Vastu Tips: ವಾಸ್ತುಶಾಸ್ತ್ರದ ಈ ನಿಯಮಗಳ ಅನುಸರಣೆ ಮನೆಯಲ್ಲಿ ಸುಖ-ಸಮೃದ್ಧಿಗೆ ಕಾರಣ, ವಿಶೇಷ ಗಮನ ಹರಿಸಿ

Vastu Tips For Happiness - ವಾಸ್ತು ಶಾಸ್ತ್ರದಲ್ಲಿ ನೀವು ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವಿಗೆ ವಿಶೇಷ ಮಹತ್ವವಿದೆ. ವಾಸ್ತುವಿನ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಸದಾ ನೆಲೆಸುತ್ತದೆ. ಇದಲ್ಲದೆ ಧನಲಾಭದ ಯೋಗಗಳು ಕೂಡ ನಿರ್ಮಾಣವಾಗುತ್ತವೆ.  

Written by - Nitin Tabib | Last Updated : Apr 9, 2022, 08:18 PM IST
  • ಧನಲಾಭದ ಯೋಗ ನಿರ್ಮಾಣಗೊಳ್ಳುತ್ತದೆ
  • ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ
  • ಮನೆಯಲ್ಲಿ ಸುಖ-ಸಮೃದ್ಧಿಯ ಸಂಚಾರ ಉಂಟಾಗುತ್ತದೆ
Vastu Tips: ವಾಸ್ತುಶಾಸ್ತ್ರದ ಈ ನಿಯಮಗಳ ಅನುಸರಣೆ ಮನೆಯಲ್ಲಿ ಸುಖ-ಸಮೃದ್ಧಿಗೆ ಕಾರಣ, ವಿಶೇಷ ಗಮನ ಹರಿಸಿ title=
Vastu Tips

ನವದೆಹಲಿ: Vastu Tips For Prosperity - ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಮನೆಯ ವಾಸ್ತು ದೋಷವು ಸಂತೋಷದಿಂದ ತುಂಬಿದ ಮನೆಯಲ್ಲಿಯೂ ಕೂಡ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎನ್ನಲಾಗುತ್ತದೆ. ನೀವು ಮನೆಯಲ್ಲಿ ಇರಿಸುವ ಎಲ್ಲಾ ವಸ್ತುವಿಗೆ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವವಿದೆ. ಹೀಗಿರುವಾಗ, ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿಯ ಹರಿವು ಹೆಚ್ಚಾಗುತ್ತದೆ. 

ವಾಸ್ತುವಿನ ಈ ನಿಯಮಗಳನ್ನು (Vastu Tips For Home) ಅನುಸರಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ
>> ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಕಸದ ತೊಟ್ಟಿಯನ್ನು ಇಡಬಾರದು. ಹೀಗೆ ಮಾಡುವುದರಿಂದ ನೆರೆಹೊರೆಯವರು ವಿರೋಧಿಗಳಾಗಬಹುದು. ಇದರಿಂದಾಗಿ ಜೀವನದಲ್ಲಿ ಒತ್ತಡ ಉಂಟಾಗಬಹುದು.

>> ವಾಸ್ತು ಶಾಸ್ತ್ರದ ಪ್ರಕಾರ, ಧಾನ್ಯಗಳು ಅಥವಾ ಹಾಸಿಗೆಗಳನ್ನು ಮನೆಯ ಛಾವಣಿಯ ಮೇಲೆ ತೊಳೆಯಬಾರದು. ವಾಸ್ತವದಲಿ ಹೀಗೆ ಮಾಡುವುದರಿಂದ ಅತ್ತೆಯೊಂದಿಗಿನ ಸಂಬಂಧಗಳು ಹುಳಿಯಾಗುತ್ತವೆ. ಆದರೆ, ತೊಳೆದ ಹಾಸಿಗೆಗಳನ್ನು ನೀವು ಛಾವಣಿಯ ಮೇಲೆ ಒಣಗಿಸಬಹುದು.

>> ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಮುನ್ನ ಬಾತ್ ರೂಂನಲ್ಲಿನ ನೀರಿನ ಬಕೆಟ್ ಅನ್ನು ತುಂಬಿಸಿ ಇಡಬೇಕು. ಈ ರೀತಿ ಮಾಡುವುದರಿಂದ ಋಣಾತ್ಮಕ ಶಕ್ತಿ ದೂರವಾಗಿ ಜೀವನದಲ್ಲಿ ನೆಮ್ಮದಿ ಸಿಗುತ್ತದೆ.

>> ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ರಾತ್ರಿ ಸಮಯದಲ್ಲಿ ಮುಸುರಿ ಪಾತ್ರೆಗಳನ್ನು ಮನೆಯಲ್ಲಿ ಇಡಬಾರದು. ಇದರಿಂದ  ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗುತ್ತವೆ. ಇದರೊಂದಿಗೆ ಕುಟುಂಬದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳೂ ಕೂಡ ತಲೆದೂರುತ್ತವೆ. 

ಇದನ್ನೂ ಓದಿ-Durga Ashtami 2022: ಅಷ್ಠಮಿಯ ಈ ಶುಭ ಮುಹೂರ್ತದಲ್ಲಿಯೇ ನೆರವೇರಿಸಿ ಕನ್ಯಾ ಪೂಜೆ

>> ಸಾಮಾನ್ಯವಾಗಿ ಹಬ್ಬದ ದಿನ ಮನೆಯಲ್ಲಿ ಪಾಯಸ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಸಕ್ಕರೆಯ ಬದಲಿಗೆ ಸಕ್ಕರೆ ಮಿಠಾಯಿ ಬಳಸಿ ಖೀರ್ ತಯಾರಿಸಿದರೆ, ಅದನ್ನು ಕುಟುಂಬದ ಎಲ್ಲಾ ಸದಸ್ಯರು ತಿನ್ನುತ್ತಾರೆ, ನಂತರ ಅದು ಹಣಕಾಸಿನ ಸಮಸ್ಯೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿ-Palmistry: ನಿಮ್ಮ ಅಂಗೈಯಲ್ಲೂ ಈ 3 ಸಂಗತಿಗಳಿವೆಯಾ? ಹಾಗಾದ್ರೆ, ನಿಮ್ಮ ಸಿರಿವಂತಿಕೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News