ಲೀನ್‌ಬೌಲ್ಡ್

ನ್ಯೂಜಿಲೆಂಡ್ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ಆಟಗಾರರು:

  1. ಟಿಮ್ ಸೌಥಿ - 447 ಇನ್ನಿಂಗ್ಸ್‌ಗಳಲ್ಲಿ 731 ವಿಕೆಟ್
  2. ಡೇನಿಯಲ್ ವೆಟ್ಟೋರಿ - 498 ಇನ್ನಿಂಗ್ಸ್‌ಗಳಲ್ಲಿ 705 ವಿಕೆಟ್
  3. ಟ್ರೆಂಟ್ ಬೌಲ್ಟ್ - 315 ಇನ್ನಿಂಗ್ಸ್‌ಗಳಲ್ಲಿ 601 ವಿಕೆಟ್
  4. ರಿಚರ್ಡ್ ಹ್ಯಾಡ್ಲಿ - 262 ಇನ್ನಿಂಗ್ಸ್‌ಗಳಲ್ಲಿ 589 ವಿಕೆಟ್
  5. ಕ್ರಿಸ್ ಕೇರ್ನ್ಸ್ - 292 ಇನ್ನಿಂಗ್ಸ್‌ಗಳಲ್ಲಿ 420 ವಿಕೆಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News