ನವಾಂಶ ಜಾತಕದ ಉಚ್ಛ ಭಾವದಲ್ಲಿ ಶನಿಯ ಸಂಚಾರ, 4 ರಾಶಿಗಳ ಜಾತಕದವರಿಗೆ ಭಾರಿ ಧನಲಾಭ

Saturn Transit 2023: ಜ್ಯೋತಿಷ್ಯದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಗ್ರಹಗಳ ಈ ನಡೆ ಹಾಗೂ ರಾಶಿ ಬದಲಾವಣೆ ಮಾನವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜನವರಿ 17 ರಂದು, ಶನಿದೇವ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭದಲ್ಲಿ ಸಾಗಿದ್ದಾನೆ ಮತ್ತು ಫೆಬ್ರವರಿ 14 ರವರೆಗೆ ಆತ ನವಾಂಶ ಜಾತಕದ ಉಚ್ಛ ಸ್ಥಾನದಲ್ಲಿಯೇ ವಿರಾಜಮಾನನಾಗಲಿದ್ದಾನೆ.

Written by - Nitin Tabib | Last Updated : Jan 30, 2023, 10:23 AM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸ್ಥಾನವನ್ನು ಅತ್ಯಂತ ಮುಖ್ಯ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
  • ಹೀಗಾಗಿ ಈ ಅವಧಿಯಲ್ಲಿ ಒಟ್ಟು 4 ರಾಶಿಯ ಜನರ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ.
  • ಇದರೊಂದಿಗೆ, ಅವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳು ಪ್ರಾಪ್ತಿಯಾಗಲಿವೆ. ಆ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ನವಾಂಶ ಜಾತಕದ ಉಚ್ಛ ಭಾವದಲ್ಲಿ ಶನಿಯ ಸಂಚಾರ, 4 ರಾಶಿಗಳ ಜಾತಕದವರಿಗೆ ಭಾರಿ ಧನಲಾಭ title=
ನವಾಂಶ ಭಾವದಲ್ಲಿ ಶನಿಯ ಸಂಚಾರ

Saturn Transit 2023: ಜ್ಯೋತಿಷ್ಯದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಗ್ರಹಗಳ ಈ ನಡೆ ಹಾಗೂ ರಾಶಿ ಬದಲಾವಣೆ ಮಾನವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜನವರಿ 17 ರಂದು, ಶನಿದೇವ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭದಲ್ಲಿ ಸಾಗಿದ್ದಾನೆ ಮತ್ತು ಫೆಬ್ರವರಿ 14 ರವರೆಗೆ ಆತ ನವಾಂಶ ಜಾತಕದ ಉಚ್ಛ ಸ್ಥಾನದಲ್ಲಿಯೇ ವಿರಾಜಮಾನನಾಗಲಿದ್ದಾನೆ. ಇದರ ಜೊತೆಗೆ ಕುಂಭ ರಾಶಿಯಲ್ಲಿ ಶನಿಯು ಚಂದ್ರನ ಸ್ಥಾನದಲ್ಲಿ ಕುಳಿತಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸ್ಥಾನವನ್ನು ಅತ್ಯಂತ ಮುಖ್ಯ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಒಟ್ಟು 4 ರಾಶಿಯ ಜನರ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ. ಇದರೊಂದಿಗೆ, ಅವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳು ಪ್ರಾಪ್ತಿಯಾಗಲಿವೆ. ಆ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ. 

ಮೇಷ ರಾಶಿ
ನವಾಂಶ ಕುಂಡಲಿಯಲ್ಲಿ ಶನಿ ದೇವನ ಉನ್ನತ ಸ್ಥಾನ ಮೇಷ ರಾಶಿಯ ಜನರಿಗೆ ಮಂಗಳಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣ ಜಾತಕದಲ್ಲಿ ಶನಿದೇವನು ಲಾಭೇಶ ಮತ್ತು ಕರ್ಮೇಶನಾಗಿದ್ದು ನವಾಂಶ ಕುಂಡಲಿಯ ಕೇಂದ್ರದಲ್ಲಿ ಉನ್ನತ ಸ್ಥಾನದಲ್ಲಿರುತ್ತಾನೆ. ಆದ್ದರಿಂದ, ಈ ಸಮಯದಲ್ಲಿ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ನೀವು ಅದನ್ನು ಮಾಡಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಆಕಸ್ಮಿಕವಾಗಿ ಧನಲಾಭ ಕೂಡ ಪಡೆಯಬಹುದು. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶ ಒದಗಿಬರಲಿವೆ.

ಮಿಥುನ ರಾಶಿ
ನವಾಂಶ ಕುಂಡಲಿಯಲ್ಲಿ ಶನಿ ದೇವನ ಉತ್ತುಂಗ ಸ್ಥಾನ  ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಶನಿದೇವನು ಗೋಚರ ಕುಂಡಲಿಯಲ್ಲಿ ಭಾಗ್ಯೇಶನಾಗಿದ್ದು ನವಾಂಶ ಕುಂಡಲಿಯಲ್ಲಿ ಐದನೇ ಭಾವದಲ್ಲಿ ಉತ್ಕೃಷ್ಟನಾಗಿದ್ದಾನೆ. ಹೀಗಾಗಿ ಈ ಪರಿಸ್ಥಿತಿಯು ವಿದ್ಯಾರ್ಥಿಗಳ ಪಾಲಿಗೆ ತುಂಬಾ ಅದ್ಭುತವಾಗಿದೆ. ಅವರು ಯಾವುದೇ ಉನ್ನತ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು. ಇದರೊಂದಿಗೆ ವಿದೇಶದಲ್ಲಿ ಓದುವ ಕನಸನ್ನೂ ನನಸಾಗಿಸಿಕೊಳ್ಳಬಹುದು. ಮತ್ತೊಂದೆಡೆ, ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವವರು ಉದ್ಯೋಗ ಪಡೆಯಬಹುದು. ಸಂತಾನದ ಅಪೇಕ್ಷೆ ಇರುವವರಿಗೆ, ಸಂತಾನ ಭಾಗ್ಯ ಪ್ರಾಪ್ತಿಯಾಗಬಹುದು.

