Karnataka Budget 2021 : `ಸರ್ವಧರ್ಮಕ್ಕೂ ಸಮಪಾಲು' ಇಲ್ಲಿದೆ ಬಜೆಟ್ ಹೈಲೈಟ್ಸ್

`ಧರ್ಮಬೀರು' ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ರಾಜ್ಯದಲ್ಲಿ ಮಠ ಮಾನ್ಯಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಸರ್ವಧರ್ಮಗಳನ್ನೂ ಸಂತೃಪ್ತಿಪಡಿಸುವ ಪ್ರಯತ್ನ ಯಡಿಯೂರಪ್ಪ ನಡೆಸಿರುವುದು ಬಜೆಟಿನಲ್ಲಿ (Budget) ಸ್ಪಷ್ಟವಾಗಿ ಗೋಚರಿಸುತ್ತಿದೆ.   

Written by - Ranjitha R K | Last Updated : Mar 8, 2021, 03:42 PM IST
  • ಯಡಿಯೂರಪ್ಪ ರಾಜ್ಯದಲ್ಲಿ ಮಠ ಮಾನ್ಯಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.
  • ಸರ್ವಧರ್ಮಗಳನ್ನೂ ಸಂತೃಪ್ತಿಪಡಿಸುವ ಪ್ರಯತ್ನ ಯಡಿಯೂರಪ್ಪ ನಡೆಸಿರುವುದು ಬಜೆಟಿನಲ್ಲಿ ಗೋಚರಿಸುತ್ತಿದೆ
  • ಧರ್ಮ ಹಾಗೂ ಸಂಸ್ಕೃತಿಗೂ ದುಡ್ಡು ಮೀಸಲಿಟ್ಟಿದ್ದಾರೆ.
Karnataka Budget  2021 : `ಸರ್ವಧರ್ಮಕ್ಕೂ ಸಮಪಾಲು' ಇಲ್ಲಿದೆ ಬಜೆಟ್ ಹೈಲೈಟ್ಸ್ title=
ಮಠ ಮಾನ್ಯಗಳಿಗೆ ಭರ್ಜರಿ ಕೊಡುಗೆ (file photo)

ಬೆಂಗಳೂರು :  `ಧರ್ಮಬೀರು' ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ರಾಜ್ಯದಲ್ಲಿ ಮಠ ಮಾನ್ಯಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಸರ್ವಧರ್ಮಗಳನ್ನೂ ಸಂತೃಪ್ತಿಪಡಿಸುವ ಪ್ರಯತ್ನ ಯಡಿಯೂರಪ್ಪ ನಡೆಸಿರುವುದು ಬಜೆಟಿನಲ್ಲಿ (Budget) ಸ್ಪಷ್ಟವಾಗಿ ಗೋಚರಿಸುತ್ತಿದೆ. ಧರ್ಮ ಮತ್ತು ಸಂಸ್ಕೃತಿ ಕರ್ನಾಟಕದ ಅವಿಭಾಜ್ಯ ಪರಂಪರೆ ಎಂಬ ನಿಟ್ಟಿನಲ್ಲಿ ಧರ್ಮ ಹಾಗೂ ಸಂಸ್ಕೃತಿಗೂ ದುಡ್ಡು ಮೀಸಲಿಟ್ಟಿದ್ದಾರೆ. ತಮ್ಮ ಎಂಟನೇ ಬಜೇಟಿನಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ಯಡಿಯೂರಪ್ಪ ಯಥೇಚ್ಛ ಕೊಡುಗೆ ನೀಡಿದ್ದಾರೆ. ಸರ್ವಧರ್ಮಕ್ಕೂ ಸಮಪಾಲು ಮನೋವೃತ್ತಿ ಬಜೆಟಿನಲ್ಲಿ  ಕಾಣಿಸುತ್ತಿದೆ.

`ಸರ್ವಧರ್ಮಕ್ಕೂ ಸಮಪಾಲು' ಇಲ್ಲಿದೆ ಹೈಲೈಟ್ಸ್ : 
1.ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 50 ಕೋಟಿ
2.ವಿಜಯಪುರ ಜಿಲ್ಲೆ ಬಸನವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿರುವ ಜಗಜ್ಯೋತಿ ಬಸವಣ್ಣ (Basavanna) ಜನ್ಮಸ್ಥಳ ಅಭಿವೃದ್ಧಿಗೆ ₹ 5 ಕೋಟಿ
3.ಆದಿಚುಂಚನಗಿರಿ (Aadichunchangiri) ನಾಥ ಪಾರಂಪರಿಕ ಕೇಂದ್ರಕ್ಕೆ ₹ 10 ಕೋಟಿ ಅನುದಾನ ಘೋಷಿಸಲಾಗಿದೆ.
4.ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ (Karnataka Yatri Nivas) ನಿರ್ಮಾಣ ಕಾಮಗಾರಿಗೂ ಕರ್ನಾಟಕ ಸರ್ಕಾರ (Karnataka Government)  ₹ 10 ಕೋಟಿ ಅನುದಾನ ಘೋಷಿಸಿದೆ 

ಇದನ್ನೂ ಓದಿ : Karnataka Budget 2021: ಬಜೆಟ್ ನಿಂದ ನಿವೇಶನ ಜಾಗ ಖರೀದಿದಾರರಿಗೆ ಭರ್ಜರಿ ಸಿಹಿ ಸುದ್ದಿ..!

5.ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್.ಬೈರಪ್ಪ ( S L Bhairappa) ಅವರ ಪರ್ವ ನಾಟಕ ಪ್ರದರ್ಶನಕ್ಕೆ ₹ 1 ಕೋಟಿ ಅನುದಾನ ಘೋಷಿಸಲಾಗಿದೆ. ರಾಜ್ಯಾದ್ಯಂತ ರಂಗಾಯಣಗಳ ಮೂಲಕ ಪರ್ವ ನಾಟಕವನ್ನು ಪ್ರದರ್ಶಿಸಲಾಗುವುದು
6.ಕ್ರಿಶ್ಚಿಯನ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ₹200 ಕೋಟಿ,
7.ಅಲ್ಪಸಂಖ್ಯಾತ (Minority) ಸಮುದಾಯಗಳಿಗಾಗಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ₹ 1,500 ಕೋಟಿ ಮೊತ್ತವನ್ನು ಈ ಬಾರಿಯ ಬಜೆಟ್ನಲ್ಲಿ ಮೀಸಲಿಡಲಾಗಿದೆ.

ಯಡಿಯೂರಪ್ಪ (Yediyurappa) ತನ್ನ ಈ ಹಿಂದಿನ ಬಜೆಟ್‍ನಲ್ಲಿಯೂ ಕೂಡಾ ಧರ್ಮ ಸಂಸ್ಥಾನಗಳಿಗೆ ದಾರಾಳವಾಗಿಯೇ ಧನ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ : Karnataka Budget 2021: ಬಿಎಸ್‌ವೈ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News