ಆರ್ ಜೆ ಡಿ ಯಿಂದ ಬಿಹಾರದಲ್ಲಿ ಸರ್ಕಾರ ರಚನೆಗೆ ಅವಕಾಶ ನೀಡಲು ಆಗ್ರಹ

   

Last Updated : May 17, 2018, 06:27 PM IST
ಆರ್ ಜೆ ಡಿ ಯಿಂದ ಬಿಹಾರದಲ್ಲಿ ಸರ್ಕಾರ ರಚನೆಗೆ ಅವಕಾಶ ನೀಡಲು ಆಗ್ರಹ  title=

ಪಾಟ್ನಾ:  ಬಿಹಾರದಲ್ಲಿ ಆರ್ ಜೆ ಡಿ ಪಕ್ಷವು ಅತಿ ದೊಡ್ಡ ಪಕ್ಷವಾಗಿರುವುದರಿಂದ ಸರ್ಕಾರ ರಚನೆಗೆ ಅವಕಾಶ  ನೀಡಬೇಕು ಎಂದು ಆರ್ ಜೆ ಡಿಯು ಬಿಹಾರದ ರಾಜ್ಯಪಾಲರನ್ನು ಆಗ್ರಹಿಸಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ  ತೇಜಸ್ವಿ ಯಾದವ್ "ನಾವು ಕರ್ನಾಟಕದಲ್ಲಿನ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಖಂಡಿಸಿ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ. ಅಲ್ಲದೆ ನಾವು ಪ್ರಸ್ತುತವಿರುವ ಸರ್ಕಾರವನ್ನು ಕಿತ್ತೊಗೆದು ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನ ನೀಡಿರುವಂತೆ  ತಮಗೂ ನೀಡಬೇಕೆಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ ನಾಳೆ ನಾನು ಬಿಹಾರದ ರಾಜ್ಯಪಾಲರನ್ನು ನಮ್ಮ ಶಾಸಕರೊಂದಿಗೆ ಭೇಟಿ ಮಾಡಿ ದೊಡ್ಡ ಪಕ್ಷವಾಗಿರುವುದರಿಂದ ಸರ್ಕಾರ ರಚಿಸಲು ಆಹ್ವಾನ ನಿಡಬೇಕೆಂದು  ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.

ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಅವರ ಹೇಳಿಕೆಯು ಪ್ರಮುಖವಾಗಿ ಕರ್ನಾಟಕದಲ್ಲಿ ಬಹುಮತವಿಲ್ಲದಿದ್ದರೂ ಸಹಿತ ರಾಜ್ಯಪಾಲರು ದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ಸರ್ಕಾರ  ಆಹ್ವಾನಿಸಿದ ಹಿನ್ನೆಲೆಯಲ್ಲಿ ಬಂದಿದೆ.

Trending News