ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕರ್ನಾಟಕದ ಜನತೆಗೆ ಒಂದು ರೀತಿಯ ಶಾಪ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಅಭಿವೃದ್ಧಿ ಎಂಬುದನ್ನು ಸಂಪೂರ್ಣ ಕಡೆಗಣಿಸಿ, ವರ್ಗಾವಣೆ ದಂಧೆಯೊಂದನ್ನೇ ಚಾಚೂ ತಪ್ಪದಂತೆ ನಡೆಸುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಕುಟುಕಿದೆ.
‘ಪರಸ್ಪರ ಕಾಲೆಳೆದುಕೊಳ್ಳುತ್ತಾ, ಸದಾ ಒಳಜಗಳದಲ್ಲಿ ನಿರತವಾಗಿರುವ “ಕೈ” ಸರ್ಕಾರಕ್ಕೆ ಈಗ 4 ತಿಂಗಳು ತುಂಬಿದೆ. ಆದರೆ ಇದುವರೆಗೂ 4 ಗುದ್ದಲಿ ಪೂಜೆ ಕೂಡ ನೆರವೇರಿಸಿಲ್ಲದಿರುವುದು ಅಭಿವೃದ್ಧಿ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿ. 4 ತಿಂಗಳ “ಕೈ” ಸರ್ಕಾರ ಏನು ಮಾಡಿದೆ ಎಂದು ಹುಡುಕಿದರೆ ಸಿಗುವುದು ಕೇವಲ ಪರಸ್ಪರ ಕಚ್ಚಾಟ. ರಾಜ್ಯದ ಜನತೆ ಬರ, ಬೆಲೆಯೇರಿಕೆಯಿಂದ ತತ್ತರಿಸಿ ಏದುಸಿರು ಬಿಡುತ್ತಿದ್ದಾರೆ. ಆದರೆ ‘ಕೈ’ನಾಯಕರು ಮಾತ್ರ ಅಧಿಕಾರದ ಆಸೆಗಾಗಿ ದಿನೇ ದಿನೇ ರಾಜ್ಯದ ಆಡಳಿತವನ್ನು ಹಳ್ಳ ಹಿಡಿಸುತ್ತಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ.
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕರ್ನಾಟಕದ ಜನತೆಗೆ ಒಂದು ರೀತಿಯ ಶಾಪ. ಅಭಿವೃದ್ಧಿ ಎಂಬುದನ್ನು ಸಂಪೂರ್ಣ ಕಡೆಗಣಿಸಿ, ವರ್ಗಾವಣೆ ದಂಧೆಯೊಂದನ್ನೇ ಚಾಚೂ ತಪ್ಪದಂತೆ ನಡೆಸುತ್ತಿರುವುದೇ ಇದಕ್ಕೆ ಸಾಕ್ಷಿ.
ಪರಸ್ಪರ ಕಾಲೆಳೆದುಕೊಳ್ಳುತ್ತಾ, ಸದಾ ಒಳಜಗಳದಲ್ಲಿ ನಿರತವಾಗಿರುವ “ಕೈ” ಸರ್ಕಾರಕ್ಕೆ ಈಗ ನಾಲ್ಕು ತಿಂಗಳು…
— BJP Karnataka (@BJP4Karnataka) September 20, 2023
ಇದನ್ನೂ ಓದಿ: ಈ ಬಾರಿ ಎಲ್ಲವನ್ನ ಮರೆತು ಸುರೇಶ್ ತಂಡಕ್ಕೆ ಸಪೋರ್ಟ್ ಮಾಡಬೇಕು : ಸಾ.ರಾ. ಗೋವಿಂದ್
