Aadhaar-Ration Card Link: ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು ಸೆ.30 ಕೊನೆಯ ದಿನಾಂಕ

Aadhaar-Ration Card Link: 2 ಅಥವಾ ಅದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವವರು ಮತ್ತು ಅನರ್ಹರು ಸಬ್ಸಿಡಿ ದರದಲ್ಲಿ ಸಿಗುವ ಪಡಿತರವನ್ನು ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ರೇಷನ್ ಕಾರ್ಡ್‍ಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.  

Written by - Puttaraj K Alur | Last Updated : Jul 4, 2023, 09:43 PM IST
  • ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸಿದೆ
  • ಇದೀಗ ಸೆಪ್ಟೆಂಬರ್ 30ರವರೆಗೂ ನೀವು ಪಡಿತರ ಚೀಟಿಗೆ ಆಧಾರ್ ಕಾರ್ಡ್‍ಅನ್ನು ಲಿಂಕ್ ಮಾಡಬಹುದು
  • ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಸುಲಭ ಹಂತಗಳ ಬಗ್ಗೆ ತಿಳಿಯಿರಿ
Aadhaar-Ration Card Link: ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು ಸೆ.30 ಕೊನೆಯ ದಿನಾಂಕ title=
ಆಧಾರ್-ರೇಷನ್ ಕಾರ್ಡ್ ಲಿಂಕ್

ನವದೆಹಲಿ: ಇದೀಗ ಜೂನ್ 30ರ ನಂತರವೂ ನೀವು ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ನಿಮ್ಮ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರವು ಮತ್ತೆ ವಿಸ್ತರಿಸಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರ ಪಡಿತರ ಚೀಟಿ ವಿಚಾರದಲ್ಲಿ ಕಟ್ಟುನಿಟಿನ ನಿಯಮಗಳನ್ನು ಜಾರಿಗೊಳಿಸಿದೆ. ಉಚಿತ ಅಂತ್ಯೋದಯ ಅನ್ನ ಯೋಜನೆ ಯೋಜನೆಯನ್ನು ಪಡೆಯಲು ಆಧಾರ್‌ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೀಗಾಗಿ ಅನರ್ಹರನ್ನು ಪತ್ತೆಹಚ್ಚಲು ಮತ್ತು ಬಳಕೆದಾರರು ಬಹು ಪಡಿತರ ಚೀಟಿಗಳನ್ನು ಹೊಂದುವುದನ್ನು ತಡೆಯಲು ಸರ್ಕಾರ ಈ ನಿಯಮವನ್ನು ರೂಪಿಸಿದೆ. ನೀವು ನಿಮ್ಮ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಸ್ಥಳೀಯ ಪಡಿತರ ಕಚೇರಿಗೆ ಹೋಗಬೇಕು. ಇದೀಗ ಪಡಿತರ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಟೊಮೇಟೊ ಬೆಲೆ ಮುಗಿಲು ಮುಟ್ಟಲು ಇದೇ ಕಾರಣ! ಮತ್ತೆ ದರ ಇಳಿಕೆ ಯಾವಾಗ ?

ಆಧಾರ್-ಪಡಿತರ ಚೀಟಿ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30 ಕೊನೆಯ ದಿನಾಂಕವಾಗಿತ್ತು. ಇದೀಗ ಈ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಇದುವರೆಗೆ ತಮ್ಮ ದಾಖಲೆಗಳನ್ನು ಲಿಂಕ್ ಮಾಡದ ಜನರಿಗೆ ಸಾಕಷ್ಟು ಸಮಯ ಸಿಕ್ಕಂತಾಗಿದೆ. 

ಸೆಪ್ಟೆಂಬರ್ 30ರ ಕೊನೆಯ ದಿನಾಂಕದ ನಂತರ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಯಾರಿಗೂ ಅವಕಾಶವಿರುವುದಿಲ್ಲ. ಯುಐಡಿಎಐನ ವೆಬ್ಸೈಟ್ ಮೂಲಕ ರೇಷನ್ ಕಾರ್ಡ್ ಲಿಂಕ್ ಮಾಡಬಹುದು. ರಾಜ್ಯ ಪಿಡಿಎಸ್ ವೆಬ್ಸೈಟ್ ಮೂಲಕವೂ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಇದಲ್ಲದೆ ಸಮೀಪದ ಪಡಿತರ ಕಚೇರಿಗೆ ಹೋಗಿಯೂ ನೀವು ಉಚಿತವಾಗಿ ಆಧಾರ್ ನಂಬರ್ ಲಿಂಕ್ ಮಾಡಬಹುದಾಗಿದೆ.

ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವ ಹಂತಗಳು  

1) ಮೊದಲು ಅಧಿಕೃತ ವೆಬ್‌ಸೈಟ್ food.wb.gov.inಗೆ ಭೇಟಿ ನೀಡಿ .

2) ಅಗತ್ಯವಿರುವ ವಿವರಗಳನ್ನು ನಮೂದಿಸಿ: ಆಧಾರ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ.

3 'ಮುಂದುವರಿಸಿ' ಕ್ಲಿಕ್ ಮಾಡಿ.

4 ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಸ್ವೀಕರಿಸುತ್ತೀರಿ

5 OTP ನಮೂದಿಸಿ ಮತ್ತು ನಿಮ್ಮ ಪಡಿತರ ಮತ್ತು ಆಧಾರ್ ಅನ್ನು ಲಿಂಕ್ ಮಾಡಿ.

ಇದನ್ನೂ ಓದಿ: ಇನ್ನು ಕೂಡಾ ಪ್ಯಾನ್ ಜೊತೆ ಆಧಾರ್ ಲಿಂಕ್ ಆಗಿಲ್ಲವೇ ? ಚಿಂತೆ ಬೇಡ, ಈ ಕೆಲಸ ಮಾಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News