Karnataka Assembly Election 2023: ಪ್ರಜಾಪ್ರಭುತ್ವದ ಹಬ್ಬ ಚುನಾವಣೆ ದಿನ ಹತ್ತಿರ ಬರ್ತಿದ್ದಂತೆ, ಬೆಂಗಳೂರು ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ಅಕ್ರಮಗಳ ಮೇಲೆ ಕಣ್ಣಿಡಲು ಸಕಲ ತಯಾರಿ ಮಾಡಿಕೊಂಡಿರುವ ಬೆಂಗಳೂರು ಜಿಲ್ಲಾಡಳಿತ ಅಕ್ರಮ ವೆಸಗುವವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕರುನಾಡ ಕುರುಕ್ಷೇತ್ರಕ್ಕೆ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿಯಿದೆ. ಕದನ ಕೌತುಕದಲ್ಲಿ ಅಭ್ಯರ್ಥಿಗಳು ಅಖಾಡಕ್ಕೆ ಧುಮುಕಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ಕಣದಲ್ಲಿ ನಡೆಯುತ್ತಿರುವ ಅಕ್ರಮ ವಿರುದ್ಧ ಬೆಂಗಳೂರು ಜಿಲ್ಲಾಡಳಿತ ಸಮರ ಸಾರಿದೆ. ಮಾದರಿ ನೀತಿ ಸಂಹಿತೆಯನ್ನು ಜಾರಿ ಮಾಡಿ, ಚುನಾವಣಾ ಗಲಭೆಗಳನ್ನು ಗುರುತಿಸಿ, ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡ ಚುನಾವಣಾ ಅಕ್ರಮವೇಸಗುವವರು, ನೀತಿ ಸಂಹಿತೆ ಉಲ್ಲಂಘನೆ ಮಾಡುವವರ ಮೇಲೆ ಸಮರ ಸಾರಿದೆ. ಹೀಗೆ ನೀತಿ ಸಂಹಿತೆ ಜಾರಿಯಾದ ನಂತರದಿಂದ ಇಲ್ಲಿಯ ತನಕ 1057 ದೂರುಗಳನ್ನ ದಾಖಲಿಸಿದೆ.
ಇದನ್ನೂ ಓದಿ- Karnataka Assembly Elections 2023: ಚಿನ್ನದ ನಾಡು ಕೋಲಾರದಲ್ಲಿ ಹೇಗಿದೆ ಪಕ್ಷಗಳ ಬಲಾಬಲ?
ಬೆಂಗಳೂರಿನಲ್ಲಿ ಎಲೆಕ್ಷನ್ ಹಿನ್ನೆಲೆ ಚುನಾವಣಾ ಅಕ್ರಮಗಳನ್ನ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ಅಲ್ಲದೆ ಮತದಾರರಿಗೆ ಆಮಿಷವೊಡ್ಡುತ್ತಿರುವ ವ್ಯಕ್ತಿಗಳ ಮೇಲೆಯೂ ನಿಗಾ ಇಡಲಾಗಿದ್ದು ಚುನಾವಣೆ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುತ್ತಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ನಗರ ಜಿಲ್ಲಾಧಿಕಾರಿ ಕೆ.ಎ ದಯಾನಂದ್, ಮಾದರಿ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ದೂರುಗಳು ದಾಖಲಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಚೆಕ್ ಫೋಸ್ಟ್ ನಲ್ಲಿ ಹದ್ದಿನ ಕಣ್ಣಿಟ್ಟಿದ್ದು, ಭರ್ಜರಿ ಬೇಟೆಯಾಡಿದೆ. ಹಾಗದ್ರೆ ಜಿಲ್ಲಾಡಳಿತದ ಲೆಕ್ಕದ ಪ್ರಕಾರ ಸೀಜ್ ಆಗಿದ್ದೇನು? ಅದರ ಮೌಲ್ಯವೆಷ್ಟು... ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ಒಟ್ಟು 25 ಕೋಟಿ ಮೌಲ್ಯದ ವಸ್ತುಗಳ ಸೀಜ್ ಮಾಡಿದ್ದಾರೆ. 7 ಕೋಟಿ ರೂಪಾಯಿ ನಗದು ಹಣವನ್ನ ವಶಪಡಿಸಿಕೊಳ್ಳಲಾಗಿದೆ ಅಂತಾ ಹೇಳಿದ್ದಾರೆ. ಅಲ್ಲದೆ ಬರೋಬ್ಬರಿ 9.7 ಕೋಟಿ ರೂಪಾಯಿ ಮೌಲ್ಯದ ಲಿಕ್ಕರ್, 23.9 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಹಾಗೂ 7.3 ಕೋಟಿ ರೂಪಾಯಿ ಮೌಲ್ಯದ ಮತದಾರರಿಗೆ ಆಮಿಷವೊಡ್ಡಲು ಇರಿಸಿದ್ದ ವಸ್ತುಗಳನ್ನೂ ಜಪ್ತಿ ಮಾಡಲಾಗಿದೆ. ಇನ್ನು ಚುನಾವಾಣಾ ದೀರಿನ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಭಾಗದ ಮನೆ ಒಂದರಲ್ಲಿ 80 ಲಕ್ಷ ನಗದು ಮತ್ತು 30 kg ಶ್ರೀಗಂಧ ವಶ ಪಡಿಸಿಕೊಂಡಿದ್ದಾರೆ. ಡಿಸಿ ದಯಾನಂದ್ ಅವರು ಮುಂದಿನ ದಿನಗಳಲ್ಲಿ ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಚುನಾವಣಾ ಅಕ್ರಮ ತಡೆಯಲು ಜಿಲ್ಲಾಡಳಿತ ಕೆಲವು ಕ್ಷೇತ್ರದಲ್ಲಿ ಕಂಟ್ರೋಲ್ ರೂಂಗಳನ್ನು ಕೂಡ ತೆರೆದಿದೆ. ಯಾವ್ಯಾವ ಕ್ಷೇತ್ರಗಳಲ್ಲಿ ಕಂಟ್ರೋಲ್ ರೂಂ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ವಿವರ ಕೆಳಕಂಡಂತಿದೆ...
• ಯಲಹಂಕ
• ಯಶವಂತಪುರ
• ಬ್ಯಾಟರಾಯನಪುರ
• ಮಹದೇವಪುರ
• ದಾಸರಹಳ್ಳಿ
• ಆನೇಕಲ್
• ಬೆಂಗಳೂರು ದಕ್ಷಿಣ
ಇದನ್ನೂ ಓದಿ- Karnataka Assembly Election 2023: ಚಿಕ್ಕೋಡಿ ಕುರುಕ್ಷೇತ್ರದಲ್ಲಿ ಹೇಗಿದೆ ಪಕ್ಷಗಳ ಬಲಾಬಲ?
ಇದಲ್ಲದೇ ಸೂಕ್ಷ್ಮ ಮತಗಟ್ಟೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಜಿಲ್ಲಾಡಳಿತ 49 ಚೆಕ್ ಪೋಸ್ಟ್ ಗಳನ್ನ ಹಾಕಿದ್ದು ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಸಿದೆ.. ಅಲ್ಲದೇ ಚುನಾವಣಾ ಅಕ್ರಮಗಳು ಕಂಡು ಬಂದ್ರೆ ಎನ್‌ಜಿಆರ್‌ಎಸ್ (NGRS) ಪೋರ್ಟ್ ನಲ್ಲಿ ಸಹ ದೂರು ದಾಖಲಿಸಬಹುದು. ಕೇವಲ ದೂರುಗಳು ಮಾತ್ರವಲ್ಲ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಾಗಿ ಸಹ ಈ ಕಂಟ್ರೋಲ್ ರೂಂ ಗೆ ಕೆರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.