Assam Land Dispute: ಈ ರಾಜ್ಯಗಳಲ್ಲಿ ತಲೆದೋರಿತು ತೈಲ ಸಮಸ್ಯೆ : ಬೈಕ್ ಗೆ ಸಿಗಲಿದೆ ಕೇವಲ 5 ಲೀ. ಪೆಟ್ರೋಲ್

ಮಿಜೋರಾಂ ಸರ್ಕಾರದ  ನಿರ್ಧಾರದ ಪ್ರಕಾರ, 12, 8 ಮತ್ತು 6 ಚಕ್ರಗಳಿಗೆ ಗರಿಷ್ಠ 50 ಲೀಟರ್ ವರೆಗೆ ಇಂಧನ ನೀಡಲಾಗುವುದು.   

Written by - Ranjitha R K | Last Updated : Aug 8, 2021, 08:59 AM IST
  • ಗಡಿ ವಿವಾದದ ನಂತರ ಮಿಜೋರಾಂ ಸರ್ಕಾರದ ನಿರ್ಧಾರ
  • ಸ್ಕೂಟರ್ ಕೇವಲ 3 ಲೀಟರ್ ಪೆಟ್ರೋಲ್ ಸಿಗಲಿದೆ
  • ಪಿಕಪ್ ಟ್ರಕ್ ಗೆ 20 ಲೀಟರ್ ಡೀಸೆಲ್
Assam Land Dispute: ಈ  ರಾಜ್ಯಗಳಲ್ಲಿ ತಲೆದೋರಿತು ತೈಲ ಸಮಸ್ಯೆ : ಬೈಕ್ ಗೆ ಸಿಗಲಿದೆ ಕೇವಲ 5 ಲೀ. ಪೆಟ್ರೋಲ್  title=
ಸ್ಕೂಟರ್ ಕೇವಲ 3 ಲೀಟರ್ ಪೆಟ್ರೋಲ್ ಸಿಗಲಿದೆ (file photo)

ನವದೆಹಲಿ : ಅಸ್ಸಾಂ ಮಿಜೋರಾಂ ಭೂ ವಿವಾದದ (Assam Mizoram Land Dispute) ನಡುವೆ ಮಿಜೋರಾಂನಲ್ಲಿ ಇಂಧನ ಕೊರತೆ ಎದುರಾಗಿದೆ.  ಮಿಜೋರಾಂ ಸರ್ಕಾರವು (Mizoram Government) ನಿರ್ದಿಷ್ಟ ಪ್ರಮಾಣದ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ವಾಹನಗಳಿಗೆ ನೀಡಲು ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿ -306ರನ್ನು  (National Highway- 306 Closed) ಮುಚ್ಚಿರುವ ಕಾರಣದಿಂದಾಗಿ,  ಮಿಜೋರಾಂನಲ್ಲಿ ಇಂಧನ ಕೊರತೆ ಎದುರಾಗಿದೆ. 

ವಾಹನಗಳಿಗೆ ಸಿಗಲಿದೆ ಇಷ್ಟೇ  ಪೆಟ್ರೋಲ್ ಮತ್ತು ಡೀಸೆಲ್ : 
ಮಿಜೋರಾಂ ಸರ್ಕಾರದ  (Mizoram Government) ನಿರ್ಧಾರದ ಪ್ರಕಾರ, 12, 8 ಮತ್ತು 6 ಚಕ್ರಗಳಿಗೆ ಗರಿಷ್ಠ 50 ಲೀಟರ್ ವರೆಗೆ ಇಂಧನ ನೀಡಲಾಗುವುದು. ಮತ್ತು ಪಿಕಪ್ ಟ್ರಕ್‌ಗಳಂತಹ ಮಧ್ಯಮ ಮೋಟಾರ್ ವಾಹನಗಳಿಗೆ ಗರಿಷ್ಠ 20 ಲೀಟರ್ ಇಂಧನ ನೀಡಲಾಗುತ್ತದೆ. ಇದಲ್ಲದೇ, ಸ್ಕೂಟರ್ ಗೆ ಗರಿಷ್ಠ 3 ಲೀಟರ್ ಇಂಧನ, ಬೈಕ್‌ಗೆ 5 ಲೀಟರ್ ಮತ್ತು ಕಾರಿಗೆ ಗರಿಷ್ಠ 10 ಲೀಟರ್ ಇಂಧನ (fuel) ಸಿಗಲಿದೆ.

