Gujarat: ಸೂರತ್‌ನಲ್ಲಿ ಭೀಕರ ಅಪಘಾತ, 15 ಮಂದಿ ಮೃತ

ಗುಜರಾತ್‌ನ ಸೂರತ್‌ನಲ್ಲಿ (Surat) ಒಂದು ಡಂಪರ್ ಮಗು ಸೇರಿದಂತೆ 22 ಜನರ ಮೇಲೆ ಹರಿದಿದ್ದು, ಸ್ಥಳದಲ್ಲೇ 13 ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 8 ಜನರು ಗಾಯಗೊಂಡಿದ್ದಾರೆ.  

Written by - Zee Kannada News Desk | Last Updated : Jan 19, 2021, 04:40 PM IST
  • ಸೂರತ್‌ನ ಕಿಮ್ ರಸ್ತೆಯಲ್ಲಿ ಭೀಕರ ಅಪಘಾತ
  • ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ, 7 ಮಂದಿ ಗಾಯಗೊಂಡಿದ್ದಾರೆ
  • ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
Gujarat: ಸೂರತ್‌ನಲ್ಲಿ ಭೀಕರ ಅಪಘಾತ, 15 ಮಂದಿ ಮೃತ title=
ಸಾಂದರ್ಭಿಕ ಚಿತ್ರ

ಸೂರತ್ : ಗುಜರಾತ್‌ನ ಸೂರತ್‌ನಲ್ಲಿ ಸೋಮವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಸೂರತ್‌ನ ಕಿಮ್ ರಸ್ತೆಯಲ್ಲಿ ಡಂಪರ್ ಒಂದು ಮಗು ಸೇರಿದಂತೆ 22 ಜನರ ಮೇಲೆ ಹರಿದಿದ್ದು 13 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 9 ಜನರು ಗಾಯಗೊಂಡಿದ್ದು, ಅವರನ್ನು ಸೂರತ್‌ನ ಎಸ್‌ಎಂಐಎಂಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ಗಾಯಗೊಂಡವರಲ್ಲಿ 2 ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.

ರಸ್ತೆ ಬದಿಯಲ್ಲಿ ಮಲಗಿದ್ದ ಕಾರ್ಮಿಕರು :
ಸೂರತ್ (Surat) ನ ಕಿಮ್ ರಸ್ತೆಯಲ್ಲಿ ರಸ್ತೆ ಬದಿಯಲ್ಲಿ ಡಂಪರ್ ಚಾಲಕ ಸ್ಟೀರಿಂಗ್ ನಿಯಂತ್ರಣ ಕಳೆದುಕೊಂಡು ಮಲಗಿದ್ದ ಕಾರ್ಮಿಕರ ಮೇಲೆ ವಾಹನ ಚಲಾಯಿಸಿದ್ದು ಈ ಭೀಕರ ಅಪಘಾತ (Accident) ಸಂಭವಿಸಿದೆ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಗಾಯಗೊಂಡವರಲ್ಲಿ ಅನೇಕ ಜನರ ಸ್ಥಿತಿ ಗಂಭೀರವಾಗಿದೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ - Fact-Check: ಸ್ಪೀಕರ್ ಓಂ ಬಿರ್ಲಾ ಪುತ್ರಿ ಯುಪಿಎಸ್ಸಿ ಪರೀಕ್ಷೆ ಎದುರಿಸದೇ ಉತ್ತೀರ್ಣರಾದ್ರಾ?

ಪಿಎಂಒ ಪರಿಹಾರವನ್ನು ಘೋಷಿಸಿತು :
ಈ ಭೀಕರ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi)ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸೂರತ್‌ನಲ್ಲಿ ಟ್ರಕ್ ಅಪಘಾತದಿಂದ ಸಂಭವಿಸಿರುವ ಪ್ರಾಣಹಾನಿ ದುಃಖಕರವಾಗಿದೆ ಎಂದವರು ಟ್ವೀಟ್ ಮೂಲಕ ತಿಳಿಸಿದ್ದಾರೆ. 

ಇದರೊಂದಿಗೆ ಪ್ರಧಾನಿ ಕಚೇರಿ (ಪಿಎಂಒ) ಪರಿಹಾರವನ್ನು ಘೋಷಿಸಿತು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ.

ಇದನ್ನೂ ಓದಿ - Mamata Banerjee: ದೀದಿ ಸೋಲಿಸದೇ ಇದ್ರೆ ರಾಜಕೀಯವನ್ನೇ ತ್ಯಜೀಸುವೆ: ಬಿಜೆಪಿ ನಾಯಕ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News