Maharashtra Politics News: ಮಹಾರಾಷ್ಟ್ರದ ರಾಜ್ಯ ರಾಜಕೀಯದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಶಿವಸೇನೆಯ ರಾಜ್ಯ ಘಟಕದ 15 ಮುಖ್ಯಸ್ಥರಲ್ಲಿ 12 ಮಂದಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪಾಳಯಕ್ಕೆ ಬೆಂಬಲ ಘೋಷಿಸಿದ್ದಾರೆ. ಸೆ.15ರ ಗುರುವಾರ ನಡೆದ ಸಭೆಯಲ್ಲಿ 12 ರಾಜ್ಯ ಘಟಕದ ಮುಖ್ಯಸ್ಥರು ಶಿಂಧೆ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಎಲ್ಲಾ ರಾಜ್ಯಗಳ ಮುಖ್ಯಸ್ಥರಿಗೆ ಅವರ ರಾಜ್ಯಗಳಲ್ಲಿ ಪಕ್ಷದ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಈ ರಾಜ್ಯಗಳ ಮುಖ್ಯಸ್ಥರು ಶಿಂಧೆಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ
ದೆಹಲಿ ಶಿವಸೇನೆಯ ರಾಜ್ಯ ಮುಖ್ಯಸ್ಥ ಸಂದೀಪ್ ಚೌಧರಿ, ಮಣಿಪುರ ಮುಖ್ಯಸ್ಥ ತೊಂಬಿ ಸಿಂಗ್, ಮಧ್ಯಪ್ರದೇಶದ ಮುಖ್ಯಸ್ಥ ತಾಡೇಶ್ವರ್ ಮಹಾವಾರ್, ಛತ್ತೀಸ್ಗಢ ಮುಖ್ಯಸ್ಥ ಧನಂಜಯ್ ಪರಿಹಾರ್, ಗುಜರಾತ್ ಮುಖ್ಯಸ್ಥ ಎಸ್.ಆರ್. ಪಾಟೀಲ್, ರಾಜಸ್ಥಾನ ಮುಖ್ಯಸ್ಥ ಲಖನ್ ಸಿಂಗ್ ಪವಾರ್, ಹೈದರಾಬಾದ್ ಮುಖ್ಯಸ್ಥ ಮುರಾರಿ ಅಣ್ಣಾ, ಗೋವಾ ಮುಖ್ಯಸ್ಥ ಜಿತೇಶ್ ಕಾಮತ್, ಕರ್ನಾಟಕ ಮುಖ್ಯಸ್ಥ ಕುಮಾರ್ ಎ ಹಕ್ರಿ, ಪಶ್ಚಿಮ ಬಂಗಾಳದ ಮುಖ್ಯಸ್ಥ ಶಾಂತಿ ದತ್ತಾ, ಒಡಿಶಾ ರಾಜ್ಯ ಉಸ್ತುವಾರಿ ಜ್ಯೋತಿಶ್ರೀ ಪ್ರಸನ್ನ ಕುಮಾರ್, ತ್ರಿಪುರಾ ರಾಜ್ಯ ಉಸ್ತುವಾರಿ ಬರಿವ್ ದೇವ್ ನಾಥ್ ಏಕನಾಥ್ ಶಿಂಧೆ ಅವರಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಶಿಂಧೆ, 'ವಿವಿಧ ರಾಜ್ಯಗಳ ಶಿವಸೇನೆ ಪ್ರಾದೇಶಿಕ ಮುಖ್ಯಸ್ಥರು ಬುಧವಾರ ತಮ್ಮನ್ನು ಭೇಟಿಯಾಗಿದ್ದು, ಅವರೆಲ್ಲರೂ ನಮಗೆ ಬೆಂಬಲ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಶಿವಸೇನೆ ಪಕ್ಷ ಸಂಘಟನೆ ವಿಸ್ತರಣೆ ಕುರಿತು ವ್ಯಾಪಕ ಚರ್ಚೆ ನಡೆದಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ-Gulam Nabi Azad ಬಳಿಕ ಇದೀಗ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆಯೇ ಕರಣ್ ಸಿಂಗ್?
ಶಿವಸೇನೆಯಲ್ಲಿ ಬಂಡಾಯದ ನೇತೃತ್ವ ವಹಿಸಿದ್ದ ಶಿಂಧೆ
ಶಿಂಧೆ ಅವರು ಈ ವರ್ಷದ ಜೂನ್ನಲ್ಲಿ ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯ ಎಂದಿದ್ದರು, ಇದರ ಪರಿಣಾಮವಾಗಿ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಎಂವಿಎ ಸರ್ಕಾರ ಪತನವಾಗಿದೆ. ಇದಾದ ಬಳಿಕ ಶಿವಸೇನೆಯ ಬಂಡಾಯ ಶಾಸಕರು ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ್ದರು. ಜೂನ್ನಲ್ಲಿ ಶಿಂಧೆ ಮುಖ್ಯಮಂತ್ರಿಯಾಗಿ ಮತ್ತು ಬಿಜೆಪಿಯ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಇದನ್ನೂ ಓದಿ-Punjab Politics : ಬಿಜೆಪಿಯೊಂದಿಗೆ ವಿಲೀನವಾಗಲಿದೆ ಕ್ಯಾ. ಅಮರಿಂದರ್ ಸಿಂಗ್ ಪಾರ್ಟಿ!
ಇದಾದ ಬಳಿಕ ಪಕ್ಷಾಂತರ, ವಿಲೀನ ಮತ್ತು ಅನರ್ಹತೆಗೆ ಸಂಬಂಧಿಸಿದ ಹಲವು ಸಾಂವಿಧಾನಿಕ ಪ್ರಶ್ನೆಗಳನ್ನು ಎತ್ತುವ ಮೂಲಕ ಶಿವಸೇನೆ ಮತ್ತು ಸಿಎಂ ಏಕನಾಥ್ ಶಿಂಧೆ ಬಣಗಳು ಪರಸ್ಪರರ ವಿರುದ್ಧ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಐವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.