Zee Kannada News Opinion Poll Live: ಕೈ, ಕಮಲ, ದಳದ ಪೈಕಿ ಮೇಲುಗೈ ಸಾಧಿಸುವವರು ಯಾರು..? ಇಲ್ಲಿದೆ ಪ್ರಾಂತ್ಯವಾರು ಮಾಹಿತಿ 

ಮೇ 10 ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ಕ್ಕೆ ಅಂತಿಮ ಫಲಿತಾಂಶ ಹೊರಬೀಳಲಿದೆ. ಅದಕ್ಕೂ ಮೊದಲು,ಜೀ ಕನ್ನಡ ನ್ಯೂಸ್  MATRIZE ಸಂಸ್ಥೆಯ ಸಹಯೋಗದೊಂದಿಗೆ ಚುನಾವಣೆಗೆ ಸಂಬಂಧಿಸಿದಂತೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಮಾರ್ಚ್ 29 ಮತ್ತು ಏಪ್ರಿಲ್ 30 ರ ನಡುವೆ ಈ ಜನಾಭಿಪ್ರಾಯ ಸಂಗ್ರಹವನ್ನು ಮಾಡಲಾಗಿದೆ.ಈ ಸಮೀಕ್ಷೆಯಲ್ಲಿ ರಾಜ್ಯ  ವಿಧಾನಸಭೆಯ 224 ಸ್ಥಾನಗಳಿಗೆ ಸಂಬಂಧಿಸಿದಂತೆ 2 ಲಕ್ಷ 80 ಸಾವಿರ ಜನರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿದೆ.

Written by - Zee Kannada News Desk | Last Updated : May 1, 2023, 11:36 PM IST
  • ಜೀ ಕನ್ನಡ ನ್ಯೂಸ್ MATRIZE ಸಂಸ್ಥೆಯ ಸಹಯೋಗದೊಂದಿಗೆ ಚುನಾವಣೆಗೆ ಸಂಬಂಧಿಸಿದಂತೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ.
  • ಮಾರ್ಚ್ 29 ಮತ್ತು ಏಪ್ರಿಲ್ 30 ರ ನಡುವೆ ಈ ಜನಾಭಿಪ್ರಾಯ ಸಂಗ್ರಹವನ್ನು ಮಾಡಲಾಗಿದೆ.
  • ಈ ಸಮೀಕ್ಷೆಯಲ್ಲಿ ಕರ್ನಾಟಕ ವಿಧಾನಸಭೆಯ 224 ಸ್ಥಾನಗಳ ಕುರಿತು 2 ಲಕ್ಷ 80 ಸಾವಿರ ಜನರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿದೆ.
Zee Kannada News Opinion Poll Live: ಕೈ, ಕಮಲ, ದಳದ ಪೈಕಿ ಮೇಲುಗೈ ಸಾಧಿಸುವವರು ಯಾರು..? ಇಲ್ಲಿದೆ ಪ್ರಾಂತ್ಯವಾರು ಮಾಹಿತಿ  title=

ಬೆಂಗಳೂರು: ಮೇ 10 ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ಕ್ಕೆ ಅಂತಿಮ ಫಲಿತಾಂಶ ಹೊರಬೀಳಲಿದೆ. ಅದಕ್ಕೂ ಮೊದಲು,ಜೀ ಕನ್ನಡ ನ್ಯೂಸ್  MATRIZE ಸಂಸ್ಥೆಯ ಸಹಯೋಗದೊಂದಿಗೆ ಚುನಾವಣೆಗೆ ಸಂಬಂಧಿಸಿದಂತೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಮಾರ್ಚ್ 29 ಮತ್ತು ಏಪ್ರಿಲ್ 30 ರ ನಡುವೆ ಈ ಜನಾಭಿಪ್ರಾಯ ಸಂಗ್ರಹವನ್ನು ಮಾಡಲಾಗಿದೆ.ಈ ಸಮೀಕ್ಷೆಯಲ್ಲಿ ರಾಜ್ಯ  ವಿಧಾನಸಭೆಯ 224 ಸ್ಥಾನಗಳಿಗೆ ಸಂಬಂಧಿಸಿದಂತೆ 2 ಲಕ್ಷ 80 ಸಾವಿರ ಜನರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿದೆ.

ಜೀ ಕನ್ನಡ ನ್ಯೂಸ್ ಸಂಸ್ಥೆಯು ಮ್ಯಾಟ್ರಿಜ್ ಸಹಯೋಗದೊಂದಿಗೆ ನಡೆಸಿರುವ ಸಮೀಕ್ಷೆಯ ಪ್ರಕಾರ ಬಿಜೆಪಿ 103-115 ಸ್ಥಾನಗಳನ್ನು ಪಡೆಯಬಹುದು ಎನ್ನಲಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ 79-91 ಸ್ಥಾನಗಳಿಗೆ ಸಿಮಿತವಾದರೆ.ಇನ್ನೂ ಜೆಡಿಎಸ್  26-36 ಸೀಟುಗಳನ್ನು ಗೆಲ್ಲುವುದರ ಮೂಲಕ ಮತ್ತೆ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸಲಿದೆ ಎಂದು ಸಮೀಕ್ಷೆ ಹೇಳಿದೆ.ಇನ್ನೂ ಪಕ್ಷೇತರರು  1-3 ಸ್ಥಾನಗಳನ್ನು ಪಡೆಯಬಹುದು ಎನ್ನಲಾಗಿದೆ.

