Soniya Gandhi : 'ನಾನು ಇಂದಿರಾ ಗಾಂಧಿಯವರ ಸೊಸೆ, ನಾನು ಯಾರಿಗೂ ಹೆದರುವುದಿಲ್ಲ'

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸೋನಿಯಾ ಗಾಂಧಿ, ನಾನು ಇಂದಿರಾ ಗಾಂಧಿಯವರ ಸೊಸೆ ಮತ್ತು ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ದರು. 

Written by - Channabasava A Kashinakunti | Last Updated : Jul 21, 2022, 05:36 PM IST
  • ನ್ಯಾಷನಲ್ ಹೆರಾಲ್ಡ್ ಪ್ರಕರಣ
  • ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ
  • ಇಂದು ಇಡಿ ವಿಚಾರಣೆಗೆ ಹಾಜರಾದ ಸೋನಿಯಾ ಗಾಂಧಿ
Soniya Gandhi : 'ನಾನು ಇಂದಿರಾ ಗಾಂಧಿಯವರ ಸೊಸೆ, ನಾನು ಯಾರಿಗೂ ಹೆದರುವುದಿಲ್ಲ' title=

 National Herald Case : ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧಿಸಿದಂತೆ  ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗಿದ್ದಾರೆ. 

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸೋನಿಯಾ ಗಾಂಧಿ, ನಾನು ಇಂದಿರಾ ಗಾಂಧಿಯವರ ಸೊಸೆ ಮತ್ತು ಯಾರಿಗೂ ಹೆದರುವುದಿಲ್ಲ ಎಂದು ಹೇಳಿದ್ದರು. 

ಇದನ್ನೂ ಓದಿ : President Salary : ಭಾರತದ ರಾಷ್ಟ್ರಪತಿಗಳ ಸಂಬಳ ಎಷ್ಟು? ಅವರಿಗೆ ಸೌಲಭ್ಯಗಳು ಏನು? ಇಲ್ಲಿದೆ ಮಾಹಿತಿ
 
ಕಾಂಗ್ರೆಸ್ ಪಕ್ಷ ನಾಯಕರು ದೆಹಲಿಯ ಸಂಸತ್ತಿನ ಎಲ್ಲಾ ರಸ್ತೆಗಳಲ್ಲಿ ಗದ್ದಲ ಸೃಷ್ಟಿಸಿದ್ದಾರೆ. ಇಡಿ ಕಚೇರಿಗೆ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ಬಗ್ಗೆ ತನ್ನ ಕಾಂಗ್ರೆಸ್ ನಾಯಕರು, ನಮ್ಮ ಹಿರಿಯ ನಾಯಕತ್ವದ ವಿರುದ್ಧ ಇಡಿ ಕ್ರಮವನ್ನು "ರಾಜಕೀಯ ಸೇಡು" ಎಂದು ಕರೆದಿದ್ದಾರೆ, ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುತ್ತಿದೆ.

ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಕರೆಸಿತ್ತು. ಆಗಲು ಪಕ್ಷದ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. 

ಮೋದಿ ನೇತೃತ್ವದ ಸರ್ಕಾರವು ವಿರೋಧ ಪಕ್ಷಗಳನ್ನು ಶತ್ರುಗಳು ಎಂದು ಪರಿಗಣಿಸುತ್ತಿದೆ ಎಂದು ಗುರುವಾರ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತು.

'ನರೇಂದ್ರ ಮೋದಿ ಸರ್ಕಾರವು "ತನಿಖಾ ಸಂಸ್ಥೆಗಳ ದುರುಪಯೋಗದ ಮೂಲಕ ತನ್ನ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರ ವಿರುದ್ಧ ಸೇಡಿನ ನಿರಂತರ ಅಭಿಯಾನವನ್ನು ಬಿಚ್ಚಿಟ್ಟಿದೆ" ಎಂದು ಆರೋಪಿಸಿದರು.

ಇದನ್ನೂ ಓದಿ : Work From Home New Rules: ವರ್ಕ್ ಫ್ರಮ್ ಹೋಮ್ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ, ಯಾವ ನೌಕರರಿಗೆ ಇದರಿಂದ ಲಾಭ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News