Coronavirus In India Update: ಕಠಿಣವಾಗುತ್ತಿದೆ ಕೊರೊನಾ ಸ್ಥಿತಿ, ಮುಂದಿನ 1-2 ವರ್ಷ ಎಚ್ಚರಿಕೆ ವಹಿಸುವ ಅಗತ್ಯ, ತಜ್ಞರ ಎಚ್ಚರಿಕೆ

Covid-19 In India - ಭಾರತದಲ್ಲಿ ಕೊರೊನಾ ಸ್ಥಿತಿಯ ಕುರಿತು ಮಾತನಾಡಿರುವ AIIMSನಲ್ಲಿನ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ನೀರಜ್ ನಿಶ್ಚಲ್, 'ದೇಶದಲ್ಲಿ ಸಂತೋಷವನ್ನು ಹಂಚಿಕೊಳ್ಳುವುದು ಹಬ್ಬಗಳ ಉದ್ದೇಶ. ಆದರೆ, ಕೊರೊನಾ ಅಲ್ಲ. ಮುಂದಿನ 1-2 ವರ್ಷಗಳವರೆಗೆ ಅದರಲ್ಲೋ ವಿಶೇಷವಾಗಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುವವರೆಗೆ, ನಾವು ಮಹಾಮಾರಿ ಹರಡಲು ಮತ್ತೆ ಕಾರಣವಾಗಬಾರದು' ಎಂದಿದ್ದಾರೆ.

Written by - Nitin Tabib | Last Updated : Jul 19, 2021, 07:52 PM IST
  • ಭಾರತದಲ್ಲಿನ ಕೊರೊನಾ ಸ್ಥಿತಿಯ ಕುರಿತು ಎಚ್ಚರಿಕೆ ನೀಡಿದ AIIMS ಪ್ರಾಧ್ಯಾಪಕರು.
  • ಮುಂದಿನ 1 ರಿಂದ 2 ವರ್ಷಗಳ ಕಾಲ ಜಾಗ್ರತೆಯಿಂದ ಇರಬೇಕು.
  • ಹಬ್ಬಗಳು ಸಂತೋಷ ಹಂಚಿಕೊಳ್ಳುವುದಕ್ಕಾಗಿ ಇರುತ್ತವೆ, ಕೊರೊನಾ ಹಂಚಿಕೊಳ್ಳಲು ಅಲ್ಲ ಎಂದ ವೈದ್ಯ.
Coronavirus In India Update: ಕಠಿಣವಾಗುತ್ತಿದೆ ಕೊರೊನಾ ಸ್ಥಿತಿ, ಮುಂದಿನ 1-2 ವರ್ಷ ಎಚ್ಚರಿಕೆ ವಹಿಸುವ ಅಗತ್ಯ, ತಜ್ಞರ ಎಚ್ಚರಿಕೆ title=
Coronavirus Situation In India (File Photo)

ನವದೆಹಲಿ: Coronavirus Situation In India - ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ, ಕರೋನಾ ಸಾಂಕ್ರಾಮಿಕದ ಎರಡನೇ ಅಲೆ ಸದ್ಯಕ್ಕೆ ನಿಂತುಹೋದಂತೆ ತೋರುತ್ತಿದೆ. ಆದರೆ ಇದು ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ನಾವು ವಿಶ್ವದ ಅಂಕಿಅಂಶಗಳನ್ನು ನೋಡಿದರೆ, ಪ್ರತಿದಿನ ಐದಾರು ಲಕ್ಷ ಹೊಸ ರೋಗಿಗಳು ಇನ್ನೂ ಪತ್ತೆಯಾಗುತ್ತಿವೆ ಮತ್ತು ಕರೋನಾದಿಂದ ಎಂಟೂವರೆ ಸಾವಿರ ಸಾವುಗಳು ಸಂಭವಿಸುತ್ತಿವೆ. ಒಂದು ಕಡೆ ಕರೋನದ ಭಯವಿದೆ ಮತ್ತು ಮತ್ತೊಂದೆಡೆ ಹಬ್ಬದ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಜನಸಮೂಹವು ಆರೋಗ್ಯ ತಜ್ಞರ ಕಳವಳ ಹೆಚ್ಚಿಸಿದೆ. ಮುಂದಿನ ಒಂದರಿಂದ ಎರಡು ವರ್ಷಗಳವರೆಗೆ ದೇಶಾದ್ಯಂತ ಜನರು ಜಾಗರೂಕರಾಗಿರಬೇಕು ಮತ್ತು ಕರೋನಾ ವೈರಸ್ ಕಾಯಿಲೆ (Covid-19) ಮತ್ತೆ ಸ್ಫೋಟಗೊಳ್ಳಲು ಅವಕಾಶ ನೀಡಬಾರದು ಎಂದು ಏಮ್ಸ್ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ನೀರಜ್ ನಿಸ್ಚಲ್ ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ (Coronavirus) ಸ್ಥಿತಿಯ ಕುರಿತು ಮಾತನಾಡಿರುವ AIIMSನಲ್ಲಿನ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ನೀರಜ್ ನಿಶ್ಚಲ್, 'ದೇಶದಲ್ಲಿ ಸಂತೋಷವನ್ನು ಹಂಚಿಕೊಳ್ಳುವುದು ಹಬ್ಬಗಳ ಉದ್ದೇಶ. ಆದರೆ, ಕೊರೊನಾ ಅಲ್ಲ. ಮುಂದಿನ 1-2 ವರ್ಷಗಳವರೆಗೆ ಅದರಲ್ಲೋ ವಿಶೇಷವಾಗಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುವವರೆಗೆ, ನಾವು ಮಹಾಮಾರಿ ಹರಡಲು ಮತ್ತೆ ಕಾರಣವಾಗಬಾರದು' ಎಂದಿದ್ದಾರೆ. ಮುಂದಿನ 100 ರಿಂದ 125 ಹೋರಾಟ ಕೊರೊನಾ ವಿರುದ್ಧದ ನಿರ್ಣಾಯಕ ಹೋರಾಟ ಎಂದು ಕೇಂದ್ರ ಸರ್ಕಾರ ನೀಡಿರುವ ಎಚ್ಚರಿಕೆಯ ಹಿನ್ನೆಲೆ ಏಮ್ಸ್ ಪ್ರಾಧ್ಯಾಪಕರು ನೀಡಿರುವ ಈ ಎಚ್ಚರಿಕೆ ಭಾರಿ ಮಹತ್ವಪಡೆದುಕೊಂಡಿದೆ.

