ವಿಲ್ಲುಪುರಾಮ್ : ತಮಿಳುನಾಡಿನ ಮೊಬಿನಾ ಎನ್ನುವ ಮಂಗಳಮುಖಿ ಮಹಿಳೆ ಮಿಸ್ ಕೋವಗಂ ಕೀರಿಟವನ್ನು ಮುಡಿಗೆ ಏರಿಸಿಕೊಂಡಿದ್ದಾಳೆ.
ಈ ಕುರಿತಾಗಿ ಎಎನ್ಐ ಗೆ ಪ್ರತಿಕ್ರಿಯಿಸಿರುವ ಮೊಬಿನಾ " ಪತ್ರಿಕೆಗಳಲ್ಲಿ ಮತ್ತು ಟಿವಿಗಳಲ್ಲಿ ನನ್ನ ಕುರಿತಾಗಿ ಸುದ್ದಿ ಬರುತ್ತಿರುವುದಕ್ಕೆ ಸಂತಸವಾಗಿದೆ, ನಾನು ನನ್ನ ಸಮುದಾಯ ಕುಟುಂಬ ಸ್ನೇಹಿತರು ಮತ್ತು ನನ್ನ ಕಾರ್ಯ ಸ್ಥಳಕ್ಕೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ" ಎಂದು ತಿಳಿಸಿದರು .ಈ ಸ್ಪರ್ಧೆಯಲ್ಲಿ ಚೆನ್ನೈನ ಪ್ರೀತಿ ಎರಡನೇ ಸ್ಥಾನ ಪಡೆದರೆ, ಈರೋಡಿನ ಸುಭಾಶ್ರೀ ಮೂರನೇ ಸ್ಥಾನ ಪಡೆದರು.
Mobina, winner of Miss Koovagam pageant in the 18-day Koovagam festival which concluded on 2 May, says, ' I see news about me on newspapers and TV. I am really happy. I want to thank my community, family, friends and workplace' #TamilNadu pic.twitter.com/2idNO2y63N
— ANI (@ANI) May 4, 2018
18 ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಮಂಗಳ ಮುಖಿಯರು ಕೂತಂಡವರ್ ದೇವಸ್ಥಾನದಲ್ಲಿ ಮಹಾಭಾರತ ಪ್ರದರ್ಶಿಸಿ ಅದರಲ್ಲಿ ಕೃಷ್ಣ ಪರಮಾತ್ಮನು ಮೊಹಿನಿ ಅವತಾರವಾಗಿ ಅರಾವನ್ ನನ್ನು(ಅರ್ಜುನ ನ ಮಗ) ಮದುವೆ ಆಗುವ ಭಾಗವನ್ನು ಪ್ರದರ್ಶಿಸಿದರು.
ಈ ಉತ್ಸವದ ಕೊನೆಯ ದಿನದಂದು ಕೂತಂಡವರ್ ದೇವಾಲಯದ ಪುರೋಹಿತರು ಮಂಗಳ ಮುಖಿಯರು ಧರಿಸಿರುವ ಬಳೆಗಳನ್ನು ಒಡೆಯಲಾಗುತ್ತದೆ ಆ ಮೂಲಕ ಅವರನ್ನು ಸಾಂಕೇತಿಕವಾಗಿ ವಿಧವೆಯಾರನ್ನಾಗಿ ಮಾಡಲಾಗುತ್ತದೆ.