ಸೌಂದರ್ಯ ವೃದ್ಧಿಗೆ ಲಾಭದಾಯಕ ಹೂವುಗಳಿವು

ಹೂವುಗಳು

ಕೆಲವು ಹೂವುಗಳಲ್ಲಿ ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ ಗುಣಗಳು ಕಂಡುಬರುತ್ತದೆ. ಇವುಗಳ ಬಳಕೆಯಿಂದ ಕಾಂತಿಯುತ, ಕೋಮಲ ಚರ್ಮವನ್ನು ಪಡೆಯಬಹುದು. ಅಂತಹ ಹೂವುಗಳೆಂದರೆ...

ಗುಲಾಬಿ

ಗುಲಾಬಿ ಚರ್ಮವನ್ನು ಸಂಪೂರ್ಣವಾಗಿ ಹೈಡ್ರೇಟ್ ಮಾಡುತ್ತದೆ. ಸೂಕ್ಷಮ ತ್ವಚೆ ಹೊಂದಿರುವವರಿಗೆ ಗುಲಾಬಿ ಹೂವಿನ ಬಳಕೆ ಹೆಚ್ಚು ಲಾಭದಾಯಕವಾಗಿದೆ.

ದಾಸವಾಳ

ದಾಸವಾಳದ ಹೂವಿನ ಫೇಸ್ ಪ್ಯಾಕ್ ತಯಾರಿಸಿ ಬಳಸುವುದರಿಂದ ಡೆಡ್ ಸ್ಕಿನ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಕಮಲ

ಕಮಲದ ಹೂವಿನ ದಳಗಳನ್ನು ಹಸಿ ಹಾಲಿನಲ್ಲಿ, ಶ್ರೀಗಂಧದ ಪುಡಿಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಚೆಂಡು ಹೂ

ವಾರಕ್ಕೆ ಒಂದೆರಡು ಬಾರಿ ಚೆಂಡು ಹೂ ನಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿದರೆ ಎಣ್ಣೆಯುಕ್ತ ಚರ್ಮ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಮಲ್ಲಿಗೆ ಹೂ

ಮಲ್ಲಿಗೆ ಹೂವಿನಲ್ಲಿ ಕಂಡು ಬರುವ ಆಂಟಿ ಏಜಿಂಗ್ ಅಂಶಗಳು ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹಾಯಕವಾಗಿದೆ. ಇದು ಚರ್ಮದ ಟೋನ್ ಅನ್ನು ಸಮಗೊಳಿಸುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story