FIFA WORLD CUP 2022: ವಿಮಾನ ಹಾರಾಟದಲ್ಲೂ ಫೀಫಾ ವರ್ಲ್ಡ್ ಕಪ್ ಪಂದ್ಯದ ನೇರಪ್ರಸಾರ ವೀಕ್ಷಿಸುತ್ತಿರುವ ಪ್ರಯಾಣಿಕರು- ವಿಡಿಯೋ ವೈರಲ್

FIFA WORLD CUP 2022: ಪ್ರಸ್ತುತ ಎಲ್ಲಿ ನೋಡಿದರೂ ಫೀಫಾ ವರ್ಲ್ಡ್ ಕಪ್ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಕೇವಲ ಭೂಮಿಯ ಮೇಲೆ ಮಾತ್ರವಲ್ಲ 40,000 ಅಡಿಗಳಷ್ಟು ಎತ್ತರದ ಆಗಸದಲ್ಲಿಯೂ ಫೀಫಾ ವಿಶ್ವಕಪ್ ಸಖತ್ ಸದ್ದು ಮಾಡುತ್ತಿದೆ. ಅದೇನು ಅಂತಿರಾ... ಈ ವೈರಲ್ ವಿಡಿಯೋ ಒಮ್ಮೆ ವೀಕ್ಷಿಸಿ... 

Written by - Yashaswini V | Last Updated : Dec 1, 2022, 08:17 AM IST
  • ಈಗಂತೂ ಎಲ್ಲಿ ನೋಡಿದರೂ ಫೀಫಾ ವಿಶ್ವಕಪ್ ನದ್ದೇ ಹವಾ!
  • ಆದರೆ, ನಾವು ಎಲ್ಲಾದರೂ ಪ್ರಯಾಣಿಸುವಾಗ, ಅದರಲ್ಲೂ ವಿಮಾನದಲ್ಲಿ ಪ್ರಯಾಣಿಸುವಾಗ ಪಂದ್ಯದ ನೇರ ಪ್ರಸಾರ ವೀಕ್ಷಿಸಲು ಸಾಧ್ಯವೇ?
  • ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗುತ್ತಿರುವ ವಿಡಿಯೋ ಈ ಬಗ್ಗೆ ಏನ್ ಹೇಳುತ್ತೆ ಗೊತ್ತಾ..!
FIFA WORLD CUP 2022: ವಿಮಾನ ಹಾರಾಟದಲ್ಲೂ ಫೀಫಾ ವರ್ಲ್ಡ್ ಕಪ್ ಪಂದ್ಯದ ನೇರಪ್ರಸಾರ ವೀಕ್ಷಿಸುತ್ತಿರುವ ಪ್ರಯಾಣಿಕರು- ವಿಡಿಯೋ ವೈರಲ್  title=
FIFA World Cup 2022 Viral Video

 FIFA WORLD CUP 2022: ಅಬ್ಬಬ್ಬಾ... ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ ಫೀಫಾ ವಿಶ್ವಕಪ್ ನದ್ದೇ ಹವಾ! 2022ರ ಈ ಮೆಗಾ ಈವೆಂಟ್‌ನಲ್ಲಿ ತಮ್ಮ ನೆಚ್ಚಿನ ತಂಡಗಳ, ತಮ್ಮ ನೆಚ್ಚಿನ ಆಟಗಾರರ ಫುಟ್‌ಬಾಲ್  ಆಟವನ್ನು ವೀಕ್ಷಿಸಲು ಕೋಟ್ಯಾಂತರ ಅಭಿಮಾನಿಗಳು ಕಾದುಕುಳಿತಿದ್ದಾರೆ. ಆದರೆ, ನಾವು ಎಲ್ಲಾದರೂ ಪ್ರಯಾಣಿಸುವಾಗ, ಅದರಲ್ಲೂ ವಿಮಾನದಲ್ಲಿ ಪ್ರಯಾಣಿಸುವಾಗ ಪಂದ್ಯದ ನೇರ ಪ್ರಸಾರ ವೀಕ್ಷಿಸಲು ಸಾಧ್ಯವೇ? ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗುತ್ತಿರುವ ವಿಡಿಯೋ ಈ ಬಗ್ಗೆ ಏನ್ ಹೇಳುತ್ತೆ ಗೊತ್ತಾ..! 

