Ramesh Jarkiholi: ಮಾರ್ಚ್- ಏಪ್ರಿಲ್‌ನಲ್ಲಿ ಮತ್ತೆ ಸಂಪುಟ ಪುನಃರಚನೆ: ಹೊಸಬಾಂಬ್ ಸಿಡಿಸಿದ ಜಾರಕಿಹೊಳಿ‌

ಮಾರ್ಚ್- ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಆಗುತ್ತದೆ. ಸಚಿವ ಸ್ಥಾನ ತಪ್ಪಿದವರಿಗೆ ಆಗ ಸ್ಥಾನ ಸಿಗುವ ವಿಶ್ವಾಸವಿದೆ

Last Updated : Jan 13, 2021, 01:58 PM IST
  • ಮಾರ್ಚ್- ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಆಗುತ್ತದೆ. ಸಚಿವ ಸ್ಥಾನ ತಪ್ಪಿದವರಿಗೆ ಆಗ ಸ್ಥಾನ ಸಿಗುವ ವಿಶ್ವಾಸವಿದೆ
  • ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಹೊಸಬಾಂಬ್ ಸಿಡಿಸಿದ್ದಾರೆ.
  • ಇಂದು ಏಳು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಮುನಿರತ್ನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ.
Ramesh Jarkiholi: ಮಾರ್ಚ್- ಏಪ್ರಿಲ್‌ನಲ್ಲಿ ಮತ್ತೆ ಸಂಪುಟ ಪುನಃರಚನೆ: ಹೊಸಬಾಂಬ್ ಸಿಡಿಸಿದ ಜಾರಕಿಹೊಳಿ‌ title=

ಬೆಳಗಾವಿ: ಮಾರ್ಚ್- ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಆಗುತ್ತದೆ. ಸಚಿವ ಸ್ಥಾನ ತಪ್ಪಿದವರಿಗೆ ಆಗ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಹೊಸಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ(Ramesh Jarkiholi), ಇಂದು ಏಳು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಮುನಿರತ್ನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಎಚ್. ವಿಶ್ವನಾಥ, ಮಹೇಶ ಕುಮಟಳ್ಳಿ, ಮುನಿರತ್ನ ಆಕಾಂಕ್ಷಿಗಳಿದ್ದಾರೆ ಎಂದರು.

BJP: ಸಿಎಂ ಬಿಎಸ್ ವೈಗೆ ಸಂಕಟ: ಬಿಜೆಪಿ ಪಕ್ಷದೊಳಗೆ ಅಸಮಾಧಾನ ಸ್ಪೋಟ!

ಕಲ್ಬುರ್ಗಿಯಲ್ಲಿ ಪಕ್ಷ ಕಟ್ಟಿ ದೊಡ್ಡ ವ್ಯಕ್ತಿ ಸೋಲಿಸಿದವರು ಮಾಲೀಕಯ್ಯ ಗುತ್ತೇದಾರಗೂ ಸಚಿವ ಸ್ಥಾನ ಸಿಗಬೇಕಿದೆ. ಮಾಲೀಕಯ್ಯ ಗುತ್ತೆದಾರ ನನಗಿಂತ ಸ್ಟ್ರಾಂಗ್ ಇದ್ದಾರೆ. ಅವರಿಗೆ ಸ್ಥಾನಮಾನ ಸಿಗಬೇಕು. ನಮ್ಮ ಟೀಂ ನಲ್ಲಿ ಇನ್ನೂ ಐವರಿಗೆ ಸಚಿವ ಸ್ಥಾನ ಸಿಗಬೇಕಾಗಿದೆ. ಎಚ್.ವಿಶ್ವನಾಥ ಸಚಿವರಾಗಲು ಕಾನೂನು ತೊಡಕಿದೆ. ನಾಗೇಶರನ್ನು ಸಚಿವ ಸ್ಥಾನದಿಂದ ಕೈ ಬಿಡುತ್ತಿಲ್ಲ. ಸರ್ಕಾರ ಬರಲು ಯೋಗೀಶ್ವರ್ ಪ್ರಮುಖ ಮಾತ್ರ ವಹಿಸಿದ್ದಾರೆ. ಯೋಗೀಶ್ವರ್ ಗೆ ಸ್ಥಾನ ಕೊಟ್ಟಿದ್ದಕ್ಕೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.

B.S.Yediyurappa: ಏಳು ಮಂದಿಗೆ ಮಂತ್ರಿ ಭಾಗ್ಯ: ನೂತನ ಸಚಿವರ ಹೆಸರು ಪ್ರಕಟಿಸಿದ ಸಿಎಂ ಬಿಎಸ್​ವೈ!

ಬಿಎಸ್‌ವೈ ವಿರುದ್ಧ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ರಮೇಶ ಜಾರಕಿಹೊಳಿ‌, ಎಚ್.ವಿಶ್ವನಾಥ ಹಿರಿಯರು. ಅವರು ಮಾತನಾಡುವುದು ಆಶೀರ್ವಾದ ಅಂದುಕೊಳ್ಳೋಣ. ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಉಪಚುನಾವಣೆ ಆಗಲಿ. ಇದಾದ ಮೇಲೆ ತಾ.ಪಂ., ಜಿ.ಪಂ. ಚುನಾವಣೆ ಮುಗಿದ ಬಳಿಕ ಮತ್ತೊಮ್ಮೆ ಸಂಪುಟ ಪುನಾರಚನೆ ಆಗಲಿದೆ ಎಂದರು.

BSY Cabinet Expansion : ಕ್ಷಣ ಕ್ಷಣದ ಮಾಹಿತಿ..! ಪದವಿ ಸಿಗದವರ ಪರಿತಾಪ ಹೀಗಿತ್ತು..!

ಸರ್ಕಾರ ಕೇವಲ ಬೆಂಗಳೂರು, ಬೆಳಗಾವಿಗೆ ಸೀಮಿತವಾಗಿದೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನ ಕೊಟ್ಟಿರುವುದು ಸಂದರ್ಭ ಅನುಗುಣವಾಗಿ ಆಗಿದೆ. ಮುಖ್ಯಮಂತ್ರಿ ಸರಿಪಡಿಸುತ್ತಾರೆ ಎಂದರು.

Electricity Bill : ನಿಮ್ಮ ಕರೆಂಟ್ ಬಿಲ್ ಹೆಚ್ಚಾಗುತ್ತೆ..ಶಾಕ್ ಕೊಟ್ಟಿದೆ ಕೆಇಆರ್ ಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News