ಲೇಡಿಸ್‌ ಮುಂದೆ ಪ್ಯಾಂಟ್ ಮೇಲೆ ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್...! ತಕ್ಷಣವೇ ಹೀಗೆ ಮಾಡೋದ..!

Ranbir Kapoor coffee : ಕೈಯಲ್ಲಿ ಕಾಫಿ ಕಪ್ ಹಿಡಿದು ಕುರ್ಚಿಯ ಮೇಲೆ ಕುಳಿತಿದ್ದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಂತರ ರಣಬೀರ್‌ ಇನ್ನೊಂದು ಕೈಯಲ್ಲಿದ್ದ ಮೈಕ್ ಸರಿಸುತ್ತಿದ್ದಂತೆ, ಅದು ಮಗ್‌ಗೆ ತಗುಲಿ ಬಿಸಿ ಕಾಫಿ ಅವರ ತೊಡೆಗಳ ಮೇಲೆ ಚೆಲ್ಲಿತು. 

Written by - Krishna N K | Last Updated : Apr 30, 2023, 04:31 PM IST
  • ರಣಬೀರ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.
  • ಸಂಪೂರ್ಣ ಕಪ್ಪು ಬಣ್ಣದ ಕ್ಯಾಶುಯಲ್ ಉಡುಪನ್ನು ಧರಿಸಿದ್ದರು.
  • ಕೈಯಲ್ಲಿ ಕಾಫಿ ಕಪ್ ಹಿಡಿದು ಕುರ್ಚಿಯ ಮೇಲೆ ಕುಳಿತಿದ್ದರು.
ಲೇಡಿಸ್‌ ಮುಂದೆ ಪ್ಯಾಂಟ್ ಮೇಲೆ ಬಿಸಿ ಕಾಫಿ ಚೆಲ್ಲಿಕೊಂಡ ರಣಬೀರ್...! ತಕ್ಷಣವೇ ಹೀಗೆ ಮಾಡೋದ..! title=

Ranbir Kapoor : ಬಾಲಿವುಡ್ ನಟ ರಣಬೀರ್ ಕಪೂರ್‌ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ನಟಿ ಆಲಿಯಾ ಭಟ್‌ ಅವರನ್ನು ಮದುವೆ ಆದ ನಂತರ ಸ್ವಲ್ಪ ಮಾಧ್ಯಮಗಳ ಮುಂದೆ ಬರ್ತೀದಾರೆ. ಇತ್ತೀಚಿಗೆ ರಣಬೀರ್‌ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು, ತಮ್ಮ ಪ್ಯಾಂಟ್‌ ಮೇಲೆ ಬಿಸಿ ಬಿಸಿ ಕಾಫಿ ಚೆಲ್ಲುಕೊಂಡಿ ಫಜೀತಿ ಅನುಭವಸಿದ ಘಟನೆ ನಡಿಯಿತು. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಣಬೀರ್ ಇತ್ತೀಚೆಗಷ್ಟೇ ತನ್ನ ತಾಯಿಯೊಂದಿಗೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಪೂರ್ಣ ಕಪ್ಪು ಬಣ್ಣದ ಕ್ಯಾಶುಯಲ್ ಉಡುಪನ್ನು ಧರಿಸಿದ್ದ ರಣಬೀರ್ ಹೆಚ್ಚು ಡ್ಯಾಪ್ಪರ್ ಆಗಿ ಕಾಣುತ್ತಿದ್ದರು. ಕೈಯಲ್ಲಿ ಕಾಫಿ ಕಪ್ ಹಿಡಿದು ಕುರ್ಚಿಯ ಮೇಲೆ ಕುಳಿತಿದ್ದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಂತರ ರಣಬೀರ್‌ ಇನ್ನೊಂದು ಕೈಯಲ್ಲಿದ್ದ ಮೈಕ್ ಸರಿಸುತ್ತಿದ್ದಂತೆ, ಅದು ಮಗ್‌ಗೆ ತಗುಲಿ ಬಿಸಿ ಕಾಫಿ ಅವರ ತೊಡೆಗಳ ಮೇಲೆ ಚೆಲ್ಲಿತು. ಅವನು ಬೇಗನೆ ಕುರ್ಚಿಯಿಂದ ಎದ್ದು, ಆಸನದಿಂದ ಹೊಗೆ ಹೊರಬರುವುದನ್ನು ವೈರಲ್‌ ವಿಡಿಯೋದಲ್ಲಿ ಕಾಣಬಹುದು.

 

ಇದನ್ನೂ ಓದಿ:  ಈ ನಟಿಯನ್ನು ಒಂದು ಕಾಲದಲ್ಲಿ ದೇವತೆಯಂತೆ ಪೂಜಿಸಲಾಗುತ್ತಿತ್ತು! ಆ ಒಂದು ಫೋಟೋಶೂಟ್ ಎಲ್ಲವನ್ನೂ ಹಾಳುಮಾಡಿತು

ಇನ್ನು ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದಾರೆ. ಕೆಲವೊಂದಿಷ್ಟು ಜನ ʼಜಸ್ಟ್‌ ಮೀಸ್‌ʼ ಅಂತ ಇನ್ನು ಕೆಲವರು ʼಹುಷಾರು ಗುರುʼ ಅಂತ ಡಬಲ್‌ ಮೀನಿಂಗ್‌ನಲ್ಲಿ ಕಾಮೆಂಟ್‌ ಮಾಡಿ ರಣಬೀರ್‌ ಕಾಲೆಳೆದಿದ್ದಾರೆ. ಶುಕ್ರವಾರ ಸಂಜೆ ಅವರ ತಾಉಇ ನೀತು ಕಪೂರ್‌ ಜೊತೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಇನ್ನು ರಣಬೀರ್ ಸಿನಿಮಾ ವಿಚಾರವಾಗಿ ಹೇಳುವುದಾದರೆ, ಅವರು ತಮ್ಮ ಮುಂಬರುವ ಚಿತ್ರ ಅನಿಮಲ್ ನಿರ್ಮಾಣದಲ್ಲಿ ಬ್ಯುಸಿಯಾಗಿದಾರೆ. ಚಿತ್ರದ ಶೂಟಿಂಗ್ ಸೆಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಹೊಸ ವರ್ಷದಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಅನಿಮಲ್ ಚಿತ್ರದ ಪೋಸ್ಟರ್ ಅನ್ನು ಟ್ವೀಟ್ ಮೂಲಕ ರಿಲೀಸ್‌ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News