ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಅಖಿಲೇಶ್ ಯಾದವ್ ರೆಡ್ ಸಿಗ್ನಲ್

ಯಾವುದೇ ಕಾರಣಕ್ಕೂ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರುವ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸುಳಿವು ನೀಡಿದ್ದಾರೆ.

Last Updated : Dec 27, 2018, 07:07 PM IST
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಅಖಿಲೇಶ್ ಯಾದವ್ ರೆಡ್ ಸಿಗ್ನಲ್ title=

ಲಕ್ನೋ: ಯಾವುದೇ ಕಾರಣಕ್ಕೂ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರುವ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸುಳಿವು ನೀಡಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಬಳಿಕ ಮಿತ್ರಪಕ್ಷಗಳ ಮೇಲೆ ಕಾಂಗ್ರೆಸ್ ಅಧಿಕಾರ ಚಲಾಯಿಸುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಮುಂಬರುವ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳದಿರಲು ಅಖಿಲೇಶ್ ಯಾದವ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಮಧ್ಯಪ್ರದೇಶದಲ್ಲಿ ಏಕೈಕ ಎಸ್​​ಪಿ ಶಾಸಕನಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಡದೇ ಹೊರಗಿಟ್ಟ ಕಮಲನಾಥ್​ ಕ್ರಮಕ್ಕೆ ಅಖಿಲೇಶ್​ ಯಾದವ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮಹಾಘಟಬಂಧನ್​ ಮಾಡಿಕೊಳ್ಳುವ ಕಾಂಗ್ರೆಸ್​​ ಪ್ರಯತ್ನಕ್ಕೆ ಅಖಿಲೇಶ್​ ಯಾದವ್ ರೆಡ್​​ ಸಿಗ್ನಲ್ ತೋರಿದ್ದಾರೆ.

ಅಲ್ಲದೆ, ಜತೆಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಈಗಾಗಲೇ ಪ್ರಾದೇಶಿಕ ಪಕ್ಷಗಳ ಪ್ರತ್ಯೇಕ ಒಕ್ಕೂಟ ರಚನೆಗೆ ಮುಂದಾಗಿದ್ದಾರೆ. ಅದೊಂದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದ್ದಾರೆ. ಅದು ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷೇತರ ಸಂಘಟನೆಯಾಗಿರಲಿದೆ ಎಂದೂ ಸಹ ಅಖಿಲೇಶ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಮಹಾಘಟಬಂಧನ್ ನಿಂದ ದೂರ ಉಳಿಯಲು ಅಖಿಲೇಶ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. 

Trending News