ಕುಟುಂಬ ರಾಜಕಾರಣ ಮತ್ತು ಕ್ರಿಮಿನಲ್ ಗಳ ಸಮ್ಮಿಲನವೇ ಬಿಜೆಪಿ- ಗೌರವ್ ವಲ್ಲಭ ವಾಗ್ದಾಳಿ

ಕುಟುಂಬ ರಾಜಕಾರಣ ಮತ್ತು ಕ್ರಿಮಿನಲ್ ಗಳ ಸಮ್ಮಿಲನವೇ ಬಿಜೆಪಿ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ. ಬಿಜೆಪಿ 224 ಕ್ಷೇತ್ರಗಳಲ್ಲಿ ಇದುವರೆಗೂ ಘೋಷಣೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಲ್ಲಿ 35 ಅಭ್ಯರ್ಥಿಗಳು ಕುಟುಂಬ ರಾಜಕಾರಣದ ಫಲವಾಗಿದ್ದಾರೆ. 

Written by - Zee Kannada News Desk | Last Updated : Apr 13, 2023, 05:48 PM IST
  • ಬಿಜೆಪಿಯಲ್ಲಿ ಕ್ರಿಮಿನಲ್ ಗಳಿಗೆ ಟಿಕೆಟ್ ನೀಡಲು 1200 ಪ್ರಕರಣಗಳನ್ನು ವಜಾ ಮಾಡಿಕೊಳ್ಳಲಾಗಿದೆ
  • ಈ ಕ್ರಿಮಿನಲ್ ಗಳನ್ನು ಬಂಧಿಸಿದ್ದ ಐಪಿಎಸ್ ಅಧಿಕಾರಿಗಳೇ ಈಗ ಆ ಕ್ರಿಮಿನಲ್ ಮನೆಗೆ ಹೋಗಿ ಬೆಂಬಲ ಕೋರುತ್ತಿದ್ದಾರೆ
  • ಇದು ಬಿಜೆಪಿಯ ಬಂಡವಾಳ.
ಕುಟುಂಬ ರಾಜಕಾರಣ ಮತ್ತು ಕ್ರಿಮಿನಲ್ ಗಳ ಸಮ್ಮಿಲನವೇ ಬಿಜೆಪಿ- ಗೌರವ್ ವಲ್ಲಭ ವಾಗ್ದಾಳಿ  title=
file photo

ಬೆಂಗಳೂರು: ಕುಟುಂಬ ರಾಜಕಾರಣ ಮತ್ತು ಕ್ರಿಮಿನಲ್ ಗಳ ಸಮ್ಮಿಲನವೇ ಬಿಜೆಪಿ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ. ಬಿಜೆಪಿ 224 ಕ್ಷೇತ್ರಗಳಲ್ಲಿ ಇದುವರೆಗೂ ಘೋಷಣೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಲ್ಲಿ 35 ಅಭ್ಯರ್ಥಿಗಳು ಕುಟುಂಬ ರಾಜಕಾರಣದ ಫಲವಾಗಿದ್ದಾರೆ. ಪ್ರತಿ ಆರರಲ್ಲಿ ಓರ್ವ ಅಭ್ಯರ್ಥಿ ಕುಟುಂಬ ರಾಜಕಾರಣದ ಅಭ್ಯರ್ಥಿಗಳಾಗಿದ್ದಾರೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಕಿಡಿ ಕಾರಿದ್ದಾರೆ.

ಈ ಕುರಿತಾಗಿ ಮಾಧ್ಯಮಗೋಷ್ಠಿಯಲ್ಲಿ ಅವರು ಹೇಳಿದ್ದಿಷ್ಟು..

ಪರಿವಾರವಾದದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ಈಗ ಈ ವಿಚಾರವಾಗಿ ಏನು ಹೇಳುತ್ತದೆ? ಬಿಜೆಪಿ ನಾಯಕರ ಕುಟುಂಬ ಸದಸ್ಯರಿಗೆ ಬಿಜೆಪಿ ಟಿಕೆಟ್ ನೀಡಿವೆ. ಅಲ್ಲದೆ ಎಲ್ಲಾ ರೀತಿಯ ಸಂಬಂಧಗಳಿಗೂ ಬಿಜೆಪಿಯಲ್ಲಿ ಟಿಕೆಟ್ ನೀಡಲಾಗಿದೆ. ಬಿಜೆಪಿಯ ಈ ಪಟ್ಟಿಯನ್ನು ‘ಪರಿವಾರವಾದ + ಕ್ರಿಮಿನಲ್ = ಬಿಜೆಪಿ’ ಎಂಬಂತಾಗಿದೆ. 

ಇದನ್ನೂ ಓದಿ: MP Kumaraswamy: ಕೈ ತಪ್ಪಿದ್ದ ಟಿಕೆಟ್‌ : ಬಿಜೆಪಿಗೆ ರಾಜೀನಾಮೆ ನೀಡಿದ ಎಂ. ಪಿ ಕುಮಾರಸ್ವಾಮಿ !

ಬಿಜೆಪಿಯಲ್ಲಿ ಕ್ರಿಮಿನಲ್ ಗಳಿಗೆ ಟಿಕೆಟ್ ನೀಡಲು 1200 ಪ್ರಕರಣಗಳನ್ನು ವಜಾ ಮಾಡಿಕೊಳ್ಳಲಾಗಿದೆ. ಈ ಕ್ರಿಮಿನಲ್ ಗಳನ್ನು ಬಂಧಿಸಿದ್ದ ಐಪಿಎಸ್ ಅಧಿಕಾರಿಗಳೇ ಈಗ ಆ ಕ್ರಿಮಿನಲ್ ಮನೆಗೆ ಹೋಗಿ ಬೆಂಬಲ ಕೋರುತ್ತಿದ್ದಾರೆ. ಇದು ಬಿಜೆಪಿಯ ಬಂಡವಾಳ. ಕರ್ನಾಟಕದಲ್ಲಿ ಬಿಜೆಪಿ ಎಂದರೇನು ಎಂದು ಕೇಳಿದರೆ, 40% ಕಮಿಷನ್, ಪರಿವಾರವಾದ ಹಾಗೂ ಕ್ರಿಮಿನಲ್ ಗಳ ಬೆಂಬಲದ ರೂಪವಾಗಿದೆ.

ಇದನ್ನೂ ಓದಿ: ಬೆಂಗಳೂರಿನ ನಾಗರಿಕರೇ ಎಚ್ಚರ! ಈ ಬಾರಿಯ ಮಳೆಗೆ ನಿಮ್ಮ ಏರಿಯಾವು ನೀರಿನಿಂದ ಮುಳುಗಡೆ ಆಗಬಹುದು ಹುಷಾರ್..!!

ಈ ಬಿಜೆಪಿಯನ್ನು ಕಿತ್ತೊಗೆಯಲು ರಾಜ್ಯದ ಜನ ತೀರ್ಮಾನಿಸಿದ್ದು, ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ. ನಾವು ವೈಜ್ಞಾನಿಕ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷ 140 ಕ್ಷೇತ್ರ ಗೆಲ್ಲುವ ಸೂಚನೆ ಸಿಕ್ಕಿದೆ. ಮೇ 13ರಂದು ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ ರಾಜ್ಯದ ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ ಸರ್ಕಾರ ರಚನೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News