ಮನೆಗೆ ಬೆಂಕಿ ತಗುಲಿ ಮಗು ಸೇರಿ ಒಂದೇ ಕುಟುಂಬದ ಐವರು ಸಜೀವ ದಹನ

  ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ  .  ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಎರಡು ಅಂತಸ್ತಿನ ಕಟ್ಟಡದ ಕಾರ್ ಗ್ಯಾರೇಜ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ ಎಂದು  ಸ್ಥಳೀಯರು  ತಿಳಿಸಿದ್ದಾರೆ. 

Written by - Ranjitha R K | Last Updated : Mar 8, 2022, 10:39 AM IST
  • ಒಂದೇ ಕುಟುಂಬದ ಐವರು ಸಜೀವ ದಹನ
  • ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ
  • ಬದುಕುಳಿದ ಒಬ್ಬನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
 ಮನೆಗೆ ಬೆಂಕಿ ತಗುಲಿ ಮಗು ಸೇರಿ ಒಂದೇ ಕುಟುಂಬದ ಐವರು ಸಜೀವ ದಹನ  title=
ಒಂದೇ ಕುಟುಂಬದ ಐವರು ಸಜೀವ ದಹನ

ತಿರುವನಂತಪುರಂ : ವರ್ಕಳದಲ್ಲಿ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ  ಐವರು ಸಜೀವ ದಹನವಾಗಿರುವ ಘಟನೆ ನಡೆದಿದೆ (fire accident five death). ದುರ್ಘಟನೆಯಲ್ಲಿ ಒಂದು ಪುಟ್ಟ ಮಗು ಕೂಡಾ ಸೇರಿದೆ.  ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಪ್ರತಾಪ್ (62),  ಶೆರ್ಲಿ (53),  ಅಖಿಲ್ (29),  ಅಭಿರಾಮಿ (25) ಮತ್ತು ನಿಖಿಲ್ ಮತ್ತು ಅಭಿರಾಮಿ ಅವರ ಎಂಟು ತಿಂಗಳ ಮಗು  ಸೇರಿದಂತೆ ಐದು ಜನರು ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ (fire accident five death). ಪ್ರತಾಪ್ ಅವರ ಹಿರಿಯ ಮಗ ನಿಖಿಲ್ ಅವರಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಇದನ್ನೂ ಓದಿ:  ರಾತ್ರೋರಾತ್ರಿ ಬದಲಾಯಿತು ಬಲೂನ್ ಮಾರುವ ಹುಡುಗಿಯ ಭವಿಷ್ಯ, ಮಾಮೂಲಿ ಹುಡುಗಿ ಸೆಲೆಬ್ರಿಟಿಯಾದ ಕಥೆ

 ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ  (Fire accident).  ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಪ್ರತಾಪನ್ ತರಕಾರಿ ವ್ಯಾಪಾರಿಯಾಗಿದ್ದರು. ಎರಡು ಅಂತಸ್ತಿನ ಕಟ್ಟಡದ ಕಾರ್ ಗ್ಯಾರೇಜ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ ಎಂದು  ಸ್ಥಳೀಯರು  ತಿಳಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿ ತೀವ್ರವಾಗಿ ಹೊತ್ತಿ ಉರಿಯಲು ಆರಂಭವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.   ಗ್ಯಾರೇಜ್ ನಲ್ಲಿದ್ದ ನಾಲ್ಕು ಬೈಕ್‌ಗಳು ಕೂಡಾ ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ (bike fire).  

ಸ್ಥಳೀಯರು ಘಟನೆ ಕುರಿತು ಮಾಹಿತಿ ನೀಡಿದ ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಡಿಸುವ ಕಾರ್ಯದಲ್ಲಿ ತೊಡಗಿದೆ. ಮನೆಯ ಗೇಟ್ ಒಳಗಿನಿಂದ ಲಾಕ್ ಆಗಿದ್ದರಿಂದ ಯಾರೂ ಮನೆಗೆ ಪ್ರವೇಶಿಸುವುದು ಕೂಡಾ ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.  

ಇದನ್ನೂ ಓದಿ:  International Women's Day 2022: ಭಾರತದಲ್ಲಿ ಎಲ್ಲಾ ಮಹಿಳೆಯರು ತಿಳಿದಿರಬೇಕಾದ 5 ನಾಗರಿಕ ಹಕ್ಕುಗಳು

ಅಗ್ನಿಶಾಮಕ ದಳ ಮತ್ತು ಪೊಲೀಸರು ಆಗಮಿಸಿ ಮನೆಯಲ್ಲಿದ್ದವರನ್ನು ಸ್ಥಳಾಂತರಿಸುವಷ್ಟರಲ್ಲಿ ಐವರೂ ಮೃತಪಟ್ಟಿದ್ದರು. ನಿಖಿಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಖಿಲ್ ಹೇಳಿಕೆಯ  ನಂತರವಷ್ಟೇ ಘಟನೆಗೆ ನಿಖರವಾದ ಕಾರಣ ತಿಳಿಯಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News