Farmers unions: ಪಂಚ ರಾಜ್ಯ​ಗಳ ಎಲೆಕ್ಷನ್ ನಲ್ಲಿ ಬಿಜೆಪಿ ವಿರುದ್ಧ ರೈತರ ರಣ​ಕ​ಹ​ಳೆ!

ಪಂಚ ರಾಜ್ಯ​ಗಳ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಬಿಜೆ​ಪಿ​ಯನ್ನು ಸೋಲಿ​ಸಲು ಕರೆ ನೀಡು​ವು​ದಾಗಿ ಗುಡು​ಗಿ​ದ್ದಾರೆ.

Last Updated : Mar 3, 2021, 07:30 PM IST
  • ನೂತನ 3 ಕೃಷಿ ಕಾಯ್ದೆ​ಗ​ಳನ್ನು ಹಿಂಪ​ಡೆ​ಯದ ಕೇಂದ್ರ ಸರ್ಕಾ​ರದ ವಿರುದ್ಧ ಆಕ್ರೊಶಗೊಂಡಿರುವ ರೈತ ಹೋರಾ​ಟ​ಗಾ​ರರು
  • ಪಂಚ ರಾಜ್ಯ​ಗಳ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಬಿಜೆ​ಪಿ​ಯನ್ನು ಸೋಲಿ​ಸಲು ಕರೆ ನೀಡು​ವು​ದಾಗಿ ಗುಡು​ಗಿ​ದ್ದಾರೆ.
  • ಬಿಜೆ​ಪಿ​ಯನ್ನು ಸೋಲಿ​ಸಲು ಸಮ​ರ್ಥ​ವಿ​ರುವ ಯಾವುದೇ ಪಕ್ಷದ ಅಭ್ಯ​ರ್ಥಿಗೆ ಮತ ಹಾಕು​ವಂತೆ ಕೇಳಿ​ಕೊ​ಳ್ಳು​ತ್ತೇವೆ.
Farmers unions: ಪಂಚ ರಾಜ್ಯ​ಗಳ ಎಲೆಕ್ಷನ್ ನಲ್ಲಿ ಬಿಜೆಪಿ ವಿರುದ್ಧ ರೈತರ ರಣ​ಕ​ಹ​ಳೆ! title=

ನವ​ದೆ​ಹ​ಲಿ: ನೂತನ 3 ಕೃಷಿ ಕಾಯ್ದೆ​ಗ​ಳನ್ನು ಹಿಂಪ​ಡೆ​ಯದ ಕೇಂದ್ರ ಸರ್ಕಾ​ರದ ವಿರುದ್ಧ ಆಕ್ರೊಶಗೊಂಡಿರುವ ರೈತ ಹೋರಾ​ಟ​ಗಾ​ರರು, ಪಂಚ ರಾಜ್ಯ​ಗಳ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಬಿಜೆ​ಪಿ​ಯನ್ನು ಸೋಲಿ​ಸಲು ಕರೆ ನೀಡು​ವು​ದಾಗಿ ಗುಡು​ಗಿ​ದ್ದಾರೆ. ಏತ​ನ್ಮಧ್ಯೆ, ವಿವಿಧ ಬೆಳೆ​ಗ​ಳಿಗೆ 1000 ರು.ಗಿಂತ ಕಡಿಮೆ ಬೆಂಬಲ ಬೆಲೆ ನೀಡು​ತ್ತಿ​ರುವ ಕರ್ನಾ​ಟ​ಕಕ್ಕೂ ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡರು ಭೇಟಿ ನೀಡಿ, ಈ ಬಗ್ಗೆ ರೈತ​ರಿಗೆ ಅರಿವು ಮೂಡಿ​ಸ​ಲಿ​ದ್ದಾರೆ ಎಂದು ಸಂಯು​ಕ್ತ ಕಿಸಾನ್‌ ಮೋರ್ಚಾ(ಎಸ್‌​ಕೆ​ಎಂ) ಮುಖಂಡ ಯೋಗೇಂದ್ರ ಯಾದವ್‌ ತಿಳಿ​ಸಿ​ದ್ದಾರೆ.

