Sa Ra Mahesh: 'ಚಾಮುಂಡೇಶ್ವರಿ ಶಾಪದಿಂದಲೇ ವಿಶ್ವನಾಥ್ ಸಚಿವರಾಗಲಿಲ್ಲ'

ವಿಶ್ವನಾಥ್‌ ಸಚಿವರಾಗದಿರಲೂ ನಾಡ ಅಧಿದೇವತೆಯ ಶಾಪವೇ ಪ್ರಮುಖ ಕಾರಣ. ಅಲ್ಲದೇ ನ್ಯಾಯ ದೇವತೆಯ ಶಾಪದಿಂದ ಅವರು ಅಪೇಕ್ಷಿಸಿದ್ದು ಸಿಕ್ಕಿಲ್ಲ ಎಂದರು.

Last Updated : Jan 13, 2021, 05:31 PM IST
  • ಅಧಿದೇವತೆ ಚಾಮುಂಡೇಶ್ವರಿ ಹಾಕಿದ ಶಾಪದಿಂದಲೇ ಎಚ್‌ ವಿಶ್ವನಾಥ್‌ ಸಚಿವರಾಗಲಿಲ್ಲ ಎಂದು ಶಾಸಕ ಸಾರಾ ಮಹೇಶ್‌ ವ್ಯಂಗ್ಯ
  • ವಿಶ್ವನಾಥ್‌ ಸಚಿವರಾಗದಿರಲೂ ನಾಡ ಅಧಿದೇವತೆಯ ಶಾಪವೇ ಪ್ರಮುಖ ಕಾರಣ. ಅಲ್ಲದೇ ನ್ಯಾಯ ದೇವತೆಯ ಶಾಪದಿಂದ ಅವರು ಅಪೇಕ್ಷಿಸಿದ್ದು ಸಿಕ್ಕಿಲ್ಲ ಎಂದರು.
  • ವಿಶ್ವನಾಥ್‌ರಿಗೆ ಶಾಸಕ ಸ್ಥಾನ ಹೊಂದಬಾರದು ಎಂದು ಹೈಕೋರ್ಟ್ ತೀರ್ಪು ನೀಡಿದ್ದರೂ ಪರಿಷತ್ ಸದಸ್ಯರಾಗಿದ್ದಾರೆ. ಇವೆಲ್ಲವನ್ನೂ ನೋಡಿದರೇ ಈಗ ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ.
Sa Ra Mahesh: 'ಚಾಮುಂಡೇಶ್ವರಿ ಶಾಪದಿಂದಲೇ ವಿಶ್ವನಾಥ್ ಸಚಿವರಾಗಲಿಲ್ಲ' title=

ಮೈಸೂರು: ಅಧಿದೇವತೆ ಚಾಮುಂಡೇಶ್ವರಿ ಹಾಕಿದ ಶಾಪದಿಂದಲೇ ಎಚ್‌ ವಿಶ್ವನಾಥ್‌ ಸಚಿವರಾಗಲಿಲ್ಲ ಎಂದು ಶಾಸಕ ಸಾರಾ ಮಹೇಶ್‌ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್(H Vishwanath)‌ ಸಚಿವರಾಗದಿರಲೂ ನಾಡ ಅಧಿದೇವತೆಯ ಶಾಪವೇ ಪ್ರಮುಖ ಕಾರಣ. ಅಲ್ಲದೇ ನ್ಯಾಯ ದೇವತೆಯ ಶಾಪದಿಂದ ಅವರು ಅಪೇಕ್ಷಿಸಿದ್ದು ಸಿಕ್ಕಿಲ್ಲ ಎಂದರು.

'CD' ಇಟ್ಟುಕೊಂಡು ಸಿಎಂ ಬಿಎಸ್‌ವೈಗೆ ಬ್ಲ್ಯಾಕ್ ಮೇಲ್..!

