ಮೇಕೆ ದಾಟು ಯೋಜನೆಗೆ ಅಡ್ಡಿ ಬೇಡ : ತಮಿಳುನಾಡಿಗೆ ಪತ್ರ ಬರೆದ ಯಡಿಯೂರಪ್ಪ

ಮೇಕೆದಾಟು ಬಳಿ ಸಮಾಂತರ  ಜಲಾಶಯ ನಿರ್ಮಿಸುವ ವಿಚಾರದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್  ಅವರಿಗೆ ಪತ್ರ ಬರೆದಿದ್ದಾರೆ. 

Written by - Ranjitha R K | Last Updated : Jul 4, 2021, 01:15 PM IST
  • ಕರ್ನಾಟಕದ ಯೋಜನೆಗೆ ಅಡ್ಡಿ ಪಡಿಸಬೇಡಿ ಎಂದು ವಿನಂತಿಸಿಕೊಂಡಿರುವ ಬಿಎಸ್ ವೈ
  • ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗುವುದಿಲ್ಲ – ಬಿಎಸ್ ವೈ
  • ಯಡಿಯೂರಪ್ಪ ಪತ್ರಕ್ಕೆ ಸ್ಟಾಲಿನ್ ಶೀಘ್ರ ಉತ್ತರಿಸಲಿದ್ದಾರೆ ಎಂದಿರುವ ತಮಿಳುನಾಡು
ಮೇಕೆ ದಾಟು ಯೋಜನೆಗೆ ಅಡ್ಡಿ ಬೇಡ : ತಮಿಳುನಾಡಿಗೆ ಪತ್ರ ಬರೆದ ಯಡಿಯೂರಪ್ಪ title=
ಕರ್ನಾಟಕದ ಯೋಜನೆಗೆ ಅಡ್ಡಿ ಪಡಿಸಬೇಡಿ ಎಂದು ವಿನಂತಿಸಿಕೊಂಡಿರುವ ಬಿಎಸ್ ವೈ (file photo)

ಬೆಂಗಳೂರು : ಮೇಕೆದಾಟು ಬಳಿ ಸಮಾಂತರ  ಜಲಾಶಯ ನಿರ್ಮಿಸುವ ವಿಚಾರದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (MK Stalin) ಅವರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದಿಲ್ಲ ಹಾಗಾಗಿ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಯಡಿಯೂರಪ್ಪ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದನ್ವಯ ಯೋಜನೆ ಜಾರಿ:
ವಿದ್ಯುತ್ ಉತ್ಪಾದನೆಗೆ ಸುಪ್ರೀಂಕೋರ್ಟ್ (Supreme court) ಅವಕಾಶ ನೀಡಿದೆ. ಈ ಆದೇಶದನ್ವಯ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ.  ಯೋಜನೆಯಿಂದ 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಬೆಂಗಳೂರಿಗೆ 4.75 ಟಿಎಂಸಿ ಕುಡಿಯುವ ನೀರು ಸಿಗಲಿದೆ. ಈ ಯೋಜನೆಯಿಂದ  ಎರಡೂ ರಾಜ್ಯಗಳಿಗೆ ಉಪಯುಕ್ತವಾಗಲಿದೆ. ತಮಿಳುನಾಡು ರೈತರಿಗೆ (Tamilnadu farmers) ಯಾವುದೆ ಸಮಸ್ಯೆ ಉಂಟಾಗುವುದಿಲ್ಲ ಎಂದು ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ : Karnataka Unlock 3.O : ರಾಜ್ಯದಲ್ಲಿ ಅನ್ ಲಾಕ್ 3.O : ಏನಿದೆ, ಏನಿಲ್ಲ?

ಉಭಯ ರಾಜ್ಯಗಳ ಸಾಮರಸ್ಯ ಮುಂದುವರಿಯಲಿ:
ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿರುವುದನ್ನು ಪ್ರಸ್ತಾಪಿಸಿರುವ ಯಡಿಯೂರಪ್ಪ (BS Yediyurappa), ಕರ್ನಾಟಕ ಯೋಜನೆಯ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ತಮಿಳುನಾಡು ಸರ್ಕಾರ ಕಾವೇರಿ ನೀರು ಬಳಸಿ ಪವರ್ ಪ್ರಾಜೆಕ್ಟ್ ಆರಂಭಿಸಲು ನಿರ್ಧರಿಸಿದೆ. ಎರಡೂ ರಾಜ್ಯಗಳ ಸಾಮರಸ್ಯ ಮುಂದುವರಿಯಬೇಕು. ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ಅಡ್ಡಿ ಬೇಡ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಿಎಸ್ ವೈ ಪತ್ರಕ್ಕೆ ತಮಿಳುನಾಡು ಉತ್ತರವೇನು..?
ಯಡಿಯೂರಪ್ಪ ಬರೆದಿರುವ ಪತ್ರ ಕೈಸೇರಿದೆ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಹೇಳಿದ್ದಾರೆ.  ಮುಖ್ಯಮಂತ್ರಿ ಸ್ಟಾಲಿನ್ (MK Stalin) ಶೀಘ್ರದಲ್ಲೇ ಸಭೆ  ನಡೆಸಿ ಮಾತುಕತೆ ನಡೆಸಲಿದ್ದಾರೆ. ಕರ್ನಾಟಕದ (Karnataka) ಪತ್ರಕ್ಕೆ ಸಿಎಂ ಸ್ಟಾಲಿನ್ ಶೀಘ್ರ ಉತ್ತರ ಬರೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ : ಶುದ್ಧ ವಾಯುಗುಣದಲ್ಲಿ ಗದಗ ಮತ್ತೊಮ್ಮೆ ದೇಶಕ್ಕೆ ನಂಬರ್ 1..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News