ಪ್ರಾಂತ್ಯವಾರು ಲೆಕ್ಕಾಚಾರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಕಲ್ಯಾಣ ಕರ್ನಾಟಕದಲ್ಲಿರುವ ಇತ್ತು 40 ಕ್ಷೇತ್ರಗಳಲ್ಲಿ ಬಿಜೆಪಿ 12-17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೆಸ್ ಪಕ್ಷವು 19-24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.ಇನ್ನೂ ಜೆಡಿಎಸ್ ಪಕ್ಷಕ್ಕೆ 1-3 ಕ್ಷೇತ್ರಗಲ್ಲಿ ಗೆಲುವು ಸಾಧಿಸಲಿದೆ.ಪಕ್ಷೇತರಿಗೆ 0-1 ಸ್ಥಾನ ಸಿಗಲಿದೆ ಎನ್ನುವುದು ಸಮೀಕ್ಷೆಯ ಲೆಕ್ಕಾಚಾರವಾಗಿದೆ.ಇನ್ನೂ ಮುಂಬೈ ಕರ್ನಾಟಕಕ್ಕೇ ಬರುವುದಾದರೆ ಇಲ್ಲಿರುವ ಒಟ್ಟು 50 ಕ್ಷೇತ್ರಗಳಲ್ಲಿ ಬಿಜೆಪಿ 27-32, ಕಾಂಗ್ರೆಸ್ ಪಕ್ಷ 19-24 ಹಾಗೂ ಜೆಡಿಎಸ್ ಗೆ 1-2 ಹಾಗೂ ಇತರೆ 0-1 ಇರಲಿದೆ.ಅದೇ ರೀತಿಯಾಗಿ ಮೈಸೂರು ಕರ್ನಾಟಕದಲ್ಲಿರುವ ಒಟ್ಟು 55 ಕ್ಷೇತ್ರಗಳಲ್ಲಿ ಬಿಜೆಪಿ  8-13, ಕಾಂಗ್ರೆಸ್ ಗೆ 18-23, ಜೆಡಿಎಸ್ ಪಕ್ಷಕ್ಕೆ 24-29 ಇನ್ನೂ ಇತರೆ 1-2 ಇರಲಿದೆ.ಮಧ್ಯ ಕರ್ನಾಟಕದ ಒಟ್ಟು 26 ಕ್ಷೇತ್ರಗಳಲ್ಲಿ ಬಿಜೆಪಿ 18-23, ಕಾಂಗ್ರೆಸ್ ಗೆ 3-8 ಹಾಗೂ ಜೆಡಿಎಸ್ 00,ಇತರೆ 00 ಸ್ಥಾನಗಳನ್ನು ಗಳಿಸಲಿವೆ ಎನ್ನಲಾಗಿದೆ.ಕರಾವಳಿ ಭಾಗದಲ್ಲಿರುವ 21 ಕ್ಷೇತ್ರಗಳಲ್ಲಿ ಬಿಜೆಪಿ 18-23 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಸಾಧ್ಯತೆ ಇದ್ದು, ಇನ್ನೂ ಕಾಂಗ್ರೆಸ್ ಪಕ್ಷವು 1-6 ಸ್ಥಾನಗಳಿಗೆ ಸೀಮಿತವಾಗಲಿದೆ. ಜೆಡಿಎಸ್ ಗೆ 00 ಹಾಗೂ ಇತರೆಗೆ 00 ಇರಲಿದೆ.ಇನ್ನೂ ಬೆಂಗಳೂರು ಮಹಾನಗರದ ಪ್ರದೇಶಕ್ಕೆ ಬರುವುದಾದರೆ ಒಟ್ಟು 32 ಕ್ಷೇತ್ರಗಳಲ್ಲಿ ಬಿಜೆಪಿ 13-18, ಕಾಂಗ್ರೆಸ್ 11-16 ಹಾಗೂ ಜೆಡಿಎಸ್ 0-2, ಇತರೆಗೆ 00 ಸ್ಥಾನಗಳು ಲಭಿಸಲಿವೆ.

ಒಟ್ಟಾರೆಯಾಗಿ ಅಂತಿಮ ಲೆಕ್ಕಾಚಾರಕ್ಕೆ ಬರುವುದಾದರೆ ಬಿಜೆಪಿಗೆ 103-115, ಕಾಂಗ್ರೆಸ್ ಪಕ್ಷಕ್ಕೆ 79-91 ಹಾಗೂ ಜೆಡಿಎಸ್ ಗೆ 26-29 ಇತರೆಗೆ 1-3 ಸ್ಥಾನಗಳು ಲಭಿಸಲಿವೆ ಎನ್ನಲಾಗಿದೆ.ಒಂದು ವೇಳೆ ಯಾವುದೇ ಪಕ್ಷವು ಬಹುಮತ ಪಡೆಯದೇ ಹೋದಲ್ಲಿ ಜೆಡಿಎಸ್ ಪಕ್ಷವು ಮತ್ತೆ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸಲಿದೆ ಎನ್ನುವುದನ್ನು ಜೀ ಕನ್ನಡ ನ್ಯೂಸ್ ಸಮೀಕ್ಷೆ ಮೂಲಕ ಕಂಡುಕೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

  

Trending News