ವಿಶ್ವನಾಥ್‌ರಿಗೆ ಶಾಸಕ ಸ್ಥಾನ ಹೊಂದಬಾರದು ಎಂದು ಹೈಕೋರ್ಟ್ ತೀರ್ಪು ನೀಡಿದ್ದರೂ ಪರಿಷತ್ ಸದಸ್ಯರಾಗಿದ್ದಾರೆ. ಇವೆಲ್ಲವನ್ನೂ ನೋಡಿದರೇ ಈಗ ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ. ರಾಜಕೀಯವಾಗಿ ಮೂಲೆಗುಂಪಾಗಿದ್ದ ವ್ಯಕ್ತಿಯನ್ನು ತನು ಮನ ಧನ ನೀಡಿ ಆಶ್ರಯ ಕೊಟ್ಟ ನಮ್ಮ ಜಾತ್ಯಾತೀತ ಜನತಾದಳಕ್ಕೆ ದ್ರೋಹ ಮಾಡಿದರು. ಈ ರೀತಿ ವರ್ತಿಸಿದ ನಿಮಗೆ ಕಾರ್ಯಕರ್ತರ ನಿಟ್ಟುಸಿರು ಸುಮ್ಮನೆ ಬಿಡುವುದಿಲ್ಲ ಎಂದರು.

Kisan Maan Dhan Yojana: ರೈತರಿಗೆ ಈ ಯೋಜನೆ ಮೂಲಕ ತಿಂಗಳಿಗೆ ₹ 3 ಸಾವಿರ ಪಿಂಚಣಿ ಸೌಲಭ್ಯ..!

ಇನ್ನು, ನಿಮಗೆ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಮಾತಿಗೆ ತಪ್ಪಿದವರೆಂದು ಹೇಳುವ ನೈತಿಕತೆ ಇಲ್ಲ. ಹೋಗಿದ್ದ 17 ಜನರಲ್ಲಿ ಹದಿನಾರು ಜನರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಅಲ್ಲದೇ ಹೈಕೋರ್ಟ್ ತೀರ್ಪಿಗಿಂತ ಯಡಿಯೂರಪ್ಪ ದೊಡ್ಡವರಲ್ಲ. ವಿಶ್ವನಾಥ್‌ ಅವರೇ ದೇವೇಗೌಡರು ದೇವರಾದ್ರೆ ಕುಮಾರಸ್ವಾಮಿ ರಾಕ್ಷಸರಾಗಿಬಿಟ್ಟರೆ?. ಅವರು ನಿಮ್ಮನ್ನು ಗೌರವಿಸಿ ಟಿಕೆಟ್‌ ನೀಡಿ ಗೆಲ್ಲಿಸಿದ್ದು ನಮ್ಮ ಕಣ್ಣ ಮುಂದೆ ಹಾಗೆಯೇ ಇದೆ ಎಂದರು.

Ramesh Jarkiholi: ಮಾರ್ಚ್- ಏಪ್ರಿಲ್‌ನಲ್ಲಿ ಮತ್ತೆ ಸಂಪುಟ ಪುನಃರಚನೆ: ಹೊಸಬಾಂಬ್ ಸಿಡಿಸಿದ ಜಾರಕಿಹೊಳಿ‌

ವಿಶ್ವನಾಥ್‌ ಅಧಿಕಾರದ ಆಸೆಗಾಗಿ ಸಚಿವ ಸ್ಥಾನ ಅಪೇಕ್ಷಿಸಿದ್ದರು. ಆದರೆ ಅವರಿಂದ ಯಾವ ಕೆಲಸವೂ ಮಾಡಲು ಸಾಧ್ಯವಿಲ್ಲವೆಂದು ಬಿಜೆಪಿಯೇ ತೀರ್ಮಾನಿಸಿ ಸುಮ್ಮನಾಗಿಬಿಟ್ಟಿದೆ ಎಂದು ಹಳ್ಳಿಹಕ್ಕಿಯ ವಿರುದ್ಧ ಶಾಸಕ ಸಾರಾ ಮಹೇಶ್‌ ಕುಟುಕಿದ್ದಾರೆ.

BJP: ಸಿಎಂ ಬಿಎಸ್ ವೈಗೆ ಸಂಕಟ: ಬಿಜೆಪಿ ಪಕ್ಷದೊಳಗೆ ಅಸಮಾಧಾನ ಸ್ಪೋಟ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News