ಮತ್ತೆ ಮುಲಾಯಂಗೆ ಸಿಗದ ಮನ್ನಣೆ, ಅಪರ್ಣ ಯಾದವ್'ಗಿಲ್ಲ ಟಿಕೆಟ್!

ಈ ಬಾರಿ ಚುನಾವಣೆಯಲ್ಲಿ ಯಾದವ್ ಕುಟುಂಬದ ಈ ಸದಸ್ಯರೂ ಕಣದಲ್ಲಿರುತ್ತಾರೆ ಎಂದು ಹೇಳಲಾಗುತ್ತಿತ್ತು.

Last Updated : Mar 15, 2019, 04:29 PM IST
ಮತ್ತೆ ಮುಲಾಯಂಗೆ ಸಿಗದ ಮನ್ನಣೆ, ಅಪರ್ಣ ಯಾದವ್'ಗಿಲ್ಲ ಟಿಕೆಟ್! title=

ಲಕ್ನೋ: ಲೋಕಸಭೆ ಚುನಾವಣೆಗಾಗಿ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸಮಾಜವಾದಿ ಪಕ್ಷವು ಹೈ ವೋಲ್ಟೇಜ್ ಕ್ಷೇತ್ರಗಳಾದ ಕೈರಾನಾ ಮತ್ತು ಸಂಭಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರುಗಳ ಹೆಸರನ್ನು ಪ್ರಕಟಿಸಿದೆ.

ಸಂಭಾಲ್ ಲೋಕಸಭಾ ಕ್ಷೇತ್ರದಿಂದ ಅಪರ್ಣಾ ಯಾದವ್ ಅವರಿಗೆ ಟಿಕೆಟ್ ನೀಡಲು ಮುಲಾಯಂ ಸಿಂಗ್ ಯಾದವ್ ಕೇಳಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಈ ಪಟ್ಟಿಯ ಬಿಡುಗಡೆಯಿಂದ ಎಸ್​ಪಿ ಅಖಿಲೇಶ್ ಯಾದವ್ ಅವರು ಮತ್ತೆ ಮುಲಾಯಂ ಸಿಂಗ್ ಯಾದವ್ ಅವರ ಬೇಡಿಕೆಗೆ ಮನ್ನಣೆ ನೀಡಿಲ್ಲ ಎಂಬ ಸತ್ಯ ಬಯಲಾಗಿದೆ. 

ಈ ಬಾರಿ ಚುನಾವಣೆಯಲ್ಲಿ ಯಾದವ್ ಕುಟುಂಬದ ಈ ಸದಸ್ಯರೂ ಕಣದಲ್ಲಿರುತ್ತಾರೆ ಎಂದು ಹೇಳಲಾಗುತ್ತಿತ್ತು. ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಮುಲಾಯಂ ಸಿಂಗ್ ಯಾದವ್ ಅವರು ಅಖಿಲೇಶ್ ಯಾದವ್ ಅವರಿಗೆ ಸಂಭಾಲ್ ಕ್ಷೇತ್ರದಿಂದ ಅಪರ್ಣಾ ಯಾದವ್ ಹೆಸರನ್ನು ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಆದರೆ ಮುಲಾಯಂ ಅವರ ಶಿಫಾರಸ್ಸನ್ನು ಬದಿಗೊತ್ತಿರುವ  ಅಖಿಲೇಶ್ ಯಾದವ್ ಸಂಭಾಲ್ ಲೋಕಸಭಾ ಕ್ಷೇತ್ರದಿಂದ ಶಫಿಕುರ್ ರಹಮಾನ್ ಬರ್ಕ್ ರನ್ನು ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

ಇಲ್ಲಿಯವರೆಗೆ 15 ಹೆಸರುಗಳ ಘೋಷಣೆ:
ಎಸ್​ಪಿ ಈವರೆಗೂ 15 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಮೊದಲಿಗೆ ಮೂರು ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದ ಎಸ್​ಪಿ ಆ ಪಟ್ಟಿಯಲ್ಲಿ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಹೆಸರನ್ನು ಕೂಡಾ ಸೇರಿಸಿದೆ. ನಂತರದಲ್ಲಿ  6 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು, ಅದರಲ್ಲಿ ಪಕ್ಷದ ಪೋಷಕರಾದ ಮುಲಾಯಂ ಸಿಂಗ್ ಯಾದವ್ ಹೆಸರನ್ನು ಘೋಷಿಸಲಾಗಿದೆ. 

ಕನೌಜ್ ಕ್ಷೇತ್ರದಿಂದ ಡಿಂಪಲ್ ಯಾದವ್ ಮತ್ತು ಮೇನ್ಪುರಿ ಕ್ಷೇತ್ರದಿಂದ ಮುಲಾಯಂ ಸಿಂಗ್ ಯಾದವ್ ಹೆಸರನ್ನು ಘೋಷಿಸಲಾಗಿದೆ. ಹತ್ರಾಸ್ ಲೋಕಸಭಾ ಕ್ಷೇತ್ರದಿಂದ ರಾಮ್ಜಿ ಲಾಲ್ ಸುಮನ್, ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ  ರಾಜೇಂದ್ರ ಎಸ್.ವಿಂಡ್, ಫಿರೋಜಾಬಾದ್ ನಿಂದ ಅಕ್ಷಯ್ ಯಾದವ್, ಬದಾಯುಯಿಂದ ಧರ್ಮೇಂದ್ರ ಯಾದವ್, ಇಟಾವಾ ಯಿಂದ ಕಮಲೇಶ್ ಕ್ಯಾಥೆರಿಯಾ, ರೋಬರ್ಟ್ ಸಂಗಜ್ ನಿಂದ ಭಿಲಾಲ್ ಕೋಲ್, ಬಹ್ರಾಯಿಚ್ ನಿಂದ ಶಬ್ಬೀರ್ ಬಾಲ್ಮೀಕಿ, ಲಖಿಮ್ಪುರ್ ಖೀರ್ ನಿಂದ ಪೂರ್ವ ವರ್ಮಾ, ಹರ್ದಾಯ್ ನಿಂದ ಉಷಾ ವರ್ಮಾ, ಕೈರಾನಾ ಕ್ಷೇತ್ರದಿಂದ  ತಬಾಸುಂ ಹಸನ್, ಗೊಂಡಾ ಕ್ಷೇತ್ರದಿಂದ ಪಂಡಿತ್ ಸಿಂಗ್, ಬರಾಬಂಕಿ ಕ್ಷೆತ್ರದಿಡ್ನ ರಾಮ್ ಸಾಗರ್ ರಾವತ್, ಸಂಭಾಲ್ ಕ್ಷೇತ್ರದಿಂದ ಶಫಿಕುರ್ ರಹಮಾನ್ ಬರ್ಕ್ ಅವರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.

Trending News