'ಯಡಿಯೂರಪ್ಪ ಅವರನ್ನು ಯಾಕೆ ಅಧಿಕಾರದಿಂದ ಕೆಳಗೆ ಇಳಿಸಿದರು ಎಂದು ಹೇಳಲಿ'

 ಇವರು ಯಾರಿಗೆ ಬುದ್ಧಿ ಹೇಳುತ್ತಿದ್ದಾರೆ? ಇವರು ತಾವು ಏನು ಮಾಡಿದ್ದೇವೆ ಎಂದು ಅರಿತು ನಮ್ಮ ಬಗ್ಗೆ ಮಾತನಾಡಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎನ್.ಎ ಹ್ಯಾರಿಸ್ ಹೇಳಿದರು.

Written by - Zee Kannada News Desk | Last Updated : Oct 8, 2022, 09:14 PM IST
  • ಬಿಜೆಪಿ ಇಂತಹ ಮಹಾನ್ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ.
  • ಆದರೂ ಇವರ ಹೆಸರು ಬಳಸಿಕೊಂಡು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
'ಯಡಿಯೂರಪ್ಪ ಅವರನ್ನು ಯಾಕೆ ಅಧಿಕಾರದಿಂದ ಕೆಳಗೆ ಇಳಿಸಿದರು ಎಂದು ಹೇಳಲಿ' title=

ಬೆಂಗಳೂರು: ಇಂದು ರಾಜಕೀಯ ಬಹಳ ಕೀಳುಮಟ್ಟಕ್ಕೆ ಹೋಗುತ್ತಿದೆ. ಭಾರತ ಜೋಡೋ ಯಾತ್ರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿದೆ, ಜನಬೆಂಬಲ ಸಿಗುತ್ತಿದೆ ಎಂದು ಬಿಜೆಪಿಯವರು ಈ ಜಾಹೀರಾತುಗಳು ಹೇಳುತ್ತಿವೆ. 2014ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಬಿಜೆಪಿ ಹೈಕಮಾಂಡ್ ಅನ್ನೇ ಮೂಲೆಗುಂಪು ಮಾಡಿದ್ದಾರೆ. ಇವರು ಯಾರಿಗೆ ಬುದ್ಧಿ ಹೇಳುತ್ತಿದ್ದಾರೆ? ಇವರು ತಾವು ಏನು ಮಾಡಿದ್ದೇವೆ ಎಂದು ಅರಿತು ನಮ್ಮ ಬಗ್ಗೆ ಮಾತನಾಡಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎನ್.ಎ ಹ್ಯಾರಿಸ್ ಹೇಳಿದರು.

ಬಿಜೆಪಿ ಇಂತಹ ಮಹಾನ್ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ. ಆದರೂ ಇವರ ಹೆಸರು ಬಳಸಿಕೊಂಡು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ಇವರು 15 ಲಕ್ಷ ಹಣ ನೀಡುತ್ತೇವೆ ಎಂಬ ಸುಳ್ಳಿನ ಮೂಲಕ ಇವರು ಸುಳ್ಳಿನ ಸರಪಳಿ ಆರಂಭಿಸಿದರು. ಇವರು ಬೆಲೆ ಏರಿಕೆ ವಿರುದ್ಧ ಮಾತನಾಡಿ ಅಧಿಕಾರಕ್ಕೆ ಬಂದರು. ಆದರೆ ಈಗ ಅಡುಗೆ ಅನಿಲ ಸಬ್ಸಿಡಿ ಕಿತ್ತುಕೊಂಡು 350 ರೂ ಇದ್ದ ಸಿಲಿಂಡರ್ ಅನ್ನು 1000 ರೂ ಮಾಡಿದ್ದಾರೆ. ಇದರಿಂದ ಜನಸಾಮಾನ್ಯರ ಬದುಕು ದುಸ್ಥರವಾಗಿದೆ.

ಇದನ್ನೂ ಓದಿ: ಯಾರದ್ದೋ ಲವ್ ಸ್ಟೋರಿ, ಇನ್ಯಾರದ್ದೋ ಮೇಲಿನ ದ್ವೇಷ : ಬಲಿಯಾಗಿದ್ದು ಅಮಾಯಕ..!