‘ಸಿಎಂ ಸಿದ್ದರಾಮಯ್ಯರ ವಿರುದ್ಧ ಬಿ.ಕೆ.ಹರಿಪ್ರಸಾದ್ ಅವರನ್ನು ಎತ್ತಿ ಕಟ್ಟಿ ಮಜಾವಾದಿ, ಖಾಕಿ ಚಡ್ಡಿ, ಹ್ಯೂಬ್ಲೋ ವಾಚ್ ಎಂಬ ವಿಚಾರಗಳನ್ನೆಲ್ಲಾ ಹೇಳಿಸಿ ಸಿದ್ದರಾಮಯ್ಯರವರ ಕುರ್ಚಿಗೆ ಡೈನಾಮೈಟ್ ಇರಿಸಿದ್ದು ಯಾರು ಎಂಬುದು ಸದಾ"ಶಿವ"ನಗರದ ಮೂಲೆ ಮೂಲೆಗೂ ತಿಳಿದಿದೆ. ಈಗ ಅದಕ್ಕೆ ಸೇರಿಗೆ ಸವ್ವಾಸೇರು ಎಂಬಂತೆ ಸಚಿವ ಕೆ.ಎನ್.ರಾಜಣ್ಣರವರ ಮೂಲಕ ಮೂವರು ಡಿಸಿಎಂ ಎಂಬ ಅಸ್ತ್ರವನ್ನು ಅತಿಂದ್ರ ಶಕ್ತಿಗಳು ಪ್ರಯೋಗಿಸಿವೆ. ಈ ಮೂವರು ಡಿಸಿಎಂ ಹೇಳಿಕೆಯ ಉದ್ದೇಶ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹಾವಳಿಯನ್ನು ಕಡಿಮೆ ಮಾಡಬೇಕೆಂಬುದೇ ಹೊರತು, ಸಾಮಾಜಿಕ ನ್ಯಾಯ, ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ಎಂಬುದೆಲ್ಲಾ ಬರೀ ಬೊಗಳೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಈಗ ಅದಕ್ಕೆ ಸೇರಿಗೆ ಸವ್ವಾಸೇರು ಎಂಬಂತೆ ಸಚಿವ ಕೆ.ಎನ್. ರಾಜಣ್ಣರವರ ಮೂಲಕ ಮೂವರು ಡಿ.ಸಿ.ಎಂ ಎಂಬ ಅಸ್ತ್ರವನ್ನು ಅತಿಂದ್ರ ಶಕ್ತಿಗಳು ಪ್ರಯೋಗಿಸಿವೆ. ಈ ಮೂವರು ಡಿ.ಸಿ.ಎಂ ಹೇಳಿಕೆಯ ಉದ್ದೇಶ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹಾವಳಿಯನ್ನು ಕಡಿಮೆ ಮಾಡಬೇಕೆಂಬುದೇ ಹೊರತು, ಸಾಮಾಜಿಕ ನ್ಯಾಯ, ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ಎಂಬುದೆಲ್ಲಾ ಬರೀ…
— BJP Karnataka (@BJP4Karnataka) September 20, 2023
‘ಮೂವರು ಡಿಸಿಎಂಗಳ ಅಗತ್ಯ ಇಲ್ಲವೇ ಇಲ್ಲ ಎಂದು ಕಡ್ಡಿ ತುಂಡಾದಂತೆ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರೂ ಸಿದ್ದರಾಮಯ್ಯರವರ ಬಣದ ಮನವಿಗೆ ಅಕಸ್ಮಾತ್ ಆಗಿ ಹೈಕಮಾಂಡ್ ಸ್ಪಂದಿಸಿದರೆ ಎಂಬ ಭಯದಿಂದ ಅದನ್ನು ತಪ್ಪಿಸಲು ತಮ್ಮ ಸಹೋದರ ಸಂಸದ ಡಿ.ಕೆ.ಸುರೇಶ್ ಅವರನ್ನು ದೆಹಲಿ ಬಿಟ್ಟು ಹೊರ ಹೋಗಬಾರದೆಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಇವೆಲ್ಲದರ ನಡುವೆ ನಿಜಕ್ಕೂ ಸಿಎಂ ಸಿದ್ದರಾಮಯ್ಯರವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಿದ್ದರೆ, ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಬೇಕೆಂದಿದ್ದರೆ, ತಾವು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ಐವರು ಡಿಸಿಎಂ ಗಳಿಗೆ ಅವಕಾಶ ನೀಡಬೇಕಿತ್ತು. ಆದರೆ ತಮ್ಮ ಕುರ್ಚಿಗೆ ಕಂಟಕ ಬಂದಾಗ ಮಾತ್ರ ಡಿಸಿಎಂ ಎಂಬ ಗುರಾಣಿ ಪ್ರಯೋಗಿಸುವುದು ಹಾಗೂ ಸಮುದಾಯಗಳ ಹೆಸರಿನಲ್ಲಿ ಮೂವರು ಡಿಸಿಎಂ ಎಂಬ ಹೆಸರು ತೇಲಿ ಬಿಡುವುದು ಆ ಸಮುದಾಯಗಳಿಗೆ ಮಾಡುವ ದ್ರೋಹ’ವೆಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ಸಂಕಷ್ಟ ಸೂತ್ರವೇ ಇಲ್ಲ ಎಂದ ಮೇಲೆ ಕಾವೇರಿ ನೀರು ಬಿಟ್ಟಿದ್ದೇಕೆ? ಸಿಎಂ ವಿರುದ್ಧ ಎಚ್ಡಿಕೆ ಕಿಡಿ
ರಾಜ್ಯದ ಸಮುದಾಯಗಳ ಮೂಗಿಗೆ ಡಿಸಿಎಂ ಎಂಬ ತುಪ್ಪ ಸವರುವ ಬದಲು, ಕಷ್ಟದಲ್ಲಿರುವ ಜನತೆಯ ಕಂಬನಿಯನ್ನು ಒರೆಸುವ ಕೆಲಸವನ್ನು ಸರ್ಕಾರ ಅತ್ಯಂತ ಜರೂರತ್ತಿನಿಂದ ಮಾಡಬೇಕಿದೆ. ರಾಜ್ಯದ ಬೊಕ್ಕಸ ಸಂಪೂರ್ಣ ಖಾಲಿಯಾಗಿದ್ದು, ರಾಜ್ಯ ಬಹುತೇಕ ದಿವಾಳಿಯಾಗುವ ಮುನ್ನ, ಕೈ ಸರ್ಕಾರ ಎಚ್ಚೆತ್ತುಕೊಳ್ಳಬೇಕು.
ಸ್ಪಷ್ಟ ಬಹುಮತವನ್ನು ಪಡೆದಿರುವ ಸರ್ಕಾರ ಜನ ಮೆಚ್ಚುವ…
— BJP Karnataka (@BJP4Karnataka) September 20, 2023
‘ರಾಜ್ಯದ ಸಮುದಾಯಗಳ ಮೂಗಿಗೆ ಡಿಸಿಎಂ ಎಂಬ ತುಪ್ಪ ಸವರುವ ಬದಲು, ಕಷ್ಟದಲ್ಲಿರುವ ಜನತೆಯ ಕಂಬನಿಯನ್ನು ಒರೆಸುವ ಕೆಲಸವನ್ನು ಸರ್ಕಾರ ಅತ್ಯಂತ ಜರೂರತ್ತಿನಿಂದ ಮಾಡಬೇಕಿದೆ. ರಾಜ್ಯದ ಬೊಕ್ಕಸ ಸಂಪೂರ್ಣ ಖಾಲಿಯಾಗಿದ್ದು, ರಾಜ್ಯ ಬಹುತೇಕ ದಿವಾಳಿಯಾಗುವ ಮುನ್ನ, ‘ಕೈ’ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸ್ಪಷ್ಟ ಬಹುಮತವನ್ನು ಪಡೆದಿರುವ ಸರ್ಕಾರ ಜನರು ಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸಬೇಕಿತ್ತು. ಆದರೆ ಸಿದ್ದರಾಮಯ್ಯರ ನೇತೃತ್ವದ ಈ #ATMSarkara ಜನ ಹಣೆ ಹಣೆ ಚಚ್ಚಿಕೊಳ್ಳುವಂತಹ ಆಡಳಿತ ನೀಡುತ್ತಿದೆ’ ಎಂದು ಬಿಜೆಪಿ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.