ಚಾಮರಾಜನಗರ ಎಡಿಸಿ ಸಹಿ ಫೋರ್ಜರಿ ಮಾಡಿ ಕೋಟಿ ಗುಳುಂ; ಡಿ ಗ್ರೂಪ್ ನೌಕರ ಅಂದರ್!

ಜಿಲ್ಲಾಧಿಕಾರಿಯವರ ಗ್ರಾಮೀಣ ರಸಪ್ರಶ್ನೆ ಕಾರ್ಯಕ್ರಮದ ಬ್ಯಾಂಕ್ ಖಾತೆಯಿಂದ ಎಡಿಸಿ ಸಹಿಯನ್ನು ರಾಜೇಶ್ ಎಂಬಾತ ಫೋರ್ಜರಿ ಮಾಡಿ 1 ಕೋಟಿ ರೂ.ಗೂ ಅಧಿಕ ಹಣವನ್ನು ತನ್ನ ಮತ್ತು ಇತರರ ಖಾತೆಗೆ ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ.

Written by - Puttaraj K Alur | Last Updated : Mar 29, 2023, 09:17 AM IST
  • ಚಾಮರಾಜನಗರ ಎಡಿಸಿ ಸಹಿ ಫೋರ್ಜರಿ ಮಾಡಿ 1 ಕೋಟಿ ರೂ.ಗೂ ಅಧಿಕ ಹಣ ಗುಳುಂ
  • ಚಾಮರಾಜನಗರ ಎಡಿಸಿ ಕಚೇರಿಯ ಡಿ ಗ್ರೂಪ್ ನೌಕರ ರಾಜೇಶ್ ಫೋರ್ಜರಿ ಮಾಡಿರುವ ಆರೋಪಿ
  • ಎಡಿಸಿ ಸಹಿ ಫೋರ್ಜರಿ ಮಾಡಿ ತನ್ನ ಮತ್ತು ಇತರರ ಖಾತೆಗೆ ಹಣ ವರ್ಗಾವಣೆ ಮಾಡಿದ್ದ ಆರೋಪಿ
ಚಾಮರಾಜನಗರ ಎಡಿಸಿ ಸಹಿ ಫೋರ್ಜರಿ ಮಾಡಿ ಕೋಟಿ ಗುಳುಂ; ಡಿ ಗ್ರೂಪ್ ನೌಕರ ಅಂದರ್! title=
'ಡಿ' ಗ್ರೂಪ್ ನೌಕರ ಅಂದರ್!

ಚಾಮರಾಜನಗರ: ಚಾಮರಾಜನಗರದ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಆನಂದ್ ಅವರ ಹೆಸರನ್ನು ಫೋರ್ಜರಿ ಮಾಡಿ 1 ಕೋಟಿ ರೂ.ಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಘಟನೆ ನಡೆದಿದೆ.

ಚಾಮರಾಜನಗರ ಎಡಿಸಿ ಕಚೇರಿಯ ಡಿ ಗ್ರೂಪ್ ನೌಕರ ರಾಜೇಶ್ ಫೋರ್ಜರಿ ಮಾಡಿರುವ ಆರೋಪಿ.‌ ಜಿಲ್ಲಾಧಿಕಾರಿ ಅವರ ಗ್ರಾಮೀಣ ರಸಪ್ರಶ್ನೆ ಕಾರ್ಯಕ್ರಮದ ಬ್ಯಾಂಕ್ ಖಾತೆಯಿಂದ ಎಡಿಸಿ ಸಹಿಯನ್ನು ರಾಜೇಶ್ ಫೋರ್ಜರಿ ಮಾಡಿ 1 ಕೋಟಿ ರೂ.ಗೂ ಅಧಿಕ ಹಣವನ್ನು ತನ್ನ ಖಾತೆಗೆ ಮತ್ತು ಇತರರ ಖಾತೆಗೆ ಈತ ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ತಂದೆಯನ್ನು ಮರೆತಿದ್ದಕ್ಕೆ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ ಅನಂತ್ ಕುಮಾರ್ ಪುತ್ರಿ ವಿಜೇತಾ..!  

ಪ್ರಕರಣ ಸಂಬಂಧ ಬೇಜವಾಬ್ದಾರಿ ತೋರಿದ್ದ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಅವರನ್ನು ಡಿಸಿ ಅಮಾನತು ಮಾಡಿದ್ದಾರೆ‌. 2021ರಿಂದಲೂ ಈ ಅವ್ಯವಹಾರ ನಡೆಯುತ್ತಿದೆ ಎನ್ನಲಾಗಿದ್ದು, ಇಷ್ಟು ವರ್ಷಗಳಾದರೂ‌ ಆಡಿಟ್ ನಲ್ಲಿ ಇದು ಬೆಳಕಿಗೆ ಬರಲಿಲ್ಲವೇ?? ಜೊತೆಗೆ ಒಬ್ಬ ಡಿ ಗ್ರೂಪ್ ನೌಕರನಷ್ಟೇ ಈ ಅವ್ಯವಹಾರ ನಡೆಸಿದನೇ ಅಥವಾ ಬೇರೆಯವರ ಕುಮ್ಮಕ್ಕು ಇಲ್ಲವೇ? ಎಂಬ ಸಾಕಷ್ಟು ಅನುಮಾನಗಳು ಎದ್ದಿವೆ.

ಸದ್ಯ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಆರೋಪಿ ರಾಜೇಶ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಅವ್ಯವಹಾರದ ಆಳ-ಅಗಲ ತಿಳಿಯಲಿದೆ ಎಂದು ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೊ ತಿಳಿಸಿದ್ದಾರೆ.

ಇದನ್ನೂ ಓದಿ: ನೂತನ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News