ಇದನ್ನೂ ಓದಿ- Monkey Pox: 20 ವರ್ಷಗಳಲ್ಲಿ ಮೊದಲ ಬಾರಿಗೆ ಯುಎಸ್ ನಲ್ಲಿ ಮಂಕಿ ಪಾಕ್ಸ್ ಪ್ರಕರಣ ವರದಿ

ಈ ಕುರಿತು ಶುಕ್ರವಾರ ಮಾತನಾಡಿದ್ದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ವಿ.ಕೆ ಪಾಲ್, ದೇಶದ ಒಟ್ಟು ಜನಸಂಖ್ಯೆಯ ಒಂದು ದೊಡ್ಡ ಭಾಗ ಇನ್ನೂ ಕೂಡ ಕೊರೊನಾ ಸೋಂಕಿನ ದೃಷ್ಟಿಯಿಂದ ಸೂಕ್ಷ್ಮವಾಗಿದೆ. ಹೀಗಾಗಿ ಮೂರನೇ ಅಲೆಯ ಕುರಿತು ಪದೇ ಪದೇ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ವಿಶ್ವಾದ್ಯಂತ ಕೊರೊನಾ ವೈರಸ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ ಪ್ರಕರಣಗಳ ಸಂಖ್ಯೆ 5 ಲಕ್ಷದ ಗಡಿದಾಟಿದೆ. ಈ ಅಂಕಿ-ಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು WHO ಕೂಡ ಸ್ಥಿತಿ ಸರಿಯಾಗಿ ಹಾಳಾಗುತ್ತಿದ್ದು, ಇದು ಮೂರನೇ ಅಲೆಯ ಸಂಕೇತಗಳನ್ನು ನೀಡುತ್ತಿದೆ ಎಂದಿತ್ತು ಎಂದು ಅವರು ಉಲ್ಲೇಖಿಸಿದ್ದರು.

ಇದನ್ನೂ ಓದಿ-ಅಗಸ್ಟ್ ಅಂತ್ಯಕ್ಕೆ ಕೊರೊನಾ ಮೂರನೇ ಅಲೆ..!

ಒಂದು ವೇಳೆ ಜನರು ಕೊವಿಡ್ (Covid-19) ಗೆ ಅನುಗುಣವಾಗಿ ತಮ್ಮ ನಡುವಳಿಕೆಯನ್ನು ಅನುಸರಿಸಿದರೆ  ಹಾಗೂ ತಮ್ಮ ಜವಾಬ್ದಾರಿಯನ್ನು  ಸರಿಯಾಗಿ ಪಾಲಿಸಿದರೆ, ಮೂರನೇ ಅಲೆ ಬರುವುದಿಲ್ಲ ಅಥವಾ ಅದರ ಪ್ರಭಾವವನ್ನು ಹತೋಟಿಗೆ ತರಬಹುದು. ಆದರೂ, ಕೂಡ ಮುಂದಿನ 100-125 ದಿನಗಳು ಅಂದರೆ ಮುಂದಿನ ನಾಲ್ಕು ತಿಂಗಳು ನಿರ್ಣಾಯಕವಾಗಲಿದ್ದು, ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎಂದು ಡಾ. ಪಾಲ್ ಹೇಳಿದ್ದರು.

ಇದನ್ನೂ ಓದಿ-How To Check BP At Home: ಎರಡು ಭುಜಗಳಲ್ಲಿನ BP ಅಂತರ ಅಪಾಯದ ಸಂಕೇತವೇ? ತಜ್ಞರು ಹೇಳುವುದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News