ದೇಶದ ಬಡವರ, ದೀನ ದಲಿತರ ಜೀವನ ರೂಪಿಸಲು ನಿಮ್ಮ ಮತ ಅಮೂಲ್ಯವಾಗಿದೆ- ಕೇಂದ್ರ ಗೃಹ ಸಚಿವ ಅಮಿತ್ ಶಾ

Karnataka Assembly Election 2023: ಮುಸಲ್ಮಾನರಿಗೆ ನಮ್ಮ ಬಿಜೆಪಿ ಸರ್ಕಾರ ಮಿಸಲಾತಿ ರದ್ದುಪಡಿಸಲಾಯಿತು, ಆದರೆ ಕಾಂಗ್ರೆಸ್ ನವಋ ಮುಸ್ಲಿಂ ರ ಮಿಸಲಾತಿ ಮತ್ತೆ ಮರಳಿ ಕೊಡ್ತೆವೆ ಅಂತಿದ್ದಾರೆ. ಕಾಂಗ್ರೆಸ್ ನವರು ದಲಿತರಿಗಾಗಿ , ಬಡವರಿಗಾಗಿ ಏನು ಮಾಡಿದ್ದಾರೆ. ಅವರ ಜೀವನ ರೂಪಿಸುವುದಕ್ಕೆ ಏನು ಮಾಡಿದ್ದಾರೆ ಅನ್ನೊದು ದೇಶದ ಜನರ ಪ್ರಶ್ನೆಯಾಗಿದೆ. ಬಿಜೆಪಿ ಸರ್ಕಾರ ಬಡವರಿಗಾಗಿ ಮನೆ, ರೈತನಿಧಿ, ಹೆಣ್ಣು ಮಕ್ಕಳಿಗೆ, ಶಿಕ್ಷಣಕ್ಕಾಗಿ ನಾವು ದುಡಿಯುತ್ತಿದ್ದೇವೆ ಎಂದರು. 

Written by - Yashaswini V | Last Updated : Apr 28, 2023, 04:19 PM IST
  • ನಿಮಗೆ ಜನತೆ ಅಧಿಕಾರ ಕೊಟ್ಟಾಗ ಎಟಿಎಂ ಮಾಡಿಕೊಂಡ್ರಿ
  • 70 ವರ್ಷ ಅಧಿಕಾರದಲ್ಲಿದ್ದರೂ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಆಗಲಿಲ್ಲ.
  • ಆದರೆ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಕಟ್ಟಲು ಪ್ರಾರಂಭಿಸಿದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.
ದೇಶದ ಬಡವರ, ದೀನ ದಲಿತರ ಜೀವನ ರೂಪಿಸಲು ನಿಮ್ಮ ಮತ ಅಮೂಲ್ಯವಾಗಿದೆ- ಕೇಂದ್ರ ಗೃಹ ಸಚಿವ ಅಮಿತ್ ಶಾ  title=

Karnataka Assembly Election: ನೀವು ಯಾರಿಗೂ ಮುಖ್ಯಮಂತ್ರಿ ಮಾಡುವ ಸಲುವಾಗಿ ಮತದಾನ ಮಾಡುತ್ತಿಲ್ಲ, ಸಚಿವ ಮಾಡಲು ಮಾಡುತ್ತಿಲ್ಲ, ದೇಶದ , ರಾಜ್ಯದ ಭವಿಷ್ಯಕ್ಕಾಗಿ ಮತದಾನ ಮಾಡುತ್ತಿದ್ದೀರಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಮತದಾನ ಮಾಡುತ್ತಿದ್ದೀರಿ, ದೇಶದ ಬಡವರ, ದೀನ ದಲಿತರ ಜೀವನ ರೂಪಿಸಲು ನಿಮ್ಮ ಮತ ಅಮೂಲ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲಕ್ಷ್ಮೇಶ್ವರದಲ್ಲಿ ಮತದಾರರಿಗೆ ಕರೆ ನೀಡಿದರು. 

ನಮ್ಮ ಪಕ್ಷದಿಂದ ಯೋಗ್ಯವಾದ ಅಭ್ಯರ್ಥಿಯನ್ನ ನೇಮಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕಳಸಾ ಬಂಡೂರಿಗಾಗಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮತ್ತು ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ರೈತರ ಏಳಿಗೆಗಾಗಿ ಕ್ರಮ ವಹಿಸಿತು. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸರ್ಕಾರ ಇದೆ, ಸಂವಿಧಾನದಲ್ಲಿ ಮಿಸಲಾತಿ ದಲಿತರಿಗೆ ಸಿಗುತ್ತೆ, ಎಸ್.ಸಿ , ಎಸ್.ಟಿ, ಲಿಂಗಾಯತ, ಒಕ್ಕಲಿಗ ಮಿಸಲಾತಿ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದರು. 

