ವಿಶ್ವಕಪ್ ಟೂರ್ನಿ ಶುಭಾರಂಭ ಮಾಡಿದ ಭಾರತಕ್ಕೆ ಮುಂದಿನ ಎದುರಾಳಿ ಯಾರು? ಪಂದ್ಯ ಎಲ್ಲಿ-ಯಾವಾಗ? ಇಲ್ಲಿದೆ ವಿವರ

World Cup 2023 IND vs AFG: ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇದುವರೆಗೆ ಕೇವಲ 3 ಏಕದಿನ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯ ಟೈ ಆಗಿದೆ. ಇದೀಗ ಮತ್ತೊಮ್ಮೆ ಈ ಎರಡು ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗಲಿವೆ

Written by - Bhavishya Shetty | Last Updated : Oct 9, 2023, 05:43 PM IST
    • ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇದುವರೆಗೆ ಕೇವಲ 3 ಏಕದಿನ ಪಂದ್ಯಗಳು ನಡೆದಿವೆ
    • ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ
    • ಟೀಂ ಇಂಡಿಯಾ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು.
ವಿಶ್ವಕಪ್ ಟೂರ್ನಿ ಶುಭಾರಂಭ ಮಾಡಿದ ಭಾರತಕ್ಕೆ ಮುಂದಿನ ಎದುರಾಳಿ ಯಾರು? ಪಂದ್ಯ ಎಲ್ಲಿ-ಯಾವಾಗ? ಇಲ್ಲಿದೆ ವಿವರ title=
india vs afghanistan

World Cup 2023 IND vs AFG: ವಿಶ್ವಕಪ್ 2023ರಲ್ಲಿ ಭಾರತದ ಎರಡನೇ ಪಂದ್ಯವು ಅಫ್ಘಾನಿಸ್ತಾನ ವಿರುದ್ಧ ನಡೆಯಲಿದೆ. ಈ ಪಂದ್ಯ ಅಕ್ಟೋಬರ್ 11 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು.

ಇದನ್ನೂ ಓದಿ: 4K Google TV: ಕಡಿಮೆ ಬೆಲೆಗೆ ಅದ್ಭುತ ವೈಶಿಷ್ಟ್ಯ ಹೊಂದಿರುವ 65-ಇಂಚಿನ ಸ್ಮಾರ್ಟ್ ಟಿವಿ

ಇನ್ನು ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇದುವರೆಗೆ ಕೇವಲ 3 ಏಕದಿನ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯ ಟೈ ಆಗಿದೆ. ಇದೀಗ ಮತ್ತೊಮ್ಮೆ ಈ ಎರಡು ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಪಂದ್ಯ ಮಾರ್ಚ್ 2014ರಲ್ಲಿ ನಡೆದಿತ್ತು. ಮೀರ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌’ಗಳ ಜಯ ಸಾಧಿಸಿತ್ತು. ಎರಡನೇ ಪಂದ್ಯವನ್ನು ಸೆಪ್ಟೆಂಬರ್ 2018 ರಲ್ಲಿ ಆಡಲಾಯಿತು. ಈ ಪಂದ್ಯ ಟೈ ಆಗಿತ್ತು. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಮತ್ತು ಕೊನೆಯ ODI ಜೂನ್ 2019 ರಲ್ಲಿ ನಡೆಯಿತು. ಈ ಪಂದ್ಯವನ್ನು ಭಾರತ 11 ರನ್‌’ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 224 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ ತಂಡ 213 ರನ್‌’ಗಳಿಗೆ ಆಲೌಟ್ ಆಯಿತು.

ಇದನ್ನೂ ಓದಿ: ಒಂದೇ ತಿಂಗಳು ಬರುವ ಗ್ಯಾಸ್ ಎರಡು ತಿಂಗಳವರೆಗೆ ಬಳಸಬೇಕೇ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

2023ರ ವಿಶ್ವಕಪ್‌’ನಲ್ಲಿ ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ಎಂಬುದು ಗಮನಾರ್ಹ. ಈ ಮೂಲಕ ಟೀಂ ಇಂಡಿಯಾ 6 ವಿಕೆಟ್‌’ಗಳ ಜಯ ಸಾಧಿಸಿತ್ತು. ಈಗ ಅಫ್ಘಾನಿಸ್ತಾನ ವಿರುದ್ಧ ಪಂದ್ಯ ನಡೆಯಲಿದೆ. ಇದಾದ ನಂತರ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ. ಅಹಮದಾಬಾದ್‌’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಭಾರತ ತಂಡ ಸೆಮಿಫೈನಲ್‌’ಗೂ ಮುನ್ನ ಕೊನೆಯ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ನವೆಂಬರ್ 12 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News