ಜಮ್ಮು: ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ದೇಶವನ್ನೇ ಲೂಟಿ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಜನತೆಗೆ ಹಲವು ಯೋಜನೆಗಳನ್ನು ಒದಗಿಸಿದೆ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದೆ ಎಂದು ಬಿಜೆಪಿ ನಾಯಕ ಅವಿನಾಶ್ ರಾಯ್ ಖನ್ನಾ ಹೇಳಿದ್ದಾರೆ.
ಇಲ್ಲಿನ ಉದ್ಧಮ್ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸರ್ಧಿಸುತ್ತಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಖನ್ನಾ, ಕಾಂಗ್ರೆಸ್ ಸರ್ಕಾರದ ಬಹುಕೋಟಿ ರೂಪಾಯಿಗಳ ಹಗರಣಗಳು ಮತ್ತು ಪ್ರಸ್ತುತ ಬಿಜೆಪಿ ಸರ್ಕಾರದ ಬಹುವರ್ಗಗಳಿಗೆ ಜಾರಿ ಮಾಡಿರುವ ಯೋಜನೆಗಳನ್ನು ತುಲನಾತ್ಮಕವಾಗಿ ಪರಿಶೀಲಿಸುವಂತೆ ಹೇಳಿದರು.
"ಬಿಜೆಪಿ 2014 ರಲ್ಲಿ ಕೇಂದ್ರದಲ್ಲಿ ತನ್ನ ಸರ್ಕಾರವನ್ನು ರಚಿಸಿತು. ಕಳೆದ ಐದು ವರ್ಷಗಳಲ್ಲಿ, ಮುದ್ರಾ ಬ್ಯಾಂಕ್ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಆಯುಶ್ಮಾನ್ ಭಾರತ್ ಯೋಜನೆ, ಉಜ್ವಲಾ, ಸುಕಾನ್ಯ ಸಮೃದ್ಧಿ ಯೋಜನೆ ಹೀಗೆ ಎಲ್ಲಾ ವರ್ಗಗಳಿಗೆ ಅನುಕೂಲವಾಗುವಂತೆ ಹಲವು ಯೋಜನೆಗಳನ್ನು ಪ್ರಾರಂಭಿಸಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಗರಣಗಳ ಸರಣಿ ನಡೆಯಿತೇ ಹೊರತು ಜನತೆಗೆ ಅಲ್ಪವೂ ಒಳಿತಾಗಲಿಲ್ಲ ಎಂದು ಹೇಳಿದರು.