ಈ ಸಂಬಂಧ ಮಂಗ​ಳ​ವಾರ ಮಾತ​ನಾ​ಡಿದ ಎಸ್‌​ಕೆ​ಎಂ ಮುಖಂಡ ರಾಜೇ​ವಾಲ್‌, ‘ಚುನಾವಣೆ(Election) ನಿಗ​ದಿ​ಯಾ​ಗಿ​ರುವ 5 ರಾಜ್ಯ​ಗ​ಳಿಗೆ ನಮ್ಮ ಪ್ರತಿ​ನಿ​ಧಿ​ಗ​ಳನ್ನು ಕಳು​ಹಿ​ಸು​ತ್ತೇವೆ. ಆದರೆ ನಾವು ಇಂಥದ್ದೇ ಪಕ್ಷಕ್ಕೆ ಮತ ಹಾಕು​ವಂತೆ ರೈತ​ರಿಗೆ ಕೋರಿ​ಕೊ​ಳ್ಳಲ್ಲ. ಬದ​ಲಾಗಿ ಬಿಜೆ​ಪಿ​ಯನ್ನು ಸೋಲಿ​ಸಲು ಸಮ​ರ್ಥ​ವಿ​ರುವ ಯಾವುದೇ ಪಕ್ಷದ ಅಭ್ಯ​ರ್ಥಿಗೆ ಮತ ಹಾಕು​ವಂತೆ ಕೇಳಿ​ಕೊ​ಳ್ಳು​ತ್ತೇವೆ. ತನ್ಮೂ​ಲಕ ರೈತ​ರಿಗೆ ಮರಣ ಶಾಸ​ನ​ವಾ​ಗ​ಲಿರುವ ನೂತನ 3 ಕೃಷಿ ಕಾಯ್ದೆ ಹಿಂಪ​ಡೆ​ಯದ ಕೇಂದ್ರದ ಬಿಜೆಪಿ ಸರ್ಕಾ​ರಕ್ಕೆ ಪಾಠ ಕಲಿ​ಸು​ವು​ದಾ​ಗಿ’ ಹೇಳಿ​ದ್ದಾರೆ.

LPG ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣನಾ? ಅಲ್ಲದಿದ್ದರೆ ಮತ್ತೇನು?

ದಿಲ್ಲಿ ಗಡಿ​ಗ​ಳಲ್ಲಿ ರೈತರ ಪ್ರತಿ​ಭ​ಟ​ನೆ(Farmers Protest)ಗೆ 100 ದಿನ ತುಂಬ​ಲಿ​ರುವ ಕಾರಣ ಮಾ.6ರಂದು ಕೆಎಂಪಿ ಹೆದ್ದಾ​ರಿ​ಯನ್ನು 5 ಗಂಟೆ​ಗಳ ಕಾಲ ತಡೆ​ಯ​ಲಾ​ಗು​ತ್ತದೆ. ಮಹಿಳಾ ದಿನಾ​ಚ​ರ​ಣೆ​ಯಾದ ಮಾ.8ರಂದು ಮಹಿಳಾ ಪ್ರತಿ​ಭ​ಟ​ನಾ​ಕಾ​ರರೇ ದಿಲ್ಲಿ ಗಡಿ​ಗ​ಳಲ್ಲಿ ಪ್ರತಿ​ಭ​ಟನೆ ನೇತೃತ್ವ ವಹಿ​ಸ​ಲಿ​ದ್ದಾರೆ. ಮಾ.12ರಂದು ರೈತ ಮುಖಂಡರು ಕೋಲ್ಕ​ತಾಗೆ ತೆರಳಿ ಬಿಜೆಪಿ ಮತ ಹಾಕ​ದಂತೆ ಪ್ರಚಾರ ನಡೆ​ಸ​ಲಿ​ದ್ದಾರೆ ಎಂದು ತಿಳಿ​ಸಿ​ದರು.

Viral Photo: ಶರ್ಟ್-ಪ್ಯಾಂಟ್ ಧರಿಸಿ, ತಲೆಗೆ ರುಮಾಲು ಸುತ್ತಿ, ಟಕ್ ನಲ್ಲಿ ಬೀದಿಗಿಳಿದ ಗಜರಾಜನ ಗಾಂಭೀರ್ಯ ನಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News