ಇದನ್ನೂ ಓದಿ : PM Kisan ಯೋಜನೆಯ 9ನೇ ಕಂತಿನ ಹಣ ಈ ದಿನ ರೈತರ ಖಾತೆಗೆ : ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಪ್ರಧಾನಿ ಮೋದಿ

ಪೆಟ್ರೋಲ್ ಪಂಪ್‌ಗಳಿಗೆ ಸೂಚನೆ :
ಗಮನಿಸಬೇಕಾದ ಅಂಶವೆಂದರೆ, ಅಸ್ಸಾಂನೊಂದಿಗಿನ ಗಡಿ ವಿವಾದ (Assam Mizoram Land Dispute) ಆರಂಭವಾದಾಗಿನಿಂದ, ಮಿಜೋರಾಂನಲ್ಲಿ ಆಹಾರ (Food)  ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯ ಮೇಲೆಯೂ ಪರಿಣಾಮ ಬೀರಿದೆ. ವಾಹನಗಳಿಗೆ ಇಂಧನವನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ ನೀಡುವಂತೆ ಎಲ್ಲಾ ಪೆಟ್ರೋಲ್ ಪಂಪ್‌ಗಳಿಗೆ ಸೂಚನೆ ನೀಡಲಾಗಿದೆ.

ಬ್ಲಾಕ್ ಮಾರ್ಕೆಟ್ ವಿರುದ್ಧ ಕ್ರಮ : 
ಮಿಜೋರಾಂ ಸರ್ಕಾರವು ಯಾರಿಗೂ ಕಂಟೇನರ್‌ನಲ್ಲಿ ಪೆಟ್ರೋಲ್ (Petrol and diesel) ಅಥವಾ ಡೀಸೆಲ್ ನೀಡಬಾರದು ಎಂದು ನಿರ್ದೇಶಿಸಿದೆ. ಪೆಟ್ರೋಲ್ ಪಂಪ್‌ಗೆ ಬರುವ ವಾಹನಗಳಿಗೆ ಮಾತ್ರ ಇಂಧನ ನೀಡುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಕಾಳದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇಷ್ಟು ಮಾತ್ರವಲ್ಲದೆ, ತಮ್ಮ ಬಳಿ ಎಷ್ಟು ಇಂಧನ ಇದೆ ಎನ್ನುವುದರ ವರದಿಯನ್ನು ಸ್ಟೇಟ್ ಲೀಗಲ್ ಮೆಟ್ರೋಲೋಜಿ ಡಿಪಾರ್ಟ್ಮೆಂಟ್ ಗೆ ಸಲ್ಲಿಸುವಂತೆ ಹೇಳಲಾಗಿದೆ. 

ಇದನ್ನೂ ಓದಿ : ತ್ರಿಪುರಾ ಸಿಎಂ ಬಿಬ್ಲಬ್ ದೇವ್ ಹತ್ಯೆಗೆ ಯತ್ನ: ಮೂವರ ಬಂಧನ

ಜುಲೈ 26 ರಂದು ಅಸ್ಸಾಂ ಮತ್ತು ಮಿಜೋರಾಂನ ಗಡಿಯಲ್ಲಿ  ಘರ್ಷಣೆ ನಡೆದಿದ್ದು, ಇದು ರಾಷ್ಟ್ರೀಯ ಹೆದ್ದಾರಿ -306ರ್ ಮೇಲೆ  ಕೆಟ್ಟ  ಪರಿಣಾಮ ಬೀರಿದೆ. ಆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಆರು ಅಸ್ಸಾಂ ಪೊಲೀಸರು ಸಾವನ್ನಪ್ಪಿದರು. ಎರಡೂ ಕಡೆಗಳಲ್ಲಿ ನಾಗರಿಕರು ಗಾಯಗೊಂದಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News