Corona Vaccination: ಬೇಗ ಲಸಿಕೆ ಹಾಕಿಸಿಕೊಂಡು ಚಿನ್ನ ನಿಮ್ಮದಾಗಿಸಿ!

Corona Vaccination Latest Update - ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಸರ್ಕಾರ ಆದಷ್ಟು ಹೆಚ್ಚಿನ ಜನರಿಗೆ ವ್ಯಾಕ್ಸಿನ್ ಹಾಕಲು ತನ್ನ ಪ್ರಯತ್ನ ಮುಂದುವರೆಸಿದೆ.

Written by - Nitin Tabib | Last Updated : Apr 6, 2021, 09:43 PM IST
  • ವೇಗ ಪಡೆದುಕೊಂಡ ಕೊರೊನಾ ವ್ಯಾಕ್ಸಿನೆಶನ್ ಅಭಿಯಾನ.
  • ಈ ಅಭಿಯಾನದ ನಡುವೆಯೇ ಗುಜರಾತ್ ನಲ್ಲಿ ನಡೆಯುತ್ತಿದೆ ಮತ್ತೊಂದು ಅಭಿಯಾನ .
  • ಹೆಚ್ಚಿನ ಸಂಖ್ಯೆಯಲ್ಲಿ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂಬುದೇ ಈ ಅಭಿಯಾನದ ಉದ್ದೇಶ.
Corona Vaccination: ಬೇಗ ಲಸಿಕೆ ಹಾಕಿಸಿಕೊಂಡು ಚಿನ್ನ ನಿಮ್ಮದಾಗಿಸಿ! title=
Corona Vaccination Latest Update (File Photo)

ನವದೆಹಲಿ: Corona Vaccination Latest Update - ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಸರ್ಕಾರ ಆದಷ್ಟು ಹೆಚ್ಚಿನ ಜನರಿಗೆ ವ್ಯಾಕ್ಸಿನ್ ಹಾಕಲು ತನ್ನ ಪ್ರಯತ್ನ ಮುಂದುವರೆಸಿದೆ. ಪ್ರಸ್ತುತ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು, 45 ಕ್ಕಿಂತ ಮೇಲ್ಪಟ್ಟವರು ಲಸಿಕೆ (Covid-19) ಹಾಕಿಸಿಕೊಳ್ಳಲು ಸರ್ಕಾರ ಮನವಿ ಮಾಡುತ್ತಿದೆ. ಹೀಗಾಗಿ ದೇಶಾದ್ಯಂತ ಲಸಿಕಾಕರ ಅಭಿಯಾನ (Corona Vaccination) ಭರದಿಂದ ಸಾಗಿದೆ ಮಾತು ಇದುವರೆಗೆ ಸುಮಾರು ಎಂಟು ಕೋಟಿಗೂ ಅಧಿಕ ಜನರಿಗೆ ವ್ಯಾಕ್ಸಿನ್ ಹಾಕಿಸಲಾಗಿದೆ. ಏತನ್ಮಧ್ಯೆ ಗುಜರಾತ್ ನ ರಾಜಕೋಟನಲ್ಲಿ ಜನರಿಗೆ ನೋಸ್ ಪಿನ್ (ಒಂದು ಪ್ರಕಾರದ ಮೂಗುತಿ) ನೀಡಲಾಗುತ್ತಿದೆ. 

ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನರು ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ರಾಜಕೊಟ್ ನಲ್ಲಿ ಮಹಿಳೆಯರಿಗೆ ನೋಸ್ ಪಿನ್ (Gold Nose Pin) ಹಾಗೂ ಪುರುಷರಿಗೆ ಹ್ಯಾಂಡ್ ಬ್ಲಾಂಡರ್ ನೀಡಲಾಗುತ್ತಿದೆ. ಒಟ್ಟು 751 ಮಹಿಳೆಯರಿಗೆ ನೋಸ್ ಪಿನ್ ನೀಡಲಾಗಿದ್ದರೆ, 580 ಪುರುಷರಿಗೆ ಹ್ಯಾಂಡ್ ಬ್ಲಾಂಡರ್ಸ್ ವಿತರಿಸಲಾಗಿದೆ!

ಇದನ್ನೂ ಓದಿ- Hapatitis ಲಸಿಕೆಯಿಂದ Corona ಚಿಕಿತ್ಸೆ ಸಾಧ್ಯ? DCGI ಅನುಮತಿ ಕೋರಿದ Zydus Cadila

ಆಂಗ್ಲ ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ರಾಜಕೊಟ್ ನ ಆಭರಣ ಸಮುದಾಯ ಜನರಿಗೆ ಈ ಗಿಫ್ಟ್ ನೀಡುವ ಅಭಿಯಾನ ಆರಂಭಿಸಿದೆ. ನಗರದ ಸೋನಿ ಬಜಾರ್ ನಲ್ಲಿರುವ ಕಿಶೋರ್ ಸಿಂಹಜಿ ಪ್ರೈಮರಿ ಸ್ಕೂಲ್ ನಲ್ಲಿ ನಡೆಸಲಾಗುತ್ತಿರುವ ವ್ಯಾಕ್ಸಿನೆಶನ್ ಕ್ಯಾಂಪ್ ನಲ್ಲಿ ಜನರಿಗೆ ಈ ಉಡುಗೊರೆಯನ್ನು ಕಮ್ಯೂನಿಟಿ ನೀಡುತ್ತಿದೆ. ಈ ಉಡುಗೊರೆಗಳಲ್ಲಿ ನೋಸ್ ಪಿನ್ ಹಾಗೂ ಹ್ಯಾಂಡ್ ಬ್ಲಾಂಡರ್ ಗಳು ಶಾಮೀಲಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಕ್ಯಾಂಪ್ ಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬುದೇ ಈ ಅಭಿಯಾನದ ಹಿಂದಿನ ಉದ್ದೇಶವಾಗಿದೆ.

ಇದನ್ನೂ ಓದಿ-O+ve ಬ್ಲಡ್ ಗ್ರೂಪ್ ಇರುವವರಿಗೆ ಕೊರೊನಾ ಸೋಂಕು ಹಾನಿ ಮಾಡುವುದಿಲ್ಲವೇ? ತಜ್ಞರ ಅಭಿಮತ ಇಲ್ಲಿದೆ

ಇತರ ರಾಜ್ಯಗಳಂತೆ ಗುಜರಾತ್ ನಲ್ಲಿಯೂ ಕೂಡ ಕೊರೊನಾ ವೈರಸ್ (Coronavirus) ನ ಹೊಸ ಪ್ರಕರಣಗಳು ತುಂಬಾ ವೇಗವಾಗಿ ಹರಡುತ್ತಿವೆ. ಕಳೆದ ಒಂದು ದಿನದಲ್ಲಿ ಒಟ್ಟು 3160 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ ಹಾಗೂ 15 ಜನರು ಈ ಮಾರಕ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಈ ಅವಧಿಯಲ್ಲಿ 2000 ಕ್ಕಿಂತ ಹೆಚ್ಚಿನ ಜನರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ರಾಜಕೊಟ್ ಕುರಿತು ಹೇಳುವುದಾದರೆ ಕಳೆದ 24ಗಂಟೆಗಳಲ್ಲಿ ಅಲ್ಲಿ ಒಟ್ಟು 283 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಇದನ್ನೂ ಓದಿ- Sputnik-5 ಲಸಿಕೆಯ ತುರ್ತುಬಳಕೆಗೆ ಶೀಘ್ರವೇ ಭಾರತ ಅನುಮತಿ ನೀಡುವ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News