White Hair Treatment: ಯಾವುದೇ ಔಷಧಿ ಬೇಕಿಲ್ಲ, ಅಕಾಲಿಕ ಬಿಳಿ ಕೂದಲಿಗೆ ಶಾಶ್ವತ ಪರಿಹಾರ ನೀಡುತ್ತೇ ಈ ಎಣ್ಣೆ

White Hair Treatment: ತುಂಬಾ ಚಿಕ್ಕ ವಯಾಸ್ಸಿನಲ್ಲಿ ಕಾಣಿಸಿಕೊಳ್ಳುವ ಬಿಳಿ ಕೂದಲಿನ ಸಮಸ್ಯೆ ಯುವಕ-ಯುವತಿಯಲ್ಲಿ ಒಂದು ರೀತಿಯ ಟೆನ್ಷನ್ ಅನ್ನು ಹೆಚ್ಚಿಸುತ್ತದೆ.  ಮಾತ್ರವಲ್ಲ, ಅದು ಕೆಲವರಲ್ಲಿ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ನೀವು ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಎರಡೇ ಎರಡು ಪದಾರ್ಥವನ್ನು ಬಳಸಿ ಆರೋಗ್ಯಕರವಾಗಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು. 

Written by - Yashaswini V | Last Updated : Jul 13, 2023, 02:51 PM IST
  • ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕೂದಲಿಗೆ ಸರಿಯಾಗಿ ಆರೈಕೆ ಮಾಡದೇ ಇರುವುದು ಸಹ ಅಕಾಲಿನ ಬಿಳಿ ಕೂದಲಿನ ಸಮಸ್ಯೆಗೆ ಕಾರಣವಾಗುತ್ತದೆ.
  • ಇದನ್ನು ತಪ್ಪಿಸಲು ನಿಯಮಿತವಾಗಿ ಕೂದಲಿಗೆ ಆರೈಕೆ ಮಾಡುವುದು ಅಗತ್ಯ.
  • ಕೆಲವರು ಕೂದಲ ಆರೈಕೆ ಮಾಡುವುದರ ಹೊರತಾಗಿಯೂ ಎಂದರೆ ಸರಿಯಾಗಿ ಎಣ್ಣೆ ಆರೈಕೆ ಮಾಡುವುದರ ಹೊರತಾಗಿಯೂ ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಟಿಪ್ಸ್ ಒಮ್ಮೆ ಅನುಸರಿಸಿ ನೋಡಿ...
White Hair Treatment: ಯಾವುದೇ ಔಷಧಿ ಬೇಕಿಲ್ಲ, ಅಕಾಲಿಕ ಬಿಳಿ ಕೂದಲಿಗೆ ಶಾಶ್ವತ ಪರಿಹಾರ ನೀಡುತ್ತೇ ಈ ಎಣ್ಣೆ title=
White Hair Treatment At Home

White Hair Treatment At Home: ಬದಲಾದ ಓಟದ ಜೀವನಶೈಲಿಯಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿ ನೆರೆಕೂದಲು ಎಂದರೆ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಯುವಕ-ಯುವತಿಯರಲ್ಲಿ ಕಾಣಿಸಿಕೊಳ್ಳುವ ಈ ಬಿಳಿ ಕೂದಲುಗಳು ಒಂದು ರೀತಿಯಲ್ಲಿ ಅವರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ ಎಂಬುದೂ ಕೂಡ ಸುಳ್ಳಲ್ಲ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹಾಗಂತ, ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ನೀವು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ರಾಸಾಯನಿಕಗಳ ಮೊರೆ ಹೋಗುವ ಅಗತ್ಯವೂ ಇಲ್ಲ. ಬದಲಿಗೆ ನಿಮ್ಮ ಅಡುಗೆ ಮನೆಯಲ್ಲಿ ಬಹಳ ಸುಲಭವಾಗಿ ಲಭ್ಯವಿರುವ ಎರಡೇ ಎರಡು ಪದಾರ್ಥಗಳ ಸಹಾಯದಿಂದ ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲುಗಳನ್ನು ಕಪ್ಪಾಗಿ ಬದಲಾಯಿಸಬಹುದು. 

ಹೌದು, ಪ್ರತಿ ಅಡುಗೆ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಫೆನ್ನೆಲ್ ಅಥವಾ ಸೋಂಪು ಮತ್ತು ಕೊಬ್ಬರಿ ಎಣ್ಣೆಯ ಸಹಾಯದಿಂದ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ದೊರೆಯಲಿದೆ. 

