ನವದೆಹಲಿ: ಬಿಜೆಪಿ ರಾಜ್ಯಸಭಾ ಸಂಸದ ಸಂಜಯ್ ಕಾಕಡೆ ಮಧ್ಯ ಪ್ರದೇಶದ ಫಲಿತಾಂಶ ಅಚ್ಚರಿ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Sanjay Kakade, BJP Rajya Sabha MP: I knew we would lose in Rajasthan & Chhattisgarh but MP trends have come as a surprise. I think we forgot the issue of development that Modi took up in 2014. Ram Mandir, statues & name changing became the focus. #AssemblyElectionResults2018 pic.twitter.com/pHXe4PwhPr
— ANI (@ANI) December 11, 2018
ಮಧ್ಯಪ್ರದೇಶ, ರಾಜಸ್ತಾನ,ಮತ್ತು ಚತ್ತೀಸ್ ಘಡ್ ದಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು " ರಾಜಸ್ತಾನ ಮತ್ತು ಛತ್ತೀಸ್ ಗಡ್ ದಲ್ಲಿ ನಾವು ಸೋಲುತ್ತೇವೆ ಎನ್ನುವುದು ಗೊತ್ತಿತ್ತು ಆದರೆ ಮಧ್ಯಪ್ರದೇಶದಲ್ಲಿನ ಬೆಳವಣಿಗೆ ನಿಜಕ್ಕೂ ಅಚ್ಚರಿ ಮೂಡಿಸಿದೆ. 2014ರಲ್ಲಿ ಅಭಿವೃದ್ದಿಯನ್ನು ಮೋದಿ ಮಾನದಂಡವನ್ನಾಗಿ ತಗೆದುಕೊಂಡಿರುವುದನ್ನು ನಾವು ಮರೆತಿದ್ದೇವೆ. ಅದರ ಬದಲಾಗಿ ರಾಮಮಂದಿರ, ಪ್ರತಿಮೆ, ಹೆಸರು ಬದಲಾವಣೆಯನ್ನು ಪ್ರಮುಖ ವಸ್ತುವನ್ನಾಗಿ ಮಾಡಿಕೊಂಡಿದ್ದೇವೆ ಎಂದು ಅವರು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮುಂಬರುವ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿಸಿದ್ದ ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅದರಲ್ಲೂ ಬಿಜೆಪಿ ಅಧಿಕಾರದಲ್ಲಿದ್ದ ಮಧ್ಯಪ್ರದೇಶ,ರಾಜಸ್ತಾನ ಮತ್ತು ಚತ್ತೀಸ್ ಘಡ್ ನಲ್ಲಿ ಭಾರಿ ಹಿನ್ನಡೆಯಾಗಿದೆ.ಈ ಚುನಾವಣೆಯ ಫಲಿತಾಂಶದ ಮೂಲಕವೇ 2019 ರ ಚುನಾವಣೆ ಎದುರಿಸು ಸಿದ್ದತೆಯಲ್ಲಿದ್ದ ಬಿಜೆಪಿ ಗೆ ಭಾರಿ ಮುಖ ಭಂಗ ಅನುಭವಿಸುವಂತಾಗಿದೆ.