ಬಂಗಾರಪ್ಪ ಹಾಗೂ ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ವಿರೇಂದ್ರ ಪಾಟೀಲರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಇವರಿಗೂ ಬಿಜೆಪಿಗೂ ಏನು ಸಂಬಂಧ? ರಾಜಕೀಯ ಪಕ್ಷದಲ್ಲಿ ಕೆಲ ಸಮಯದಲ್ಲಿ ಭಿನ್ನಾಭಿಪ್ರಾಯದ ಮೇಲೆ ಪಕ್ಷ ಬಿಡುವುದು ಪ್ರಜಾಪ್ರಭುತ್ವ ವ್ಯವಸ್ಥೆ ಭಾಗ.

ಬಿಜೆಪಿಯವರು ತಮ್ಮ ಸಾಧನೆ ಬಗ್ಗೆ ಜಾಹೀರಾತು ನೀಡುವ ಬದಲು ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಜಾಹೀರಾತು ನೀಡುತ್ತಿರುವುದೇಕೆ? 

ರಾಹುಲ್ ಗಾಂಧಿ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಅವರು ಇಂತಹ ಪ್ರಯತ್ನ ಮಾಡುತ್ತಾ ಅಪಪ್ರಚಾರ ಮಾಡುತ್ತಾರೆ. ಅವರ ನಾಯಕರು ಕೂಡ ಕಾಶ್ಮೀರದಿಂದ ಪಾದಯಾತ್ರೆ ಮಾಡಲಿ, ಅವರು ಎಲ್ಲಿಯವರೆಗೂ ಮಾಡಲು ಸಾಧ್ಯ ನೋಡೋಣ. 

ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಕಾರಣ ನಾವು ಅದರ ಬಗ್ಗೆ ಮಾತನಾಡುತ್ತೇವೆ. ಇದನ್ನು ಬಿಜೆಪಿ ಕಾರ್ಯಕಾರಿ ಸಮಿತಿಯಲ್ಲಿ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. 

ಯಡಿಯೂರಪ್ಪ ಅವರನ್ನು ಯಾಕೆ ಅಧಿಕಾರದಿಂದ ಕೆಳಗೆ ಇಳಿಸಿದರು ಎಂದು ಹೇಳಲಿ. ನಾವು ವಿರೋಧ ಪಕ್ಷದಲ್ಲಿರುವಾಗ ನಾವು ನೆರಳಾಗಿ ಅವರ ತಪ್ಪನ್ನು ಪ್ರಶ್ನಿಸಬೇಕು. ಅದೇ ತಪ್ಪು ಎಂದರೆ ಹೇಗೆ? ಈ ಅಧಿಕಾರವನ್ನು ಕಸಿಯುವ ಪ್ರಯತ್ನ ಮಾಡಬಾರದು.

ಇದನ್ನೂ ಓದಿ:  ಬ್ಯಾಟ್‌ ಹಿಡಿದು ಬೆವರಿಳಿಸಿದ ಜಾನ್ವಿ ಕಪೂರ್‌ : ಟಿ-20 ವಿಶ್ವಕಪ್‌ಗೆ ಇವಳೇ ಭರವಸೆ..!

ಭಾರತ ಜೋಡೋ ಬಗ್ಗೆ ಇವರು ಮಾತನಾಡಿದರೆ ನಾವು ಯಾವೆಲ್ಲ ವಿಚಾರವಾಗಿ ಮಾತನಾಡಬಹುದು. ನೋಟು ಅಮಾನ್ಯೀಕರಣ, ಜಿಎಸ್ ಟಿ ಬಗ್ಗೆ ಅವರು ಜಾಹೀರಾತು ನೀಡಲಿ. 

ಇಂದು ಬಂಗಾರಪ್ಪ, ದೇವರಾಜ ಅರಸು ಹಾಗೂ ವಿರೇಂದ್ರ ಪಾಟೀಲರು ಎಂದರೆ ಅವರು ಹಾಗೂ ಕಾಂಗ್ರೆಸ್ ನಡುವಣ ಸಂಬಂಧವೇ ಕಣ್ಣಮುಂದೆ ಬರುತ್ತದೆ. ಆದರೆ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸಂಬಂಧವೇ ಇಲ್ಲದ ವಿಚಾರವಾಗಿ ಜಾಹೀರಾತು ನೀಡುತ್ತಿರುವುದೇಕೆ? ಎಂದು ಅವರು ಪ್ರಶ್ನಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News