ಇದನ್ನೂ ಓದಿ- ಡಾರ್ಕ್ ಸರ್ಕಲ್ ನಿವಾರಣೆಗೆ ಸುಲಭ ಪರಿಹಾರ ನೀಡುವ ಮನೆಮದ್ದುಗಳು

ಫೆನ್ನೆಲ್ ಎಣ್ಣೆಯ ಬಳಕೆಯಿಂದ ನೀವು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಮಾತ್ರವಲ್ಲ, ಇದರಿಂದ ಕೂದಲು ಉದುರುವ ಸಮಸ್ಯೆಗಳಿಗೂ ಕೂಡ ಸುಲಭ ಪರಿಹಾರ ದೊರೆಯಲಿದೆ. ಹಾಗಂತ ನೀವು ಈ ಎಣ್ಣೆಯನ್ನು ಮಾರುಕಟ್ಟೆಯಲ್ಲಿ ಹುಡುಕುವ ಅಗತ್ಯವಿಲ್ಲ ನಿಮ್ಮ ಮನೆಯಲ್ಲಿಯೇ ಈ ಎಣ್ಣೆಯನ್ನು ಸುಲಭವಾಗಿ ತಯಾರಿಸಬಹುದು. 

ಫೆನ್ನೆಲ್‌ ಕೂದಲಿಗೆ ಹೇಗೆ ಪ್ರಯೋಜನಕಾರಿ? 
ವಾಸ್ತವವಾಗಿ, ಫೆನ್ನೆಲ್ ಅನ್ನು ಸಾಮಾನ್ಯವಾಗಿ ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಇದನ್ನು ಆಹಾರದ ರುಚಿ ಹೆಚ್ಚಿಸಲು ಕೂಡ ಬಳಸಲಾಗುತ್ತದೆ. ಆದರೆ, ಫೆನ್ನೆಲ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಸಮೃದ್ಧವಾಗಿವೆ. ಇವು ಕೂದಲು ಉದುರುವಿಕೆ, ತಲೆ ಹೊಟ್ಟು, ಬಿಳಿ ಕೂದಲು ಹೀಗೆ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಮರ್ಥ್ಯವನ್ನು ಹೊಂದಿದೆ.  

ಇದನ್ನೂ ಓದಿ- Long Hair Tips: ಹೊಳೆಯುವ, ಉದ್ದ ಕೂದಲಿಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಹೀಗೆ ಬಳಸಿ

ಫೆನ್ನೆಲ್ ಎಣ್ಣೆಯನ್ನು ಮನೆಯಲ್ಲಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು: 
* ½ ಕಪ್ ಫೆನ್ನೆಲ್
* ಕೊಬ್ಬರಿ ಎಣ್ಣೆ 

ಫೆನ್ನೆಲ್ ಎಣ್ಣೆಯನ್ನು ಮನೆಯಲ್ಲಿ ತಯಾರಿಸುವ ವಿಧಾನ:
>> ಫೆನ್ನೆಲ್ ಎಣ್ಣೆಯನ್ನು ಮನೆಯಲ್ಲಿ ತಯಾರಿಸಲು ಮೊದಲಿಗೆ ಒಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ, ಅದು ಸ್ವಲ್ಪ ಬಿಸಿಯಾದ ನಂತರ ಅದರಲ್ಲಿ ಫೆನ್ನೆಲ್ ಎಂದರೆ ಸೋಂಪು ಬೀಜಗಳನ್ನು ಮಿಶ್ರಣ ಮಾಡಿ. 
>> ಈ ಎರಡನ್ನೂ ಸ್ವಲ್ಪ ಸಮಯದವರೆಗೆ ಚೆನ್ನಾಗಿ ಕುದಿಸಿ. 
>> ಅದು ಚೆನ್ನಾಗಿ ಕುದಿಯಲು ಪ್ರಾರಂಭಿಸಿದಾಗ ಉರಿಯನ್ನು ಮಧ್ಯಮವಾಗಿಸಿ ಮತ್ತೆ ಸ್ವಲ್ಪ ಸಮಯದವೆರೆಗೆ ಹಾಗೆ ಕಾಯಲು ಬಿಡಿ ನಂತರ ಸ್ಟೌವ್ ಆಫ್ ಮಾಡಿ. 
>> ನಂತರ ಈ ಮಿಶ್ರಣ ತಣ್ಣಗಾದ ಬಳಿಕ ಅದನ್ನು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿ. ನಿಯಮಿತವಾಗಿ ಕೂದಲಿಗೆ ಹಚ್ಚಿ. 

ನೆನಪಿಡಿ: ಈ ಎಣ್ಣೆಯನ್ನು ಬುಡದಿಂದ ಚೆನ್ನಾಗಿ ಅನ್ವಯಿಸಿ ಮಸಾಜ್ ಮಾಡುವುದರಿಂದ ನಿಮ್ಮ ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಮಾತ್ರವಲ್ಲದೆ ಕೂದಲಿನ ಬಹುತೇಕ ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಯುತ್ತದೆ. 

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.    

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News