ಪ್ರಸ್ತುತ, ಸೋಶಿಯಲ್ ಮಿಡಿಯಾದಲ್ಲಿ ವಿಮಾನ ಹಾರಾಟದ ಸಮಯದಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಫೀಫಾ ವರ್ಲ್ಡ್ ಕಪ್ 2022 ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಾಸ್ತವವಾಗಿ, ಫುಟ್‌ಬಾಲ್ ಅಭಿಮಾನಿಗಳಿಗಾಗಿ ಎತಿಹಾದ್ ಏರ್‌ವೇಸ್‌ನಂತಹ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಪಂದ್ಯಾವಳಿಯ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸುವ ಸೌಲಭ್ಯವನ್ನು ಆರಂಭಿಸಿವೆ. ಇದನ್ನು ಸದುಪಯೋಗ ಪಡೆಸಿಕೊಂಡಿರುವ ವಿಮಾನದಲ್ಲಿದ್ದ ಬಹುತೇಕ ಎಲ್ಲಾ ಪ್ರಯಾಣಿಕರು ಫ್ಲೈಟ್‌ನಲ್ಲೂ ಫೀಫಾ ವರ್ಲ್ಡ್ ಕಪ್ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದು, ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

 
 
 
 
 

 
 
 
 
 
 
 
 
 
 
 

A post shared by Pubity (@pubity)

ಇದನ್ನೂ ಓದಿ- FIFA World Cupನಲ್ಲಿ ಸೋತ ಬೆಲ್ಜಿಯಂ: ಕೋಪಗೊಂಡ ಅಭಿಮಾನಿಗಳಿಂದ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿ, ವಾಹನಗಳಿಗೆ ಬೆಂಕಿ

ಫ್ಲೈಟ್‌ನಲ್ಲೂ ಫೀಫಾ ವರ್ಲ್ಡ್ ಕಪ್ ಪಂದ್ಯದ ನೇರ ಪ್ರಸಾರ ವೀಕ್ಷಿಸುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ  'ಪ್ಯುಬಿಟಿ' ಎಂಬ ಪುಟದಿಂದ ಶೇರ್ ಮಾಡಲಾಗಿದ್ದು,  'ಪ್ಯುಬಿಟಿ' ಮೂಲತಃ 'ಡೇನಿಯಲಾಕ್ನಿಯೆಟೊ'ದ ಬಳಕೆದಾರರು ಎಂದು ಹೇಳಲಾಗುತ್ತದೆ. ಈವರೆಗೆ ಈ ಅಪರೂಪದ ವಿಡಿಯೋ ಪೋಸ್ಟ್‌ಗೆ 557 ಸಾವಿರ ಲೈಕ್‌ಗಳು ಬಂದಿವೆ. ಆದಾಗ್ಯೂ, ಈ ವೈರಲ್ ವಿಡಿಯೋವನ್ನು ಯಾವ ವಿಮಾನದಲ್ಲಿ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ನೀಡಿಲ್ಲವಾದರೂ, ಇದು ಎತಿಹಾದ್ ಏರ್‌ವೇಸ್ ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. 

ಇದನ್ನೂ ಓದಿ- Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ಬಳಸುವ Smartphone ಯಾವುದು ಗೊತ್ತಾ? ಇದರ ಬೆಲೆ ಎಷ್ಟು?

ಕತಾರ್ ಏರ್‌ವೇಸ್‌ನಂತಹ ಅನೇಕ ವಿಮಾನಯಾನ ಸಂಸ್ಥೆಗಳು ದೋಹಾ ಟ್ರಾವೆಲ್ ಪ್ಯಾಕೇಜುಗಳೊಂದಿಗೆ ಪ್ರಯಾಣಿಸುವವರಿಗೆ ಫೀಫಾ ವರ್ಲ್ಡ್ ಕಪ್  ಪಂದ್ಯಾವಳಿಯ ಪಂದ್ಯಗಳಿಗೆ ಟಿಕೆಟ್‌ಗಳನ್ನು ನೀಡಲು ಪ್ರಾರಂಭಿಸಿದ್ದರಿಂದ ಅನೇಕ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಭಿನ್ನ ರೀತಿಯ ಕ್ರಮಗಳನ್ನು ಕೈಗೊಂಡಿವೆ. ಎತಿಹಾದ್ ಏರ್‌ವೇಸ್ ಜೊತೆಗೆ, ಅನೇಕ ಏರ್‌ಲೈನ್‌ಗಳು ಫೀಫಾ ವಿಶ್ವಕಪ್ 2022 ಪಂದ್ಯಗಳ ನೇರ ಪ್ರಸಾರ ವೀಕ್ಷಿಸಲು ಅಭಿಮಾನಿಗಳಿಗೆ ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿವೆ.  ಜೆಟ್‌ಬ್ಲೂ ಮತ್ತು ಸಿಂಗಾಪುರ್ ಏರ್‌ಲೈನ್ಸ್ ವಿಮಾನಗಳಲ್ಲಿಯೂ ಅಭಿಮಾನಿಗಳು ಫೀಫಾ ವಿಶ್ವಕಪ್ 2022ರ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd

Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

  

Trending News