ಮುಸಲ್ಮಾನರಿಗೆ ನಮ್ಮ ಬಿಜೆಪಿ ಸರ್ಕಾರ ಮಿಸಲಾತಿ ರದ್ದುಪಡಿಸಲಾಯಿತು, ಆದರೆ ಕಾಂಗ್ರೆಸ್ ನವಋ ಮುಸ್ಲಿಂ ರ ಮಿಸಲಾತಿ ಮತ್ತೆ ಮರಳಿ ಕೊಡ್ತೆವೆ ಅಂತಿದ್ದಾರೆ. ಕಾಂಗ್ರೆಸ್ ನವರು ದಲಿತರಿಗಾಗಿ , ಬಡವರಿಗಾಗಿ ಏನು ಮಾಡಿದ್ದಾರೆ. ಅವರ ಜೀವನ ರೂಪಿಸುವುದಕ್ಕೆ ಏನು ಮಾಡಿದ್ದಾರೆ ಅನ್ನೊದು ದೇಶದ ಜನರ ಪ್ರಶ್ನೆಯಾಗಿದೆ. ಬಿಜೆಪಿ ಸರ್ಕಾರ ಬಡವರಿಗಾಗಿ ಮನೆ, ರೈತನಿಧಿ, ಹೆಣ್ಣು ಮಕ್ಕಳಿಗೆ, ಶಿಕ್ಷಣಕ್ಕಾಗಿ ನಾವು ದುಡಿಯುತ್ತಿದ್ದೇವೆ ಎಂದರು. 

ಇದನ್ನೂ ಓದಿ- ಯತ್ನಾಳ್ ಹೇಳಿಕೆಗೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಕ್ಷಮೆಯಾಚಿಸಬೇಕು: ಡಿ.ಕೆ. ಶಿವಕುಮಾರ್ ಆಗ್ರಹ

ನೀವೇನೇ ಅಂದರೂ ಜನತೆಯ ಮತ ಬಿಜೆಪಿಗೆ:
ಇದೇ ಸಂದರ್ಭದಲ್ಲಿ ನಿನ್ನೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಚಾಣಕ್ಯ ಅಮಿತ್ ಶಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋಟ್ಯಾಂತರ ಜನರನ್ನು ಸಾಲದಿಂದ ಮುಕ್ತರನ್ನಾಗಿ ಮಾಡಿದ್ದಾರೆ. ಖರ್ಗೆ ಅವರ ಮಾತುಗಳು ನಿಮ್ಮ ಮನಸ್ಸನ್ನು ನೋಯಿಸಿದೆ. ನೀವು ನಿಮ್ಮ ಮತದಾನದ ಮೂಲಕ ಅವರಿಗೆ ಬುದ್ದಿ ಕಲಿಸಬೇಕು ಎಂದು ಮತದಾರರಿಗೆ ಕರೆ ನೀಡಿದರಲ್ಲದೆ, ನೀವೇನೇ ಅಂದರೂ ನಾಡಿನ ಜನತೆ ಬಿಜೆಪಿಗೆ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ನಿಮ್ಮ ಹೇಳಿಕೆಯಿಂದ ನಿಮಗೆ ಯಾವುದೇ ಲಾಭ ಆಗುವದಿಲ್ಲ , ನಿಮಗೆ ಜನತೆ ಅಧಿಕಾರ ಕೊಟ್ಟಾಗ ಎಟಿಎಂ ಮಾಡಿಕೊಂಡ್ರಿ, 70 ವರ್ಷ ಅಧಿಕಾರದಲ್ಲಿದ್ದರೂ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಆಗಲಿಲ್ಲ. ಆದರೆ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಕಟ್ಟಲು ಪ್ರಾರಂಭಿಸಿದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು. 

ಇದನ್ನೂ ಓದಿ- Geetha Shivarajkumar Joins Congress: ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್​ಗೆ ಸೇರ್ಪಡೆ..!

ಕಾಂಗ್ರೆಸ್ ಲಿಂಗಾಯತ ಸಮಾಜದ ವಿರೋಧ ಮಾಡಿದರು. ರಾಹುಲ್ ಗಾಂಧಿ ಅವರೇ ನಿಮ್ಮ ಹಿಂದಿರುವ ನಾಯಕರು ನಿಮಗೆ ಯಾವುದೇ ರೀತಿಯ ಲಾಭ ತರುವುದಿಲ್ಲ. ಬದಲಿಗೆ ಅವರು ಆಡುವ ಮಾತುಗಳು ಬಿಜೆಪಿಗೆ ಮತಗಳನ್ನು ತಂದು ಕೊಡುತ್ತವೆ. ನೀವು ನರೇಂದ್ರ ಮೋದಿಯವರನ್ನು ಎಷ್ಟು ಟೀಕಿಸುತ್ತೀರೋ ಬಿಜೆಪಿಗೆ ಅಷ್ಟು ಮತ ಬರುತ್ತದೆ. ನರೇಂದ್ರ ಮೋದಿಯವರ ಕೈ ಬಲಗೊಳ್ಳುತ್ತದೆ ಎಂದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News