ನವದೆಹಲಿ: ಮಹಿಳಾ ಅರಣ್ಯಾಧಿಕಾರಿ (ಎಫ್ಆರ್ಒ) ಮೇಲೆ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ಸಿರ್ಪುರ ಶಾಸಕ ಕೊನೆರು ಕೊನಪ್ಪ ಅವರ ಸಹೋದರ ಕೊನೇರು ಕೃಷ್ಣ ರಾವ್ ಅಧಿಕಾರಿಣಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೃಷ್ಣ ರಾವ್ ಇತ್ತೀಚೆಗೆ ಕೊಮರಾಮ್ ಭೀಮ್ ಆಸಿಫಾಬಾದ್ ಜಿಲ್ಲಾ ಪರಿಷತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
#WATCH Telangana: A police team & forest guards were attacked allegedly by Telangana Rashtra Samithi workers in Sirpur Kagaznagar block of Komaram Bheem Asifabad district, during a tree plantation drive. (29.06.2019) pic.twitter.com/pZ0H3Qg2Ud
— ANI (@ANI) June 30, 2019
ತೆಲಂಗಾಣ ಸರ್ಕಾರದ ‘ಹರಿತಾ ಹರಮ್’ ಪ್ಲಾಂಟೇಶನ್ ಡ್ರೈವ್ನ ಅಂಗವಾಗಿ ಎಫ್ಆರ್ಒ ಸಿ ಅನಿತಾ ಅವರು ಭಾನುವಾರ ಬೆಳಿಗ್ಗೆ ಸಿರ್ಪುರ ಮಂಡಲದ ಸರಸಲಾ ಗ್ರಾಮಕ್ಕೆ ಸಸಿಗಳನ್ನು ನೆಡಲು ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಮೀಸಲು ಅರಣ್ಯ ಭೂಮಿಯನ್ನು ಗುರುತಿಸಿ 20 ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಸಿಗಳನ್ನು ನೆಡಲು ಪ್ರಾರಂಭಿಸಿದರು. ಆದರೆ, ಇದು ತಮ್ಮ ಜಮೀನು ಎಂದು ಹೇಳಿಕೊಂಡ ಕೆಲವು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಕೋಲು ಮತ್ತು ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿದರು ಎನ್ನಲಾಗಿದೆ.
ಕೆಲವು ಗ್ರಾಮಸ್ಥರು ಕೊನೇರು ಕೃಷ್ಣ ರಾವ್ ಅವರನ್ನು ಕರೆದರು.ಆಗ ತನ್ನ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದ ನಂತರ, ಕೃಷ್ಣ ರಾವ್ ಅವರು ಅರಣ್ಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು ಎನ್ನಲಾಗಿದೆ. ಆಗ ಎಫ್ಆರ್ಒ ಅನಿತಾ ಟ್ರ್ಯಾಕ್ಟರ್ಗೆ ಹತ್ತಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದರೂ ಕೂಡ ,ರಾವ್ ಅವರನ್ನು ಹಿಂಬಾಲಿಸಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಇದೇ ವೇಳೆ ಇತರ ಅರಣ್ಯ ಸಿಬ್ಬಂದಿಯನ್ನು ಸಹ ಥಳಿಸಿದ್ದಾರೆ ಎನ್ನಲಾಗಿದೆ.