ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರ ಪೋಟೋ ಮುದ್ರಿಸಿ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಕುಟುಂಬ!

ಮುಸ್ಲಿಂ ಕುಟುಂಬವೊಂದು ತಮ್ಮ ಮಗಳ ಮದುವೆ ಆಮಂತ್ರಣ ಪತ್ರದಲ್ಲಿ ಶ್ರೀಕೃಷ್ಣನ ಫೋಟೊ ಹಾಕುವ ಮುಲಕ ಕೋಮು ಸೌಹಾರ್ದತೆ ಮೆರೆದಿದೆ. 

Last Updated : May 2, 2018, 05:28 PM IST
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರ ಪೋಟೋ ಮುದ್ರಿಸಿ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಕುಟುಂಬ! title=

ಸುಲ್ತಾನ್ ಪುರ: ಉತ್ತರ ಪ್ರದೇಶದ ಸುಲ್ತಾನ್ಪುರ ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ತಮ್ಮ ಮಗಳ ಮದುವೆ ಆಮಂತ್ರಣ ಪತ್ರದಲ್ಲಿ ಶ್ರೀಕೃಷ್ಣನ ಫೋಟೊ ಹಾಕುವ ಮುಲಕ ಕೋಮು ಸೌಹಾರ್ದತೆ ಮೆರೆದಿದೆ. ಸುಲ್ತಾನ್ಪುರದ ಬಾಗ್ ಸರಾಯ್ ಗ್ರಾಮದ ಮೊಹಮ್ಮದ್ ಸಲೀಮ್ ಎಂಬುವರ ತಮ್ಮ ಮಗಳ ವಿವಾಹ ಆಮಂತ್ರಣ ಪತ್ರದಲ್ಲಿ ಹಿಂದೂ ದೇವರ ಫೋಟೊ ಹಾಕಿಸಿದ್ದಾರೆ. 

ಅಷ್ಟೇ ಅಲ್ಲ, ಈ ಆಹ್ವಾನ ಪತ್ರದೊಂದಿಗೆ ಶ್ರೀರಾಮ ಮತ್ತು ಸೀತಾ ಮಾತೆಯ ಚಿತ್ರವಿರುವ ಕ್ಯಾಲೆಂಡರ್ ಅನ್ನೂ ಸಹ ಮುದ್ರಿಸಿ, ಇಡೀ ಗ್ರಾಮದ ನಿವಾಸಿಗಳಿಗೆ ವಿತರಿಸಿದ್ದಾರೆ. ಈ ಬಗ್ಗೆ ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದ್ದು, "ತಮ್ಮ ಹಿಂದೂ ಸಮುದಾಯದ ಸ್ನೇಹಿತರ ಭಾವನೆಗಳನ್ನು ಗೌರವಿಸುವ ಸಲುವಾಗಿ ಹಿಂದೂ ದೇವರ ಫೋಟೋವನ್ನು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಅಲ್ಲದೆ, ಇದಕ್ಕೆ ವರನ ಮನೆ ಕಡೆಯವರೂ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ" ಎಂದು ಮೊಹಮ್ಮದ್ ಸಲೀಮ್ ಹೇಳಿದ್ದಾರೆ. 

ವರದಿಯ ಪ್ರಕಾರ, ಹಿಂದೂ ದೇವರ ಚಿತ್ರವಿರುವ 350 ಕ್ಕೂ ಹೆಚ್ಚು ವಿವಾಹ ಆಮಂತ್ರಣ ಪತ್ರಗಳನ್ನು ಮತ್ತು 400 ಹೆಚ್ಚು ಸಾಂಪ್ರದಾಯಿಕ ಮುಸ್ಲಿಂ ಶೈಲಿಯ ಆಮಂತ್ರಣ ಪತ್ರಗಳನ್ನು  ಮುದ್ರಿಸಲಾಗಿತ್ತು. ಈ ಕಾರ್ಡ್ಗಳಲ್ಲಿ ಹಿಂದೂ ಧಾರ್ಮಿಕ ಸಂಕೇತಗಳಾದ ಕಳಶ, ಬಾಳೆ ಎಲೆಗಳನ್ನೂ ಮುದ್ರಿಸಲಾಗಿದೆ. 

Trending News