ಧನು ರಾಶಿ
ಶನಿದೇವನ ಈ ಉಚ್ಛ ಸ್ಥಾನ ನಿಮಗೆ ಅನುಕೂಲಕರ ಸಾಬೀತಾಗಬಹುದು. ಏಕೆಂದರೆ ನಿಮ್ಮ ರಾಶಿಯ ಅಧಿಪತಿ ಗುರು ತನ್ನ ಸ್ವಂತ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ ಮತ್ತು ಶನಿ ದೇವನು ಸಂಚಾರ ಜಾತಕದಲ್ಲಿ, ಸಂಪತ್ತಿನ ಅಧಿಪತಿ ಮತ್ತು ಮೂರನೇ ಭಾವದಲ್ಲಿ ಕುಳಿತಿದ್ದಾನೆ. ಇದರರ್ಥ ನವಾಂಶ ಕುಂಡಲಿಯಲ್ಲಿ ಶನಿ ಮತ್ತು ಗುರು ಉಚ್ಛ ಸ್ಥಾನದಲ್ಲಿ ವಿರಾಜನಾನರಾಗಿದ್ದಾರೆ. ಹೀಗಾಗಿ ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಈ ಸಮಯವು ಅದ್ಭುತವಾಗಿರುತ್ತದೆ. ಇದರೊಂದಿಗೆ ವ್ಯಾಪಾರದಲ್ಲಿ ಬರುವ ಹೊಸ ಆರ್ಡರ್‌ಗಳಿಂದ ಲಾಭವೂ ಇರಲಿದೆ. ಅದೇ ಸಮಯದಲ್ಲಿ, ಜನವರಿ 17 ರಿಂದ, ನಿಮ್ಮ ಮೇಲೆ ಇದ್ದ ಶನಿಯ ಸಾಡೆಸಾತಿ ಕೂಡ ತೊಲಗಿದೆ. ಆದ್ದರಿಂದ ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಬಹುದು. ಅದರಲ್ಲಿ ಯಶಸ್ಸಿನ ಅವಕಾಶಗಳಿವೆ ಎಂದರ್ಥ.

ಇದನ್ನೂ ಓದಿ-ಶನಿ ಅಧಿಪತ್ಯದ ಈ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಪವರ್ಫುಲ್ ರಾಜಯೋಗ, 3 ರಾಶಿಗಳ ಜನರಿಗೆ ಭಾರಿ ಲಾಭ

ಮಕರ ರಾಶಿ
ನವಾಂಶ ಕುಂಡಲಿಯಲ್ಲಿ ಶನಿದೇವನ ಉನ್ನತ ಭಾವ ಮಕರ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಶನಿದೇವನು ನಿಮ್ಮ ನವಾಂಶ ಕುಂಡಲಿಯಲ್ಲಿ ಶುಭ ಸ್ಥಾನದಲ್ಲಿ ಸ್ಥಿತನಿದ್ದಾನೆ. ಇದರೊಂದಿಗೆ, ಸಂಕ್ರಮಣವು ಜಾತಕದ ದ್ವಿತೀಯ ಭಾವದಲ್ಲಿ ನೆರವೇರಿದೆ. ಹೀಗಾಗಿ ಈ ಸಮಯದಲ್ಲಿ ನೀವು ಹಠಾತ್ ಹಣವನ್ನು ಪಡೆಯಬಹುದು.  ಉದ್ಯೋಗಿಗಳ ಬಡ್ತಿ ಮತ್ತು ಇನ್ಕ್ರೀಮೆಂಟ್ ಸಿಗುವ ಸಾಧ್ಯತೆ ಇದೆ. ಇದರೊಂದಿಗೆ, ನೀವು ಕೆಲಸಕ್ಕೆ ಸಂಬಂಧಿಸಿದಂತೆ ಎಲ್ಲೋ ಹೋಗಬೇಕಾಗಬಹುದು. ಈ ಅವಧಿಯಲ್ಲಿ ನಿಮ್ಮ ಹವ್ಯಾಸಗಳನ್ನು ಪೂರೈಸಲು ನಿಮಗೆ ಅವಕಾಶ ಸಿಗಲಿದೆ.

ಇದನ್ನೂ ಓದಿ-ಮೀನ ರಾಶಿಯಲ್ಲಿ ಬೃಹಸ್ಪತಿ ಉದಯ, ಹಂಸ ರಾಜಯೋಗದಿಂದ 3 ರಾಶಿಗಳ ಜನರಿಗೆ ಅಪಾರ ಆರ್ಥಿಕ ಲಾಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News